ಬೆಂಗಳೂರು, (www.thenewzmirror.com) ;
ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಕೆಲವು ಕಡೆಗಳಲ್ಲಿ ಅಹಿತಕರ ಘಟನೆ ಹೊರತು ಪಡಿಸಿ ಉಳಿದಂತೆ ಶಾಂತಿಯುತ ಮತದಾನವಾಗಿದೆ. ಗಲಭೆಯಾದ ಸ್ಥಳಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ತೀರ್ಮಾನ ಮಾಡಿದ್ದು, ಶಾಂತಿಯುತ ಮತದಾನವಾದ ಕಡೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರದ ಪೈಕಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಹಾಗಿದ್ರೆ ಮೊದಲ ಹಂತ ನಡೆದ ಕ್ಷೇತ್ರಗಳಲ್ಲಿ ಕಣದಲ್ಲಿದ್ದ ಕಲಿಗಳ ವಿದ್ಯಾರ್ಹತೆ ಏನು..? ಎಷ್ಟು ಮತಗಟ್ಟೆಗಳಲ್ಲಿ ಮತದಾರ ಪ್ರಭುಗಳು ಮತದಾನ ಮಾಡಿದ್ದಾರೆ ಅನ್ನೋದ್ರ ಮಾಹಿತಿ ಇಲ್ಲಿದೆ.
ಬೆಂಗಳೂರು ಸೇರಿ ಹಲವು ಕ್ಷೇತ್ರಗಳಲ್ಲಿ ನಿನ್ನೆ ಸಂಜೆಯಿಂದಲೇ ಸೆಕ್ಷನ್ 144 ಜಾರಿ ಆಗಿದೆ. ಮದ್ಯದಂಗಡಿಗಳನ್ನೂ ಕೂಡ ಬಂದ್ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಮತದಾನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಎಲ್ಲೆಲ್ಲಿ ಮತದಾನ, ಯಾರು ಅಭ್ಯರ್ಥಿಗಳು.?
14 ಕ್ಷೇತ್ರಗಳಲ್ಲಿ ಯಾರೆಲ್ಲ ಅಭ್ಯರ್ಥಿಗಳು ಕಣದಲ್ಲಿದ್ದರು ಎನ್ನುವುದನ್ನ ನೋಡುವುದಾದರೆ..,
ಬೆಂಗಳೂರು ಕೇಂದ್ರದಲ್ಲಿ ಬಿಜೆಪಿಯಿಂದ ಪಿಸಿ ಮೋಹನ್ ಅಭ್ಯರ್ಥಿ ಆಗಿದ್ದರೆ, ಕಾಂಗ್ರೆಸ್ನಿಂದ ಮನ್ಸೂರ್ ಅಲಿಖಾನ್. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ತೇಜಸ್ವಿ ಸೂರ್ಯ, ಕಾಂಗ್ರೆಸ್ನಿಂದ ಸೌಮ್ಯಾ ರೆಡ್ಡಿ. ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ನಿಂದ ರಾಜೀವ್ ಗೌಡ, ಬೆಂಗಳೂರು ಗ್ರಾಮಾಂತರ ಬಿಜೆಪಿಯಿಂದ ಡಾ. ಸಿಎನ್ ಮಂಜುನಾಥ್, ಕಾಂಗ್ರೆಸ್ನಿಂದ ಡಿಕೆ ಸುರೇಶ್, ಕೋಲಾರದಲ್ಲಿ ಜೆಡಿಎಸ್ನಿಂದ ಮಲ್ಲೇಶ್ ಬಾಬು, ಕಾಂಗ್ರೆಸ್ನಿಂದ ಕೆ.ವಿ ಗೌತಮ್, ತುಮಕೂರಿನಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ, ಕಾಂಗ್ರೆಸ್ನಿಂದ ಮುದ್ದಹನುಮೇಗೌಡ, ಮೈಸೂರು-ಕೊಡಗಿನಲ್ಲಿ ಬಿಜೆಪಿಯಿಂದ ಯದುವೀರ್ ಒಡೆಯರ್, ಕಾಂಗ್ರೆಸ್ನಿಂದ ಲಕ್ಷ್ಮಣ್ ಕಣದಲ್ಲಿದ್ದಾರೆ.
