Lok Sabha election | ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್, ನಟ ಶಿವರಾಜ್ ಕುಮಾರ್ ಪತ್ನಿಗೂ ಟಿಕೆಟ್.!

ಬೆಂಗಳೂರು/ನವದೆಹಲಿ, (www.thenewzmirror.com) :

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೊದಲ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಯ್ತು. ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ. ಅಲ್ಲದೇ ಮೊದಲ ಪಟ್ಟಿಯಲ್ಲೇ ಕರ್ನಾಟಕದ 7 ಲೋಕಸಭಾ ಕ್ಷೇತ್ರ ಸೇರಿದಂತೆ 39 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

RELATED POSTS

ಈ ಕುರಿತಂತೆ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗಾಗಿ ಯುವ ನ್ಯಾಯ ಗ್ಯಾರಂಟಿಯನ್ನು ಘೋಷಣೆ ಮಾಡಲಾಯಿತು. ದೇಶದ ಯುವ ಜನತೆಗೆ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ನಾವು ನೆರವಾಗಲಿದ್ದೇವೆ. 30 ಲಕ್ಷ ಉದ್ಯೋಗವನ್ನು ಯುವ ನ್ಯಾಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನೀಡಲಾಗುತ್ತದೆ ಎಂದರು.

ಯುವ ಜನತೆ ನಿರುದ್ಯೋಗದಿಂದ ದೇಶದಲ್ಲಿ ಬಳಲುತ್ತಿದ್ದಾರೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರೇಸುತ್ತಿದೆ. ನಾವು ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲು ಸಿದ್ಧರಿದ್ದೇವೆ. ತೆಲಂಗಾಣ, ಕರ್ನಾಟಕದಲ್ಲಿ ಏನಾಯ್ತು ಅಂತ ಜನರು ನೋಡಿದ್ದಾರೆ. ಕಳೆದ ನಿನ್ನೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ 39 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದರು.

ಮೊದಲ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗದವರಿಗೆ, 24 ಎಸ್ಸಿ, ಎಸ್ಟಿ ಓಬಿಸಿ ಹಾಗೂ ಮೈನಾರಿಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ರಾಹುಲ್ ಗಾಂಧಿಯವರು ಕೇರಳದ ವಯನಾಡಿನಿಂದ ಸ್ಪರ್ಧೆ ನಡೆಸಲಿದ್ದಾರೆ.

ಹೀಗಿದೆ ಕರ್ನಾಟಕದ 7 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

• ಚಿತ್ರದುರ್ಗ – ಬಿಎನ್ ಚಂದ್ರಪ್ಪ

• ಬಿಜಾಪುರ – ಹೆಚ್ ಆರ್ ರಾಜು ಆಲಗೂರು

• ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್

• ಹಾಸನ- ಎಂ. ಶ್ರೇಯಸ್ ಪಟೇಲ್

• ತುಮಕೂರು – ಮುದ್ದಹನುಮೇಗೌಡ

• ಮಂಡ್ಯ – ವೆಂಕಟರಾಮೇಗೌಡ ( ಸ್ಟಾರ್ ಮಂಜು)

• ಬೆಂಗಳೂರು ಗ್ರಾಮಾಂತರ – ಡಿ.ಕೆ ಸುರೇಶ್

ಹೀಗಿದೆ ತೆಲಂಗಾಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

• ಜಹೀರಾಬಾದ್- ಸುರೇಶ್ ಕುಮಾರ್ ಶೆಟ್ಕರ್

• ಚೆವೆಲ್ಲಾ- ಸುನೀತಾ ಮಹೇಂದರ್

• ನಲ್ಗೊಂಡ- ರಘುವೀರ್ ಕುಂದೂರು

• ಮಹಬೂಬಾಬಾದ್ (ಎಸ್ಟಿ) – ಬಲರಾಮ್ ನಾಯಕ್ ಪೋರಿಕಾ

ಹೀಗಿದೆ ಕೇರಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

• ಕಾಸರಗೋಡು- ರಾಜ್ಮೋಹನ್ ಉನ್ನಿಥಾನ್

• ಕಣ್ಣೂರು- ಕೆ.ಸುಧಾಕರನ್

• ವಡಕರ- ಶಫಿ ಪರಂಬಿಲ್

• ವಯನಾಡ್- ರಾಹುಲ್ ಗಾಂಧಿ

• ಕೋಯಿಕ್ಕೋಡ್- ಎಂ.ಕೆ.ರಾಘವನ್

• ಪಾಲಕ್ಕಾಡ್- ವಿ.ಕೆ.ಶ್ರೀಕಂದನ್

• ಅಲತೂರ್ (ಎಸ್ಸಿ) – ಶ್ರೀಮತಿ ರೆಮ್ಯಾ ಹರಿದಾಸ್

• ತ್ರಿಶೂರ್ – ಕೆ ಮುರಳೀಧರನ್

• ಚಲಕುಡಿ- ಬೆನ್ನಿ ಬಹನ್ನಾನ್

• ಎರ್ನಾಕುಲಂ- ಹಿಬಿ ಈಡನ್

• ಡುಕ್ಕಿ- ಡೀನ್ ಕುರಿಯಾಕೋಸ್

• ಮಾವೆಲಿಕ್ಕರ (ಎಸ್ಸಿ) – ಕೋಡಿಕುನ್ನಿಲ್ ಸುರೇಶ್

• ಪಥನಂತಿಟ್ಟ- ಆಂಟೋ ಆಂಟನಿ

• ಅಟ್ಟಿಂಗಲ್- ಅಡೂರ್ ಪ್ರಕಾಶ್

• ತಿರುವನಂತಪುರಂ- ಡಾ.ಶಶಿ ತರೂರ್

ಹೀಗಿದೆ ಛತ್ತೀಸ್ ಗಢದ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

• ಜಂಗೀರ್ – ಚಂಪಾ (ಎಸ್ಸಿ) – ಡಾ.ಶಿವಕುಮಾರ್ ದಹರಿಯಾ

• ಕೊರ್ಬಾ- ಶ್ರೀಮತಿ ಜ್ಯೋತ್ಸನಾ ಮಹಂತ್

• ರಾಜನಂದಗಾಂವ್- ಭೂಪೇಶ್ ಬಘೇಲ್

• ದುರ್ಗ್ – ರಾಜೇಂದ್ರ ಸಾಹು

• ರಾಯ್ಪುರ- ವಿಕಾಸ್ ಉಪಾಧ್ಯಾಯ

• ಮಹಾಸಮುಂದ್ – ತರ್ಧ್ವಜ್ ಸಾಹು

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist