ಬೆಂಗಳೂರು, (www.thenewzmirror.com ) ;
ಮೇ 6 ಅಂದ್ರೆ ಮುಂದಿನ ಶನಿವಾರ ಸಿಲಿಕಾನ್ ಸಿಟಿ ಸಂಪೂರ್ಣ ಮೋದಿಮಯ ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತಕ್ಕೆ ತರಬೇಕು ಎನ್ನುವ ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮೇ 6 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂದು ರಾಜಧಾನಿಯ 17 ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ. ದೂರ ರೋಡ್ ಶೋ ನಡೆಸಲಿದ್ದಾರೆ.
ಬೆಂಗಳೂರಿನ 23 ವಿಧಾನಸಭಾ ಕ್ಷೇತ್ರಗಳಲ್ಲಿ ಈ ರೋಡ್ ಶೋ ನಡೆಯಲಿದ್ದು, ಸುಮಾರು 38 ಕಿ.ಮೀ ರೋಡ್ ಶೋ ಸಾಗಲಿದೆ. ಗುಜರಾತ್ ಮಾದರಿಯಲ್ಲಿ ಬೆಂಗಳೂರು ಮತದಾರರನ್ನು ಸೆಳೆಯಲು ಬಿಜೆಪಿ ಭರ್ಜರಿ ಪ್ಲಾನ್ ಮಾಡಿದೆ. ಈಗಾಗಲೇ ನಮೋ ಮೆಗಾ ರೋಡ್ ಶೋ ಮ್ಯಾಪ್ ಕೂಡ ರೆಡಿಯಾಗಿದೆ.
ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ 10.1 ಕಿ.ಮೀ. ಸಂಜೆ 4ರಿಂದ ರಾತ್ರಿ 10ರ ವರೆಗೆ 26.5 ಕಿ.ಮೀ. ದೂರ ರೋಡ್ ಶೋ ನಡೆಯಲಿದ್ದು, ಹತ್ತು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳೋ ನಿರೀಕ್ಷೆಯಿದೆ.
ಸಂಚಾರ ದಟ್ಟಣೆ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನರಿಗೆ ತೊಂದರೆಯಾಗದಂತೆ ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
modi road show
ಬೆಳಗ್ಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಸಿ.ವಿ ರಾಮನ್ ನಗರದಿಂದ ರೋಡ್ ಶೋ ಆರಂಭವಾಗಲಿದ್ದು, ಬ್ರಿಗೇಡ್ ರೋಡಿನಲ್ಲಿ ಮೋದಿ ರೋಡ್ ಶೋ ಅಂತ್ಯವಾಗಲಿದೆ.
ಮೇ.6ರಂದು ಕೋಣನಕುಂಟೆಯಿಂದ ರೋಡ್ ಶೊ ಆರಂಭಗೊಂಡು, ಜಯನಗರ, ಗಾಂಧಿ ಬಜಾರ್, ಶಾಂತಿನಗರ, ಬಿನ್ನಿಮಿಲ್ ಮಾಗಡಿ ರಸ್ತೆ, ಟೋಲ್ ಗೇಟ್, ದಾಸರಹಳ್ಳಿ, ಹೌಸಿಂಗ್ ಬೋರ್ಡ್ ಬಸವೇಶ್ವರ ನಗರ, ನವರಂಗ್, ಮಲ್ಲೇಶ್ವರಂ,ಸಂಪಿಗೆ ರಸ್ತೆ ಸರ್ಕಲ್ ಮಾರಮ್ಮ, ದೇವಸ್ಥಾನದವರೆಗೆ ಸಾಗಲಿದೆ.
ಮೇ 6 ಮೋದಿಮಯ
– ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ಮೋದಿ ರೋಡ್ ಶೋ
– 28 ಕ್ಷೇತ್ರಗಳಲ್ಲಿ ಕನಿಷ್ಠ 23 ಕ್ಷೇತ್ರಗಳಲ್ಲಿ ಗೆಲುವ ಪ್ಲಾನ್
– ಕೋಣನಕುಂಟೆ, ಮಲ್ಲೇಶ್ವರಂ, ಬೆಂಗಳೂರು ದಕ್ಷಿಣ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಾಮರಾಜಪೇಟೆ, ಚಿಕ್ಕಪೇಟೆ, ಶಿವಾಜಿನಗರ, ಗಾಂಧಿನಗರ, ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