ಚಾಮರಾಜನಗರದಲ್ಲಿ ಬಿಜೆಪಿಯಿಂದ ಬಾಲರಾಜ್, ಕಾಂಗ್ರೆಸ್ನಿಂದ ಸುನೀಲ್ ಬೋಸ್, ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೆಸ್ನಿಂದ ಪದ್ಮರಾಜ್, ಚಿಕ್ಕಮಗಳೂರು-ಉಡುಪಿಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ್ ಪೂಜಾರಿ, ಕಾಂಗ್ರೆಸ್ನಿಂದ ಜಯಪ್ರಕಾಶ್ ಹೆಗ್ಡೆ, ಹಾಸನದಲ್ಲಿ ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ನಿಂದ ಶ್ರೇಯಸ್, ಮಂಡ್ಯದಲ್ಲಿ ಜೆಡಿಎಸ್ನಿಂದ ಕುಮಾರಸ್ವಾಮಿ, ಕಾಂಗ್ರೆಸ್ನಿಂದ ಸ್ಟಾರ್ ಚಂದ್ರು, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಡಾ.ಕೆ ಸುಧಾಕರ್, ಕಾಂಗ್ರೆಸ್ನಿಂದ ರಕ್ಷಾ ರಾಮಯ್ಯ, ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಗೋವಿಂದ ಕಾರಜೋಳ, ಕಾಂಗ್ರೆಸ್ನಿಂದ ಬಿ.ಎನ್ ಚಂದ್ರಪ್ಪ ಕಣದಲ್ಲಿದ್ದರು.
ರಾಜ್ಯದ 14 ಕ್ಷೇತ್ರಗಳಳ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮೊದಲ ಹಂತದಲ್ಲಿ 247 ಅಭ್ಯರ್ಥಿಗಳು ಕಣದಲ್ಲಿದ್ದರು. ಜೆಡಿಎಸ್, ಬಿಜೆಪಿ, ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳ ಪೈಕಿ 6 ಮಂದಿ ಪದವಿ ಶಿಕ್ಷಣದ ವಿದ್ಯಾರ್ಹತೆ ಹೊಂದಿದ್ದಾರೆ. ಈ ಪೈಕಿ ನಾಲ್ವರು ಅಭ್ಯರ್ಥಿಗಳು ಬಿಎ ಮತ್ತು ಕಾನೂನು (LLB) ಪದವಿ ಹೊಂದಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನ 5 ಮಂದಿ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಒಬ್ಬ ಅಭ್ಯರ್ಥಿ 7ನೇ ಕ್ಲಾಸ್‌ವರೆಗೆ ಶಿಕ್ಷಣ ಪಡೆದಿದ್ದಾರೆ. ಇನ್ನು 3 ಮಂದಿ ಅಭ್ಯರ್ಥಿಗಳು PUCವರೆಗೆ ವಿದ್ಯಾರ್ಹತೆ ಹೊಂದಿದ್ದಾರೆ. ಇಬ್ಬರು MBBS, MD ವಿದ್ಯಾರ್ಹತೆ ಹೊಂದಿದ್ದಾರೆ. 4 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇನ್ನು ಒಬ್ಬ ಅಭ್ಯರ್ಥಿ PHD ಪಡೆದುಕೊಂಡಿದ್ದಾರೆ.
ಯಾವ ಅಭ್ಯರ್ಥಿ ವಿದ್ಯಾರ್ಹತೆ ಏನು.?
- ಉಡುಪಿ-ಚಿಕ್ಕಮಗಳೂರು ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಕೋಟಾ ಶ್ರೀನಿವಾಸ್ ಪೂಜಾರಿ
ವಿದ್ಯಾರ್ಹತೆ: 7th class
ಕಾಂಗ್ರೆಸ್ ಅಭ್ಯರ್ಥಿ: ಜಯಪ್ರಕಾಶ್ ಹೆಗ್ಡೆ
ವಿದ್ಯಾರ್ಹತೆ: BA, LLB - ಹಾಸನ ಕ್ಷೇತ್ರ:
ಜೆಡಿಎಸ್ ಅಭ್ಯರ್ಥಿ: ಪ್ರಜ್ವಲ್ ರೇವಣ್ಣ
ವಿದ್ಯಾರ್ಹತೆ: BE
ಕಾಂಗ್ರೆಸ್ ಅಭ್ಯರ್ಥಿ: ಶ್ರೇಯಸ್ ಪಟೇಲ್
ವಿದ್ಯಾರ್ಹತೆ: BBM - ದಕ್ಷಿಣ ಕನ್ನಡ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಕ್ಯಾಪ್ಟನ್ ಬ್ರಜೇಶ್ ಚೌಟ
ವಿದ್ಯಾರ್ಹತೆ: IIM (Business Mgt.)
