ಬೆಂಗಳೂರು, (www.thenewzmirror.com);
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾದಾಗ, ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತ ರೂ.3 ಲಕ್ಷದಿಂದ 10 ಲಕ್ಷಕ್ಕೆ ಏರಿಸಲಾಗಿದೆ. ಜನವರಿ 2024 ರ 1 ರಿಂದಲೇ ಅನ್ವಯವಾಗಲಿದೆ ಎಂದು KSRTC ಮಾಹಿತಿ ನೀಡಿದೆ.
ಇದರ ಜತೆಗೆ ಮೃತರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ಮೊತ್ತ ನೀಡುವ ಸಲುವಾಗಿ 50 ರೂ ಮೊತ್ತದ ಟಿಕೆಟ್ ಪಡೆದರೆ ಹೆಚ್ಚುವರಿ 1 ರೂ ಹಾಗೂ 99 ರೂ ಮುಖ ಬೆಲೆಯ ಟಿಕೆಟ್ ಖರೀದಿ ಮಾಡಿದರೆ ಹೆಚ್ಚುವರಿಯಾಗಿ 2 ರೂ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಿಸೋಕೆ ತೀರ್ಮಾನಿಸಿದ್ದು, ಜನವರಿ 1 ರಿಂದಲೇ ಇದು ಕೂಡ ಜಾರಿಯಾಗಲಿದೆ.
ಈ ಹಿಂದೆ 100 ರೂ ಮುಖ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 1 ರೂ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆ ಮಾಡಲಾಗುತ್ತಿತ್ತು. ಹಾಗನೇ 1 ರೂ ರಿಂದ 49 ರೂ ವರೆಗಿನ ಮೊತ್ತದ ಟಿಕೆಟ್ ಗೆ ಯಾವುದೇ ಅಪಘಾತ ಪರಿಹಾರ ನಿಧಿ ವಂತಿಕೆ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.