Mobile News | ಕೇವಲ 6999 ರೂಗೆ ಲಾವಾದಿಂದ 50MP ಕ್ಯಾಮೆರಾ ಇರುವ ಶಾರ್ಕ್‌ ಬಿಡುಗಡೆ !

Lava launches Shark with 50MP camera for just Rs 6999

ಬೆಂಗಳೂರು, (www.thenewzmirror.com) ;

ಲಾವಾ ಇಂಟರ್‌ನ್ಯಾಷನಲ್ ಲಿಮಿಟೆಡ್‌ ಪ್ರಮುಖ ಭಾರತೀಯ ಸ್ಮಾರ್ಟ್‌ಫೋನ್ ಉತ್ಪಾದಕನಾಗಿದ್ದು, ಶಾರ್ಕ್‌ ಎಂಬ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಇದು 9 ಸಾವಿರ ಸೆಗ್ಮೆಂಟ್‌ನ ಅಡಿಯಲ್ಲಿ ಪೋರ್ಟ್‌ಫೋಲಿಯೋ ವಿಸ್ತರಣೆ ಮಾಡುವ ಬ್ರ್ಯಾಂಡ್‌ನ ಕಾರ್ಯತಂತ್ರಕ್ಕೆ ಅನುಗುಣವಾಗಿದೆ.

RELATED POSTS

ವಿನ್ಯಾಸ, ಕಾರ್ಯಕ್ಷಮತೆ ಮತ್ತು ನಿರ್ಮಾಣ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸಿರೋ ಲಾವಾ ಶಾರ್ಕ್ ಅನ್ನು ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಬಳಸುವವರಿಗೆ ಸೂಕ್ತವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ತಿಳಿಸಿದ್ದು, ಈ ವಿಭಾಗದಲ್ಲಿ ಇದು ಅತ್ಯುತ್ತಮ ಉತ್ಪನ್ನ ಅನುಭವವನ್ನು ನೀಡುತ್ತದೆ ಎಂದಿದೆ.

ಕೇವಲ  6999 ರೂಪಾಯಿಗಳಾಗಿದ್ದು, ಎರಡು ಬೋಲ್ಡ್ ಕಲರ್ ವೇರಿಯಂಟ್‌ಗಳಾದ ಟೈಟಾನಿಯಮ್ ಗೋಲ್ಡ್ ಮತ್ತು ಸ್ಟೀಲ್ತ್‌ ಬ್ಲ್ಯಾಕ್‌ನಲ್ಲಿ ಲಭ್ಯವಿದೆ. 2025 ಮಾರ್ಚ್‌ನಿಂದ ಲಾವಾದ ವಿವಿಧ ಔಟ್‌ಲೆಟ್‌ಗಳಲ್ಲಿ ಲಭ್ಯವಾಗಲಿದೆ.

ಹೊಸ ಸಿರೀಸ್‌ ಬಿಡುಗಡೆಯ ಬಗ್ಗೆ ಮಾತನಾಡಿದ ಲಾವಾ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಉತ್ಪನ್ನ ವಿಭಾಗದ ಮುಖ್ಯಸ್ಥ ಸುಮಿತ್ ಸಿಂಗ್, “ಲಾವಾ ಶಾರ್ಕ್ ಹೊಸ ಸೀರಿಸ್ ಆಗಿದ್ದು, ಆರಂಭಿಕ ಹಂತದಲ್ಲಿ ಗ್ರಾಹಕರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ವಿನ್ಯಾಸ ಮಾಡಲಾಗಿದೆ. ಇದು 8 ಸಾವಿರ ದರದ ಸೆಗ್ಮೆಂಟ್‌ನಲ್ಲಿ ನಮ್ಮ ಉತ್ಪನ್ನದ ಕಾರ್ಯತಂತ್ರಕ್ಕೆ ಅನುಗುಣವಾಗಿದೆ. ಇನ್ನಷ್ಟು ಹೊಸ ಉತ್ಪನ್ನಗಳ ಜೊತೆಗೆ ಶಾರ್ಕ್ ಸರಣಿಯನ್ನು ನಾವು ಇನ್ನಷ್ಟು ವಿಸ್ತರಣೆ ಮಾಡಲಿದ್ದೇವೆ ಎಂದರು.

ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿರುವುದರಿಂದ, ಉತ್ಪನ್ನದ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ಬಾಳಿಕೆಯಲ್ಲಿ ಇರುವ ಕೊರತೆಯನ್ನು ಕಡಿಮೆ ಮಾಡುವುದಕ್ಕೆ ನಾವು ಬದ್ಧವಾಗಿದ್ದೇವೆ. ಗ್ರಾಹಕರಿಗೆ ಆದ್ಯತೆ ನೀಡುವ ಉದ್ಯಮವಾಗಿರುವ ನಮ್ಮ ಗುರಿಯು ಉತ್ತಮ ಗುಣಮಟ್ಟ ಮತ್ತು ಮೌಲ್ಯವನ್ನು ನಮ್ಮ ಉತ್ಪನ್ನ ಪೋರ್ಟ್‌ಫೋಲಿಯೋಗೆ ಒದಗಿಸುವುದರಲ್ಲಿ ನಾವು ಹೆಚ್ಚು ಗಮನಹರಿಸಿದ್ದೇವೆ ಎಂದಿದ್ದಾರೆ.

ಲಾವಾ ಶಾರ್ಕ್‌ನಲ್ಲಿ 16.94 cm (6.67”) HD+  ಪಂಚ್‌ಹೋಲ್ ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಇದೆ. ಇದು ಅತ್ಯಂತ ಸರಾಗ ವೀಕ್ಷಣೆ ಮತ್ತು ಸ್ಕ್ರೋಲಿಂಗ್ ಅನುಭವವನ್ನು ನೀಡುತ್ತದೆ. ಇದರ ಜೊತೆಗೆ, 0.68 ಸೆಕೆಂಡುಗಳಲ್ಲಿ ಫೇಸ್ ಅನ್‌ಲಾಕ್ ಮತ್ತು 0.28 ಸೆಕೆಂಡುಗಳಲ್ಲಿ ಫಿಂಗರ್‌ಪ್ರಿಂಟ್ ಅನ್‌ಲಾಕ್ ಸೌಲಭ್ಯವನ್ನೂ ಒದಗಿಸುತ್ತದೆ. ತ್ವರಿತ ಮತ್ತು ಸುರಕ್ಷಿತ ಆಕ್ಸೆಸ್ ಅನ್ನು ಇದು ಒದಗಿಸುತ್ತದೆ. ದೈನಂದಿನ ಸವಕಳಿಯನ್ನು ತಡೆದುಕೊಳ್ಳುವುದಕ್ಕೆ ಸೂಕ್ತವಾಗುವಂತೆ ವಿನ್ಯಾಸ ಮಾಡಿರುವ ಈ ಸಾಧನ ನೀರು ಮತ್ತು ಧೂಳು ತಡೆಯುವುದಕ್ಕೆ IP54  ರೇಟಿಂಗ್ ಇದೆ.

ಶಾರ್ಕ್‌ನಲ್ಲಿ UNISOC T606 ಒಕ್ಟಾ ಕೋರ್ ಪ್ರೊಸೆಸರ್ ಇದೆ. ಅಲ್ಲದೆ, 4GB RAM ಮತ್ತು ಹೆಚ್ಚುವರಿ 4GB ವರ್ಚುವಲ್ RAM ಇದೆ. ಇದರಲ್ಲಿ ಲ್ಯಾಗ್ ಇಲ್ಲದ ಮಲ್ಟಿಟಾಸ್ಕಿಂಗ್ ಮಾಡಬಹುದು. ಅಲ್ಲದೆ, 64GB ಆಂತರಿಕ ಸ್ಟೊರೇಜ್ (256GB ವರೆಗೆ ವಿಸ್ತರಿಸಬಹುದಾಗಿದೆ) ಇದೆ. ಯಾವುದೇ ರಾಜಿ ಇಲ್ಲದೇ ಬಳಕೆದಾರರು ಎಲ್ಲವನ್ನೂ ಇದರಲ್ಲಿ ಸ್ಟೋರ್ ಮಾಡಿಕೊಳ್ಳಬಹುದು.