ಕಾಂಗ್ರೆಸ್ ಅಭ್ಯರ್ಥಿ: ಆರ್.ಪದ್ಮರಾಜ್
ವಿದ್ಯಾರ್ಹತೆ: BA, LLB - ಚಿತ್ರದುರ್ಗ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಗೋವಿಂದ ಕಾರಜೋಳ
ವಿದ್ಯಾರ್ಹತೆ: SSLC
ಕಾಂಗ್ರೆಸ್ ಅಭ್ಯರ್ಥಿ: ಬಿ.ಎನ್.ಚಂದ್ರಪ್ಪ
ವಿದ್ಯಾರ್ಹತೆ: MA (Social science) - ತುಮಕೂರು ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ವಿ.ಸೋಮಣ್ಣ
ವಿದ್ಯಾರ್ಹತೆ: BA
ಕಾಂಗ್ರೆಸ್ ಅಭ್ಯರ್ಥಿ: ಎಸ್.ಪಿ.ಮುದ್ದಹನುಮೇಗೌಡ
ವಿದ್ಯಾರ್ಹತೆ: BA, LLB - ಮಂಡ್ಯ ಕ್ಷೇತ್ರ:
ಜೆಡಿಎಸ್ ಅಭ್ಯರ್ಥಿ: ಹೆಚ್.ಡಿ.ಕುಮಾರಸ್ವಾಮಿ
ವಿದ್ಯಾರ್ಹತೆ: B.Sc
ಕಾಂಗ್ರೆಸ್ ಅಭ್ಯರ್ಥಿ: ವೆಂಕಟರಮಣೆಗೌಡ
ವಿದ್ಯಾರ್ಹತೆ: B.Sc - ಮೈಸೂರು ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಯದುವೀರ್ ಒಡೆಯರ್
ವಿದ್ಯಾರ್ಹತೆ: BA
ಕಾಂಗ್ರೆಸ್ ಅಭ್ಯರ್ಥಿ: ಲಕ್ಷ್ಮಣ್
ವಿದ್ಯಾರ್ಹತೆ: BE - ಚಾಮರಾಜನಗರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಎಸ್.ಬಾಲರಾಜು
ವಿದ್ಯಾರ್ಹತೆ: BE (Civil Eng.)
ಕಾಂಗ್ರೆಸ್ ಅಭ್ಯರ್ಥಿ: ಸುನೀಲ್ ಬೋಸ್
ವಿದ್ಯಾರ್ಹತೆ: PUC - ಬೆಂಗಳೂರು ಗ್ರಾಮಾಂತರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಡಾ.ಸಿ.ಎನ್.ಮಂಜುನಾಥ್
ವಿದ್ಯಾರ್ಹತೆ: MBBS, MD, DM (Cardiology)
ಕಾಂಗ್ರೆಸ್ ಅಭ್ಯರ್ಥಿ: ಡಿ.ಕೆ.ಸುರೇಶ್
ವಿದ್ಯಾರ್ಹತೆ: PUC - ಬೆಂಗಳೂರು ಉತ್ತರ ಕ್ಷೇತ್ರ:
ಕಾಂಗ್ರೆಸ್ ಅಭ್ಯರ್ಥಿ: ಪ್ರೊ.ರಾಜೀವ್ ಗೌಡ
ವಿದ್ಯಾರ್ಹತೆ: Phd, MA
ಬಿಜೆಪಿ ಅಭ್ಯರ್ಥಿ: ಶೋಭಾ ಕರಂದ್ಲಾಜೆ
ವಿದ್ಯಾರ್ಹತೆ: MA (social service) - ಬೆಂಗಳೂರು ಕೇಂದ್ರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಪಿ.ಸಿ.ಮೋಹನ್
ವಿದ್ಯಾರ್ಹತೆ: PUC
ಕಾಂಗ್ರೆಸ್ ಅಭ್ಯರ್ಥಿ: ಮನ್ಸೂರ್ ಅಲಿ ಖಾನ್
ವಿದ್ಯಾರ್ಹತೆ: BBM - ಬೆಂಗಳೂರು ದಕ್ಷಿಣ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ತೇಜಸ್ವಿ ಸೂರ್ಯ
ವಿದ್ಯಾರ್ಹತೆ: BA, LLB
ಕಾಂಗ್ರೆಸ್ ಅಭ್ಯರ್ಥಿ: ಸೌಮ್ಯ ರೆಡ್ಡಿ
ವಿದ್ಯಾರ್ಹತೆ: BE (Chemical Eng.) - ಚಿಕ್ಕಬಳ್ಳಾಪುರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಡಾ.ಕೆ.ಸುಧಾಕರ್
ವಿದ್ಯಾರ್ಹತೆ: MBBS
ಕಾಂಗ್ರೆಸ್ ಅಭ್ಯರ್ಥಿ: ರಕ್ಷಾ ರಾಮಯ್ಯ
ವಿದ್ಯಾರ್ಹತೆ: MBA - ಕೋಲಾರ ಕ್ಷೇತ್ರ:
ಜೆಡಿಎಸ್ ಅಭ್ಯರ್ಥಿ: ಎಂ.ಮಲ್ಲೇಶ್ ಬಾಬು
ವಿದ್ಯಾರ್ಹತೆ: MBA
ಕಾಂಗ್ರೆಸ್ ಅಭ್ಯರ್ಥಿ: ಕೆ.ವಿ.ಗೌತಮ್
ವಿದ್ಯಾರ್ಹತೆ: BE