ಬೆಂಗಳೂರು,(www.thenewzmirror.com);
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ,ಕರ್ನಾಟಕ ಸಂಭ್ರಮ -50ರ ಅಂಗವಾಗಿ, ಅನ್ ಬಾಕ್ಸಿಂಗ್ ಬೆಂಗಳೂರು ಇದರ ಭಾಗವಾಗಿ ಆಯೋಜಿಸಿರುವ ನಮ್ಮ ಜಾತ್ರೆ ಜನಪದ ಸಂಭ್ರಮ ವನ್ನು ಭಾನುವಾರಕ್ಕೆ ಮುಂದೂಡಲಾಗಿದೆ.
ಹಿರಿಯ ಚಲನಚಿತ್ರ ಕಲಾವಿದೆ ಶ್ರೀಮತಿ ಲೀಲಾವತಿ ಅವರ ನಿಧನದಿಂದಾಗಿ ಅವರ ಗೌರವಾರ್ಥ ಈ ಕಾರ್ಯಕ್ರಮವನ್ನು ನಾಳೆ 9- 12- 23ಕ್ಕೆ ಬದಲಾಗಿ 10 -12 -20 23 ಭಾನುವಾರಕ್ಕೆ ಮುಂದೂಡಲಾಗಿದೆ.
ಈ ಮೊದಲು ನಿಗದಿಯಾಗಿದ್ದಂತೆ ಎಲ್ಲಾ ಕಾರ್ಯಕ್ರಮಗಳು ಭಾನುವಾರ ಹಾಗೂ ಸೋಮವಾರ ನಡೆಯುತ್ತದೆ.