ಲಾವಾ ಶಾರ್ಕ್‌ನಲ್ಲಿ 50MP AI ರಿಯರ್ ಕ್ಯಾಮೆರಾ ಸಿಸ್ಟಮ್ ಇದ್ದು, ಅತ್ಯಂತ ಸ್ಪಷ್ಟ ಮತ್ತು ವಿವರವಾದ ಫೋಟೋವನ್ನು ನೀಡುತ್ತದೆ. 8MP ಫ್ರಂಟ್ ಕ್ಯಾಮೆರಾ ಇದೆ. ಹೀಗಾಘಿ ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಳು ಅತ್ಯಂತ ಸ್ಪಷ್ಟ ಮತ್ತು ಪ್ರಕಾಶಮಾನವಾಗಿರುತ್ತವೆ. ಎಐ ಮೋಡ್, ಪೋರ್ಟ್ರೇಟ್, ಪ್ರೋ ಮೋಡ್ ಮತ್ತು ಎಚ್‌ಡಿಆರ್‌ ಸೌಲಭ್ಯಗಳು ಫೊಟೋಗ್ರಫಿ ಅನುಭವವನ್ನು ಇನ್ನಷ್ಟು ವರ್ಧಿಸುತ್ತವೆ.

ಆಂಡ್ರಾಯ್ಡ್‌ 14 ರಲ್ಲಿ ರನ್ ಆಗುತ್ತಿರುವ ಶಾರ್ಕ್‌ ಅತ್ಯಂತ ಸರಾಗ ಅನುಭವವನ್ನು ನೀಡುತ್ತವೆ ಹಾಗೂ ಸೂಕ್ತ ಸಾಫ್ಟ್‌ವೇರ್ ಅನುಭವವನ್ನು ನ ಈಡುತ್ತವೆ. ದೊಡ್ಡ 5000mAh ಬ್ಯಾಟರಿ ಇದ್ದು, 18W ಫಾಸ್ಟ್‌ ಚಾರ್ಜಿಂಗ್ ಬೆಂಬಲವೂ ಇದೆ. ಹೀಗಾಗಿ ಇಡೀ ದಿನ ಯಾವುದೇ ಬ್ಯಾಟರಿ ಸಮಸ್ಯೆ ಇಲ್ಲದೆ ಕೆಲಸ ಮಾಡಬಹುದು. ಸಂಪೂರ್ಣ ಚಾರ್ಜ್‌ ಮಾಡಲು ಸುಮಾರು 158 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಬಳಕೆದಾರರು 45 ಗಂಟೆಗಳ ಟಾಕ್ ಟೈಮ್, 376 ಗಂಟೆಗಳ ಸ್ಟಾಂಡ್‌ಬೈ ಸಮಯ, 550 ನಿಮಿಷಗಳ ಯೂಟ್ಯೂಬ್ ಪ್ಲೇಬ್ಯಾಕ್‌ ಇದೆ. ಹೀಗಾಗಿ, ಅಡೆ ತಡೆ ಇಲ್ಲದ ಮನರಂಜನೆ ಮತ್ತು ಉತ್ಪಾದಕತೆ ಇದೆ. ಇದರ ಜೊತೆಗೆ, ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಫೇಸ್‌ ಅನ್‌ಲಾಕ್, ಡ್ಯೂಯೆಲ್ 4G VoLTE, ಮತ್ತು ಬ್ಲ್ಯೂಟೂತ್ 5.0 ಮತ್ತು Wi-Fi 802.11 b/g/n/ac ಇದೆ.

ಎಲ್ಲ ಲಾವಾ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವಂತೆಯೇ ಶಾರ್ಕ್‌ನಲ್ಲಿ ಕೂಡಾ 1 ವರ್ಷದ ವಾರಂಟಿ ಮತ್ತು ಮನೆಗೆ ಉಚಿತ ಸರ್ವೀಸ್ ಲಭ್ಯವಿದೆ. ಗ್ರಾಹಕರಿಗೆ ಅನುಕೂಲ ಮತ್ತು ವಿಶ್ವಾಸಕ್ಕೆ ಬ್ರ್ಯಾಂಡ್ ಹೊಂದಿರುವ ಬದ್ಧತೆಯನ್ನು ಇದು ಸೂಚಿಸುತ್ತದೆ.

ಮನೆಯಲ್ಲಿ ಸರ್ವೀಸ್ ಪಡೆಯಲು, ಇಲ್ಲಿ ಕ್ಲಿಕ್ ಮಾಡಿ: https://www.lavamobiles.com/lava_service_at_home/

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist