ಬೆಂಗಳೂರು, (www.thenewzmirror.com);
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ, ಕ್ರೈಸ್ತರನ್ನ ಹೆಚ್ಚು ಓಲೈಕೆ ಮಾಡಲು ಹೊರಟಿದೆ ಎಂದೆಲ್ಲಾ ಆರೋಪಗಳು ಕೇಳಿ ಬರುತ್ತಿದ್ದವು. ಇದಕ್ಕೆ ಇಂಬು ನೀಡುವಂತೆ KSRTC ಬಸ್ ಟಿಕೆಟ್‌ನಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯ ಮುದ್ರಿಸಿರುವ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ನಿಗಮದ ಈ ನಡೆಗೆ ಸಾರ್ವಜನಿಕರವಾಗಿಯೂ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದ್ದವು. ಇದೀಗ ಈ ಬಗ್ಗೆ KSRTC ಸ್ಪಷ್ಟನೆ ನೀಡಿದ್ದು, ಅಚಾತುರ್ಯದಿಂದ ಆಗಿದ್ದು, ಮುದ್ರಿತ ಸಂದೇಶ ತೆಗೆದು ಹಾಕಲಾಗಿದೆ ಎಂದು ಹೇಳಿದೆ.

ಬೆಂಗಳೂರಿನಿಂದ ಶಿಡ್ಲಘಟ್ಟಕ್ಕೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರೊಬ್ಬರಿಗೆ ಡಿಸೆಂಬರ್ 25 ರಂದು ನೀಡಿದ ಟಿಕೆಟ್ ನ ಕೆಳ ಭಾಗದಲ್ಲಿ ಕ್ರಿಸ್ ಮಸ್ ಶುಭಾಶಯ ಮುದ್ರಿತವಾಗಿತ್ತು. ಹಿಂದು ಧರ್ಮದ ಹಬ್ಬಗಳಿಗೆ ಈವರೆಗೆ ಯಾಕೆ ಶುಭಾಶಯ ಸಂದೇಶ ಟಿಕೆಟ್‌ನಲ್ಲಿ ಮುದ್ರಿಸಿಲ್ಲ ಎಂದು ಪ್ರಶ್ನಿಸಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ಕೊಟ್ಟ ನಿಗಮ, ಕೆಎಸ್ಆರ್ಟಿಸಿಯಲ್ಲಿ ಒಟ್ಟು 83 ಟಕಗಳಲ್ಲಿ 16 ವಿಭಾಗಗಳಿವೆ. ಪ್ರತಿ ನಿತ್ಯ 10,200 ಇಟಿಎಂ(ಇಲೆಕ್ಟ್ರಿಕ್ ಟಿಕೆಟ್ ಮೆಶಿನ್)ಗಳಲ್ಲಿ ಮುದ್ರಿತ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುತ್ತದೆ.

ಟಿಕೆಟ್ ವಿತರಣಾ ಯಂತ್ರಗಳ ಮೂಲಕ ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬ ಹಾಗೂ ಇತರ ರಜಾ ದಿನಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಬಹುದಾಗಿದೆ. ಈ ವ್ಯವಸ್ಥೆಯನ್ನು ಘಟಕಗಳಲ್ಲಿ ಆಂತರಿಕ ಬಳಕೆಗಾಗಿ ಮಾತ್ರ ಕಲ್ಪಿಸಲಾಗಿದೆ. ಟಿಕೆಟ್‌ನಲ್ಲಿ ದಾಖಲಾಗಿರುವ ಕ್ರಿಸ್ಮಸ್ ಹಬ್ಬದ ಸಂದೇಶ ಡಿ.25ರಂದು ಮಾತ್ರ ಮುದ್ರಿತವಾಗಿದೆ.
ಇದು ಚಿಕ್ಕಬಳ್ಳಾಪುರ ವಿಭಾಗದ, ಚಿಕ್ಕಬಳ್ಳಾಪುರ, ಶಿಡ್ಲಟ್ಟ ಮತ್ತು ಚಿಂತಾಮಣಿ ಟಕದ ಟಿಕೆಟ್ಗಳಲ್ಲಿ ಮಾತ್ರ ಮುದ್ರಿತವಾಗಿದೆ. ಇದನ್ನು ಈಗಾಗಲೇ ಸರಿಪಡಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಸ್ಪಷ್ಟನೆ ನೀಡಿದೆ. ಹಾಗೆನೇ ಇತರ ಹಿಂದೂ ಹಬ್ಬಗಳ ಸಂಧರ್ಭದಲ್ಲೂ ಟಿಕೆಟ್ ನಲ್ಲಿ ಶುಭಾಶಯ ಮುದ್ರಿತವಾಗುತ್ತಿತ್ತು ಎನ್ನೂವುದನ್ನೂ KSRTC ಮಾಹಿತಿ ನೀಡಿದೆ.