ಬೆಂಗಳೂರು, ( www.thenewzmirror.com ) ;
ಪ್ರಯಾಣಿಕರಿಗೆ ಉತ್ತಮ ಸೇವೆ ನೀಡೋದೇ ನಮ್ಮ ಕಾಯಕ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕೆಎಸ್ಸಾರ್ಟಿಸಿ ಇದೀಗ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡ್ತಾ ಇದ್ಯಾ..? ಪ್ರಯಾಣಿಕರ ಜೀವ ಅಂದ್ರೆ ಲೆಕ್ಕನೇ ಇಲ್ವಾ ಅನ್ನೋ ಪ್ರಶ್ನೆ ಇದೀಗ ಉದ್ಭವವಾಗಿದೆ. ದಿ ನ್ಯೂಝ್ ಮಿರರ್ ಗೆ ಸಿಕ್ಕಿರೋ ಒಂದು ಘಟನೆ ಇಂಥ ಪ್ರಶ್ನೆಯನ್ನ ಆಡಳಿತ ವರ್ಗ ಹಾಗೂ ಸರ್ಕಾರವನ್ನ ಮಾಡುವಂತೆ ಮಾಡಿದೆ.
ಸಾಮಾನ್ಯವಾಗಿ ಕೆಎಸ್ಸಾರ್ಟಿಸಿ ಬಸ್ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುತ್ತೆ ಅಂದ್ರೆ ಮದ್ಯದಲ್ಲಿ ಪ್ರಯಾಣಿಕರಿಗೆ ರಿರ್ಫೆಶ್ ಆಗೋಕೆ ಅಂತ ಗುರುತು ಪಡಿಸಿದ ಹೊಟೇಲ್ ನಲ್ಲಿ ನಿಲ್ಲಿಸುತ್ತೆ. ಈ ಹೊಟೇಲ್ ನಲ್ಲಿ ಪ್ರಯಾಣಿಕರು ಶೌಚಾಲಯಕ್ಕೆ ಹೋಗುವವರು, ಹೊಟ್ಟೆ ಹಸಿದಿದ್ರೆ ಊಟ ಮಾಡಿಕೊಳ್ಳೋಕೆ ಹಾಗೂ ಕೊಂಚ ವಿಶ್ರಾಂತಿ ಪಡೆಯೋಕೆ ಅನುಕೂಲವಾಗುತ್ತೆ.
ಬಸ್ ಚಾಲಕ್ರು ನಿಗಮದ ವತಿಯಿಂದ ಸೂಚಿಸಲ್ಪಟ್ಟ ಸ್ಥಳದಲ್ಲೇ ( ಹೊಟೇಲ್ ) ನಿಲುಗಡೆ ಕೊಡಬೇಕು. ಹೀಗೆ ನಿಗಮದ ಆದೇಶ ಪಾಲನೆ ಮಾಡುವ ನೆಪದಲ್ಲಿ ಪ್ರಯಾಣಿಕರ ಜೀವ ಸಂಕಷ್ಟದಲ್ಲಿ ಸಿಲುಕುತಿದ್ಯಾ ಸ್ವಲ್ಪ ಎಚ್ಚರ ತಪ್ಪಿದ್ರೂ ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ನಿಗಧಿತ ಸ್ಥಳ ತಲುಪೋ ಬದಲು ಯಮನ ಪಾದ ಸೇರುವ ಸ್ಥಿತಿ ನಿರ್ಮಾಣವಾದ್ರೂ ಅಚ್ಚರಿ ಪಡಬೇಕಿಲ್ಲ.
ಅಷ್ಟಕ್ಕೂ ನಾವು ಈರೀತಿ ಹೇಳುತ್ತಿರುವದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಕೆಎಸ್ಸಾರ್ಟಿಸಿ ( ಕೆಂಪು ಬಸ್) ಯಲ್ಲಿ ಪ್ರಯಾಣ ಮಾಡುತ್ತಿದ್ದೆ. ಈ ವೇಳೆ ಶಿವಮೊಗ್ಗದಿಂದ 8 ಗಂಟೆಗೆ ಹೊರಟಿದ್ದ ಬಸ್ ತರಿಕೆರೆ ಸಮೀಪ ಒಂದು ಹೊಟೇಲ್ ನಲ್ಲಿ ಊಟಕ್ಕೆ ನಿಲ್ಲಿಸಲಾಗಿತ್ತು. ಆದರೆ ಹೊಟ್ಟೆ ಹಸಿವಿದ್ದರೂ ಊಟ ಮಾಡೋಕೆ ಸ್ವಲ್ಪ ಆತಂಕವಿತ್ತು. ಅದಕ್ಕೆ ಕಾರಣ ಹೊಟೇಲ್ ಪಕ್ಕದಲ್ಲೇ ಹಾದು ಹೋಗಿರುವ ಹೈ ಟೆನ್ಷನ್ ವೈರ್.
