ನವದೆಹಲಿ, ( www.thenewzmirroe.com ) ;
ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಾಗೂ ಪಾಕಿಸ್ತಾನಕ್ಕೆ ವಿಶ್ವ ಮಟ್ಟದಲ್ಲಿ ತಲೆ ತಗ್ಗಿಸುವ ಪ್ರಕರಣ ಅಂದ್ರೆ ಅಭಿನಂದನ್ ವರ್ಧಮಾನ್ ಪ್ರಕರಣ. ಮಿಗ್ 21 ಯುದ್ದ ವಿಮಾನ ಹಾರಾಟದ ಸಮಯದಲ್ಲಿ ಪಾಕಿಸ್ತಾನಿಗಳ ಕೈಗೆ ಸಿಕ್ಕಿ ಕೊನೆಗೆ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸ್ಸಾಗಿದ್ದ ಅಭಿನಂದನ್ ವರ್ಧಮಾನ್ ಸಾಹಸಕ್ಕೆ ಕಾರಣವಾಗಿದ್ದ MIG -21 ಯುದ್ಧ ವಿಮಾನದ ವಿಚಾರದಲ್ಲಿ ಭಾರತೀಯ ವಾಯುಸೇನೆ ಮಹತ್ವದ ತೀರ್ಮಾನ ಮಾಡಿದೆ.
ಹಾರಾಟದ ಸಮಯದಲ್ಲಿ ಆಗಾಗ್ಗೆ ಅಪಘಾತಗಳನ್ನ ಎದುರಿಸುತ್ತಿರುವ ಮಿಗ್ 21 ವಿಮಾನದ ಹಾರಾಟವನ್ನ ಭಾರತೀಯ ವಾಯುಪಡೆ ತಾತ್ಕಾಲಿಕವಾಗಿ ನಿಷೇಧಿಸಿದೆ.
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಮಿಗ್ 21 ವಿಮಾನ ಪತನಗೊಂಡು ಮೂವರು ಸಾವನ್ನಪ್ಪಿದ್ದರು. ಘಟನೆ ಕುರಿತಂತೆ ತನಿಖೆ ಪ್ರಗತಿಯಲ್ಲಿ ಇರುವಾಗಲೇ IAF ಈ ಮಹತ್ವದ ತೀರ್ಮಾನ ಮಾಡಿದೆ.
ಮೇ 8 ರಂದು ರಾಜಾಸ್ಥಾನದಲ್ಲಿ ನಡೆದಿದ್ದ ಅಪಘಾತದ ತನಿಖೆ ಇನ್ನೂ ಪ್ರಗತಿಯಲ್ಲಿ ಇರೋದ್ರಿಂದ ಅದು ಮುಕ್ತಾಯವಾಗುವವರೆಗೂ ಮಿಗ್ -21 ಬೈಸನ್ ಯುದ್ಧ ವಿಮಾನದ ಮೂರೂ ಸ್ಕ್ವಾಡ್ರನ್‌ಗಳು ಬಳಕೆಯಲ್ಲಿರೋದಿಲ್ಲ ಎಂದು ಭಾರತೀಯ ವಾಯುಸೇನೆ ಘೋಷಣೆ ಮಾಡಿದೆ.
ಕಳೆದ ಐದು ದಶಕಗಳಿಂದ ಮಿಗ್-21 ಫೈಟರ್‌ಜೆಟ್‌ನ ವಿವಿಧ ಆವೃತ್ತಿಗಳು ಭಾರತೀಯ ಏರ್‌ಪೋರ್ಸ್‌ಗೆ ಸೇರ್ಪಡೆಯಾಗುತ್ತಿದೆ. ಈಗ ರಫೇಲ್ ಯುದ್ಧವಿಮಾನಗಳ ಬಳಕೆ ಆರಂಭ ಮಾಡಿದ ಬಳಿಕ, ಐಎಎಫ್ ಒಂದೊಂದಾಗಿ ಇದನ್ನು ಹೊರಹಾಕುತ್ತಿದೆ.
1960ರ ನಂತರ ಮಿಗ್-21 ಯುದ್ದ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ವು. ಸದ್ಯ IAF ಮೂಲಗಳ ಪ್ರಕಾರ 2025ರ ವೇಳೆಗೆ ಎಲ್ಲಾ ಮಿಗ್-21 ವಿಮಾನಗಳಿಗೆ ನಿವೃತ್ತಿ ನೀಡಲು ನಿರ್ಧರಿಸಿದೆ.