ಬೆಂಗಳೂರು, (www.thenewzmirror.com) ;
ಸಿದ್ಧರಾಮಯ್ಯ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ADGP ಗೆ ನ್ಯಾಯಾಧೀಶರಿಂದ ತೀವ್ರ ತರಾಟೆ ಮತ್ತು Showc Cause Notice ನೀಡಿ, ಕೂಡಲೇ ಖುದ್ದು ಹಾಜಾರಾಗಬೇಕೆಂದು ಆದೇಶ ಮಾಡಿದೆ.
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2013-2018 ರ ಅವಧಿಯಲ್ಲಿ ತಮ್ಮ ಅತ್ಯಂತ ಆಪ್ತ ಸ್ನೇಹಿತ L. ವಿವೇಕಾನಂದ (ಕಿಂಗ್ಸ್ ಕೋರ್ಟ್ ವಿವೇಕ್) ಅವರಿಂದ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ (1,30,000) ಗಳನ್ನು ಚೆಕ್ ರೂಪದಲ್ಲಿ ಪಡೆದು Bangalore Turf Club ನ ಅತ್ಯಂತ ಆಯಕಟ್ಟಿನ ಹುದ್ದೆಯಾದ Steward ಹುದ್ದೆಗೆ ನಿಯೋಜಿಸುವ ಮೂಲಕ ಪ್ರಜಾ ಪ್ರತಿನಿಧಿಗಳ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದರು.
ತಮ್ಮ ಮುಖ್ಯಮಂತ್ರಿ ಸ್ಥಾನದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದ ಸಿದ್ಧರಾಮಯ್ಯನವರು ಹತ್ತಾರು ಸಾವಿರ ಕೋಟಿ ರೂಪಾಯಿ ವಹಿವಾಟನ್ನು ಹೊಂದಿರುವ Bangalore Turf Club ನ ಎಲ್ಲಾ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುವ ಪ್ರಮುಖ ಹುದ್ದೆಯಾದ Steward ಹುದ್ದೆಗೆ ನಿಯೋಜನೆ ಮಾಡುವ ಮೂಲಕ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ತಮ್ಮ ರಕ್ತ ಸಂಬಂಧಿಗಳಿಗಾಗಲೀ ಅಥವಾ ಅತ್ಯಾಪ್ತ ಬಳಗದವರಿಗಾಗಲೀ ಲಾಭದಾಯಕ ಹುದ್ದೆಯನ್ನು ದಯಪಾಲಿಸುವಂತಿಲ್ಲ ಎಂಬ ಪ್ರಜಾ ಪ್ರತಿನಿಧಿಗಳ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ L. ವಿವೇಕಾನಂದ ಅವರನ್ನು BTC ಯ Steward ಹುದ್ದೆಗೆ ನಿಯೋಜನೆ ಮಾಡಿದ್ದರು.
ಈ ಸಂಬಂಧ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಹಾಗೂ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕರಾಗಿದ್ದ N. R. ರಮೇಶ್ ನವೆಂಬರ್ 2, 2022 ರಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರಲ್ಲದೇ, ಜನಪ್ರತಿನಿಧಿಗಳ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರನ್ನೂ (PCR ಸಂಖ್ಯೆ: 53/2022) ಸಹ ದಾಖಲಿಸಿದ್ದರು.
ಸದರಿ ಪ್ರಕರಣದ ತನಿಖೆಯನ್ನು ಏಕ ಪಕ್ಷೀಯವಾಗಿ ನಡೆಸಿದ್ದ ಲೋಕಾಯುಕ್ತರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ಧರಾಮಯ್ಯನವರ ಪ್ರಭಾವಕ್ಕೆ ಒಳಗಾಗಿ B Report ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆದರೆ, N. R. ರಮೇಶ್ ಪರ ವಕೀಲರು ದಾಖಲೆಗಳ ಸಹಿತ ಮಂಡಿಸಿದ್ದ ವಾದವನ್ನು ಆಲಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, ಸದರಿ ಪ್ರಕರಣದ ತನಿಖೆಯನ್ನು ಮೊದಲಿನಿಂದ ಹೊಸದಾಗಿ ಪ್ರಾರಂಭಿಸಿ ಆರು ತಿಂಗಳ ಒಳಗಾಗಿ ಸಮರ್ಪಕವಾದ ಹೊಸ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಫೆಬ್ರವರಿ 21 ರ 2024 ರಂದು ಆದೇಶಿಸಿದ್ದರು.