ತರೀಕೆರೆ ಸಮೀಪವಿರುವ ಸಿಮ್ಲಾ ಹೊಟೇಲ್ ನಲ್ಲಿ ಊಟಕ್ಕೆ ಸಿಲ್ಲಿಸಿದ ಬಳಿಕ ಬಸ್ ನಿಂದ ಇಳಿದ ನನಗೆ ಆತಂಕವಾಯ್ತು. ಯಾಕಂದರೆ ಬಸ್ ನಿಲ್ಲಿಸಿದ ಕೂಗಳತೆ ಎತ್ತರದಲ್ಲೇ ಹಾದುಹೋಗಿರುವ ಹೈ ಟೆನ್ಷನ್ ವೈರ್. ಹೈಟೆನ್ಷನ್ ವೈರ್ ಅಂದ್ರೆ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪಸರಿಸುತ್ತಾ ಇರುತ್ತೆ. ಅಂದ್ರೆ ಆ ಟೆನ್ಷನ್ ವೈರ್ ನಿಂದ ಕನಿಷ್ಠ 10 ಮೀಟರ್ ಅಂತರ ಅತ್ಯಂತ ಅಪಾಯಕಾರಿ. ಹೀಗಿದ್ದರೂ ಸಿಮ್ಲಾ ಹೊಟೇಲ್ ಮುಂಭಾಗ ಹಾದು ಹೋಗಿರುವ ಹೈ ಟೆನ್ಷನ್ ವೈರ್ ಕೆಳಗಡನೇ ಕೆಸ್ಸಾರ್ಟಿಸಿ ಬಸ್ ಅನ್ನ ನಿಲ್ಲಿಸಲಾಗುತ್ತೆ. ಇದಾದರೂ ಪರವಾಗಿಲ್ಲ, ಆದರೆ ಒಂದು ವೇಳೆ ಐರಾವತ ಮಲ್ಟಿ ಆಕ್ಸಲ್ ಬಸ್ ಏನಾದ್ರೂ ಹೈ ಟೆನ್ಷನ್ ವೈರ್ ಕೆಳಗಡೆ ನಿಲ್ಲಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಹಲವು ವರ್ಷಗಳಿಂದ ಇದೇ ಹೊಟೇಲ್ ನಲ್ಲಿ ಶಿವಮೊಗ್ಗ ಬೆಂಗಳೂರು ಮಾರ್ಗವಾಗಿ ಸಂಚಾರ ಮಾಡುವ ಬಹುತೇಕ ಕೆಎಸ್ಸಾರ್ಟಿಸಿ ಬಸ್ ಗಳೂ ಸೇರಿದಂತೆ ಖಾಸಗಿ ಬಸ್ ಗಳು, ಕಾರು ಲಾರಿಗಳು ಸೇರಿದಂತೆ ನೂರಾರು ವಾಹನಗಳನ್ನ ನಿಲ್ಲಿಸಲಾಗುತ್ತೆ. ನೆಮ್ಮದಿಯ ವಿಚಾರ ಅಂದ್ರೆ ಇದೂವರೆಗೂ ಯಾವುದೇ ಅಂತ ದೊಡ್ಡ ಅನಾಹುತ ಸಂಭವಿಸಿಲ್ಲ.( ಯಾವುದೇ ಅನಾಹುತ ಆಗೋದು ಬೇಡ ಅನ್ನೊದೇ ನ್ಯೂಝ್ ಮಿರರ್ ಆಶಯ).
ಈಗಲಾದ್ರೂ ಕೆಎಸ್ಸಾರ್ಟಿಸಿ ಆಡಳಿತ ವರ್ಗ ಇದನ್ನ ಗಮನಿಸಿ ಮುಂದಾಗುವ ದೊಡ್ಡ ಅನಾಹುತವನ್ನ ತಪ್ಪಿಸುವ ಕೆಲಸ ಮಾಡಬೇಕಿದೆ. ಅದು ಆದಷ್ಟು ಬೇಗ ಆಗಲಿ ಅನ್ನೋದೇ ನ್ಯೂಝ್ ಮಿರರ್ ನ ಆಶಯ.
ಚಾಲಕರು ಹೇಳೋದು ಏನು.?
ಹೈ ಟೆನ್ಷನ್ ವೈರ್ ಕೇಳಗೆ ಬಸ್ ನಿಲ್ಲಿಸುತ್ತಿರೋದರ ಬಗ್ಗೆ ಹಲವು ಕೆಎಸ್ಸಾರ್ಟಿಸಿ ಬಸ್ ಚಾಲಕರನ್ನ ಪ್ರಶ್ನೆ ಮಾಡಲಾಯ್ತು. ಅವರು ಹೇಳಿದ್ದು ಒಂದೇ ಉತ್ತರ. ಏನು ಮಾಡೋದು ಸಾರ್. ನಮಗೆ ಇದೇ ಹೊಟೇಲ್ ನಲ್ಲಿ ನಿಲುಗಡೆ ಮಾಡುವಂತೆ ಸೂಚನೆ ಕೊಡಲಾಗಿದೆ. ಹೀಗಾಗಿ ಇಲ್ಲಿಯೇ ನಿಲ್ಲಿಸಬೇಕು ಸಾರ್. ನಾವೇನೂ ಮಾಡೋಕೆ ಆಗೋದಿಲ್ಲ ಅಂತ ತಮ್ಮ ಅಳಲನ್ನ ತೋಡಿಕೊಂಡ್ರು.
ಪ್ರಯಾಣಿಕರು ಹೇಳುವುದೇನು.?
ಕೆಎಸ್ಸಾರ್ಟಿಸಿ ಉತ್ತಮ ರುಚಿ, ಶುಚಿ ಇರುವ ಹೊಟೇಲ್ ನಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ. ಆದರೆ ಅಲ್ಲಿನ ವಾತಾವರಣ ಪ್ರಯಾಣಿಕರಿಗೆ ನೆಮ್ಮದಿ ತರಬೇಕೆ ಹೊರತು ಅಪಾಯ ತರುವಂತಿರಬಾರದು. ಈಗಲಾದರೂ ಕೆಎಸ್ಸಾರ್ಟಿಸಿ ಇದರ ಬಗ್ಗೆ ಗಮನ ಹರಿಸಲಿ ಅಂತ ಹೇಳುತ್ತಾರೆ ಶೀವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ಪ್ರಶಾಂತ್ ಹೇಳುತ್ತಾರೆ.