ಬೆಂಗಳೂರು, (www.thenewzmirror.com);
ಬೆಂಗಳೂರು ಮೆಟ್ರೋ(BMRCL) ನಲ್ಲಿ ಅಘಾತಕಾತಿ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಟ್ರ್ಯಾಕ್ ಮೇಲೆ ಮೊಬೈಲ್ ಬಿದ್ದಿದೆ ಎಂದು ಅದನ್ನ ಎತ್ತಿಕೊಳ್ಳೋಕೆ ಟ್ರ್ಯಾಕ್ ಮೇಲೆ ಜಿಗಿದ ಘಟನೆ ನಡೆದಿದೆ.
ಇಂದಿರಾ ನಗರದ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು 750 KV (ಕಿಲೋ ವೋಲ್ಟ್) ವಿದ್ಯುತ್ ಹರಿಯುತ್ತಿದ್ದರೂ ಅದನ್ನ ಲೆಕ್ಕಿಸದೆ ಟ್ರ್ಯಾಕ್ ಗೆ ಜಿಗಿದಿದ್ದಾಳೆ. ನಿಲ್ದಾಣದ ಫ್ಲಾಟ್ ಫಾರಂ 1ರಲ್ಲಿ ಈ ಘಟನೆ ನಡೆದಿದ್ದು, ಏಕಾಏಕಿ ಟ್ರ್ಯಾಕ್ ಗೆ ಜಿಗಿದಿದ್ದನ್ನ ಗಮನಿಸಿದ ಮೆಟ್ರೋ ಸಿಬ್ಬಂದಿ ಆಗಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ.
ಘಟನೆದಾಗಿ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಓಡಾಟ ಸ್ಥಗಿತಗೊಂಡಿತ್ತು.ಹಾಗೆನೇ ಇತರ ಪ್ರಯಾಣಿಕರ ಸಹಾಯದಿಂದ ಆಕೆಯನ್ನ ಮೊಬೈಲ್ ಸಮೇತ ಮೇಲಕ್ಕೆ ಎತ್ತಲಾಯ್ತು.