ಬೆಂಗಳೂರು, (www.thenewzmirror.com) :
ಚೀನಾದಿಂದ ಬೆಂಗಳೂರಿಗೆ ಡ್ರೈವರ್ ಲೆಸ್ ಮೆಟ್ರೋ ಬೋಗಿಗಳು ಬಂದಿವೆ. ಹೆಬ್ಬಗೋಡಿ ಡಿಪೋಗೆ 6 ಕಾರುಗಳ ಮೊದಲ ರೈಲು ಸೆಟ್ ಇದಾಗಿದೆ.
ಜನವರಿ 24ರಂದು ಚೀನಾದ ಬಂದರಿನಿಂದ ಹೊರಟಿದ್ದ 6 ಕಾರುಗಳ ಮೊದಲ ರೈಲು ಸಮುದ್ರ ಮಾರ್ಗವಾಗಿ ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿದ್ದವು. ಅಲ್ಲಿನ ಪ್ರಕ್ರಿಯೆ ಪೂರ್ಣಗೊಂಡು ಲಾರಿಗಳ ಮೂಲಕ ಅವುಗಳನ್ನು ಬೆಂಗಳೂರಿಗೆ ತರಲಾಗಿದೆ.
ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಮೆಟ್ರೋ ರೈಲು ಈ ಚಾಲಕ ರಹಿತ ಟ್ರೈನ್ ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಸಂಚಾರ ಮಾಡಲಿದೆ ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದೊರಗಿನ ಹಳದಿ ಮಾರ್ಗದಲ್ಲಿ ಈ ರೈಲಿನ ಓಡಾಟ ಚೀನಾದಿಂದ ಬರಬೇಕಿದ್ದ ಬೋಗಿಗಳ ವಿಳಂಬದಿಂದಾಗಿ ಹಳದಿ ಮಾರ್ಗದ ಲೋಕಾರ್ಪಣೆ ತಡವಾಗಿತ್ತು. ಇದೀಗ ಈ ಮಾರ್ಗದಲ್ಲಿ ಮೆಟ್ರೋ ಸಂಚರಿಸುವ ದಿನ ಹತ್ತಿರ ಈಗ ಡ್ರೈವರ್ ಲೆಸ್ ಮೆಟ್ರೋ ಬೋಗಿ ಆಗಮನವಾಗಿದೆ.