ಬೆಂಗಳೂರು, (www.thenewzmirror.com) ;
ಸಾಕಷ್ಟು ಕುತೂಹಲ ಮೂಡಿಸಿದ್ದ ಲೋಕಸಮರದ ಫಲಿತಾಂಶ ಹೊರ ಬಿದ್ದಿದೆ. ಚುನಾವಣೆಗೂ ಮೊದಲು ಬಿಜೆಪಿ ನಾಯಕರು ಅದರಲ್ಲೂ ಸ್ವತಃ ಪ್ರಧಾನಿ ಮೋದಿ ಅವರೇ ಈ ಬಾರಿ ಚಾರ್ ಸೌ ಬಾರ್ ಅಂತ ಹೇಳಿಕೆ ಕೊಟ್ಟಿದ್ದರು. ಆದರೆ ಮೂರನೇ ಬಾರಿ ಪ್ರಚಂಡ ಬಹುಮತದೊಂದಿಗೆ ದೆಹಲಿಯ ಗದ್ದುಗೆ ಹಿಡಿಬೇಕು ಅಂತ ಅಂದುಕೊಂಡಿದ್ದ ಪ್ರಧಾನಿ ಮೋದಿಗೆ ದೇಶದ ಮತದಾರರು ಬಿಗ್ ಶಾಕ್ ಕೊಟ್ಟಿದ್ದಾರೆ. ಅಬ್ ಕಿ ಬಾರ್ ಚಾರ್ ಸೌ ಬಾರ್ ಅಂತಿದ್ದ ಬಿಜೆಪಿ ನಾಯಕರು ಅಟ್ ಲೀಸ್ಟ್ ತೀ ಸೌ ಪಾರ್ ಅನ್ನೋ ಸ್ಥಿತಿಗೆ ತಂದಿಟ್ಟಿದ್ದಾರೆ.
2019 ರ ಚುನಾವಣೆಯಲ್ಲಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ಬಿಜೆಪಿ ಕೈ ಹಿಡಿದಿದ್ದವು. ಆದರೆ ಈ ಬಾರಿ ಈ ಮೂರು ರಾಜ್ಯಗಳಲ್ಲಿ ಎನ್ ಡಿಎ ಬೆಂಬಲಿಸುವ ಬದಲು ಇಂಡಿ ಕೂಟವನ್ನ ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ.
ಹಾಗಿದ್ರೆ ಯಾವ್ಯಾವ ರಾಜ್ಯದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಯಾರೆಲ್ಲ ಗೆದ್ದಿದ್ದಾರೆ ಅನ್ನೋ ಮಾಹಿತಿ ಬೇಕಂದ್ರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಳ್ಳಿ., 👇🏻
ಸರ್ಕಾರ ರಚನೆಗೆ ಜೋಡೆತ್ತಿನಿಂದ ಸರ್ಕಸ್…!
2019 ರ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಮ್ಯಾಜಿಕ್ ನಂಬರ್ ದಾಟುವಲ್ಲಿ ವಿಫಲವಾಗಿದೆ. ಹೀಗಾಗಿ ಬಿಜೆಪಿ ಮೈತ್ರಿ ಪಕ್ಷಗಳು ಸೇರಿ ಎನ್ ಡಿಎ ಮಾಡಿಕೊಂಡಿದ್ದರೂ ಇಂಡಿ ಮೈತ್ರಿ ಕೂಟ ಎಲ್ಲಾದ್ರ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವನ್ನ ತನ್ನ ಕೂಟಕ್ಕೆ ಸೇರಿಸಿಕೊಂಡರೆ ಮೋದಿ ಅಮಿತ್ ಶಾ ಕನಸು ನುಚ್ಚು ನೂರಾಗೋ ಸಾಧ್ಯತೆಯಿದೆ. ಹೀಗಾಗಿ ಈ ಹಿಂದೆ ಎನ್ ಡಿಎ ಮೈತ್ರಿ ಕೂಟದಲ್ಲಿದ್ದು, ಇಂಡಿ ಕೂಟ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರನ್ನ ಸೆಳೆಯೋಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ನಾಳೆ ಎನ್ ಡಿಎ ಮೈತ್ರಿ ಕೂಟದ ನಾಯಕರ ಸಭೆ ಕರೆದಿದ್ದು, ಈ ಸಭೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.