ನ್ಯಾಯಾಧೀಶರು ವಿಧಿಸಿದ್ದ ಆರು ತಿಂಗಳ ಗಡುವು ಮೀರಿದ್ದರಿಂದ 2024 ರ ಆಗಸ್ಟ್ 22 ರಂದು ವಿಚಾರಣೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ ನ್ಯಾಯಾಲಯ, ನ್ಯಾಯಾಲಯಕ್ಕೆ ಲೋಕಾಯುಕ್ತದ ADGP (ಅಪರ ಪೋಲೀಸ್ ಮಹಾ ನಿರ್ದೇಶಕ, ಲೋಕಾಯುಕ್ತ) ರವರು ಖುದ್ದು ಹಾಜರಿ ಇಲ್ಲದೇ ಇರುವುದನ್ನು ಮತ್ತು ಆರು ತಿಂಗಳ ಗಡುವು ಮುಗಿದರೂ ಹೊಸ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದುದರಿಂದ ಲೋಕಾಯುಕ್ತದ ಪರವಾದ ವಕೀಲರನ್ನು ನ್ಯಾಯಾಲಯದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿತು.
ಲೋಕಾಯುಕ್ತದ ವಕೀಲರು ನ್ಯಾಯಾಲಯವು ಮರು ತನಿಖೆಗೆ ಆದೇಶಿಸಿರುವ ವಿಷಯ ಲೋಕಾಯುಕ್ತದ ADGP ಅವರಿಗೆ ತಿಳಿದಿಲ್ಲದೇ ಇರುವುದರಿಂದ ಹೊಸದಾದ ತನಿಖೆ ಇನ್ನೂ ಪ್ರಾರಂಭವಾಗಿಲ್ಲ ಎಂಬ ಮಾತನ್ನು ಹೇಳುತ್ತಿದ್ದಂತೆ ಕೆಂಡಾಮಂಡಲರಾದ ನ್ಯಾಯಾಧೀಶರು “ಈ ಪ್ರಕರಣದ ಮರು ತನಿಖೆಗೆ ನ್ಯಾಯಾಲಯವು ಆದೇಶಿಸಿ ಆರು ತಿಂಗಳು ಈಗಾಗಲೇ ಮುಗಿದಿದ್ದು, ಎಲ್ಲಾ ಮಾಧ್ಯಮಗಳಲ್ಲಿ ಈ ಸಂಬಂಧ ವರದಿಗಳು ಪ್ರಸಾರವಾಗಿರುತ್ತದೆ ಮತ್ತು ನ್ಯಾಯಾಲಯದಿಂದ ಲೋಕಾಯುಕ್ತ ಪೋಲೀಸರಿಗೆ ಅಧಿಕೃತ ಮಾಹಿತಿ ತಲುಪಿರುತ್ತದೆ”. ಹೀಗಿರುವಲ್ಲಿ – “ನ್ಯಾಯಾಧೀಶರೇ ಖುದ್ದಾಗಿ ಲೋಕಾಯುಕ್ತ ಕಛೇರಿಗೆ ಬಂದು ADGP ಅವರಿಗೆ ಮರು ತನಿಖೆ ಮಾಡುವ ಬಗ್ಗೆ ಆದೇಶ ನೀಡಿರುವುದಾಗಿ ತಿಳಿಸಬೇಕೇ ?” ಎಂದು ಖಾರವಾಗಿ ಲೋಕಾಯುಕ್ತ ವಕೀಲರನ್ನು ಪ್ರಶ್ನಿಸಿದರು.
ನಂತರ ಮುಂದುವರೆದು, ತಕ್ಷಣವೇ ಲೋಕಾಯುಕ್ತದ ADGP ಅವರಿಗೆ ಈ ಸಂಬಂಧ Show Cause Notice (ಕಾರಣ ಕೇಳಿ ನೋಟೀಸ್) ಅನ್ನು ಜಾರಿ ಮಾಡಿದ್ದಲ್ಲದೇ, ಈ ಕೂಡಲೇ ಲೋಕಾಯುಕ್ತದ ADGP ಅವರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶವನ್ನು ನೀಡಿದರು.
ಆನಂತರ ಈ ಪ್ರಕರಣದ ತನಿಖಾಧಿಕಾರಿ ತಿಪ್ಪೇಸ್ವಾಮಿ ನ್ಯಾಯಾಲಯದಲ್ಲಿ ಹಾಜರಾಗಿ, ನ್ಯಾಯಾಲಯದ ಆದೇಶ ತಮ್ಮ ಗಮನಕ್ಕೆ ಬಂದಿರಲಿಲ್ಲ ಮತ್ತು ಎರಡು ದಿನಗಳ ಹಿಂದಷ್ಟೇ ಹೊಸ ADGP ಅವರು ಲೋಕಾಯುಕ್ತಕ್ಕೆ ನಿಯೋಜನೆ ಆಗಿರುವ ಬಗ್ಗೆ ತಿಳಿಸಿದರು.
ತನಿಖಾಧಿಕಾರಿ ಮತ್ತು ಲೋಕಾಯುಕ್ತ SP ಅವರಿಗೆ Show Cause Notice ಅನ್ನು ಜಾರಿ ಮಾಡಿದ ನ್ಯಾಯಾಧೀಶರು ದಿನಾಂಕ 12/09/2024 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಆದೇಶಿಸಿದರು.