ಪ್ಯಾರೀಸ್, (www.thenewzmirror.com) ;
ಪಾಕಿಸ್ತಾನ ಭಾರತ ಬದ್ದ ವೈರಿಗಳು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ, ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ರೆ ಅದು ಹೈ ವೋಲ್ಟೇಜ್ ಪಂದ್ಯ ಆಗೋದ್ರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಪ್ಯಾರೀಸ್ ಒಲಂಪಿಕ್ ನಲ್ಲಿಯೂ ಭಾರತದ ಚಿನ್ನದ ಆಸೆಗೆ ಅಡ್ಡ ಬಂದ ಪಾಕಿಸ್ತಾನ ಚಿನ್ನ ಬದಲು ಬೆಳ್ಳಿ ಸಿಗುವಂತೆ ಮಾಡಿದೆ.
ಹೌದು, ಪ್ಯಾರೀಸ್ ಒಲಂಪಿಕ್ ನಲ್ಲಿ ಜಾವಲಿನ್ ಎಸೆತದಲ್ಲಿ ಪದಕ ತಂದು ಕೊಡುವ ನಿರೀಕ್ಷೆ ಹುಟ್ಟಿಸಿದ್ದ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು, ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಅದೇ ನಿರೀಕ್ಷೆ ಪ್ಯಾರೀಸ್ ಒಲಂಪಿಕ್ ನಲ್ಲಿ ಇಟ್ಟುಕೊಳ್ಳಲಾಗಿತ್ತು.
ಆದರೆ ನೆರೆಯ ಪಾಕಿಸ್ತಾನದ ಆರ್ಷದ್ ನದೀಮ್(92.97 ಮೀಟರ್) ಒಲಿಂಪಿಕ್ ದಾಖಲೆಯೊಂದಿಗೆಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ ನೀರಜ್ ಚೋಪ್ರಾ 89.45 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ರಜತ ಪದಕ ತಮ್ಮದಾಗಿಸಿಕೊಂಡರು. ಆ ಮೂಲಕ ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 5ನೇ ಒಲಿಂಪಿಕ್ ಪದಕ ತನ್ನದಾಗಿಸಿಕೊಂಡಂತಾಗಿದೆ.
ಪಾಕಿಸ್ತಾನದ ಅರ್ಷದ್ ನದೀಂ ಎರಡನೇ ಎಸೆತದಲ್ಲಿ 92.97 ಮೀ. ದೂರ ಎಸೆದು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ಬರೆದರು. ಗ್ರೆನೆಡಾದ ಆಂಡರ್ಸನ್ ಪೀರ್ಟನ್ 88.87 ಮೀ. ಎಸೆತದೊಂದಿಗೆ ಕಂಚಿನ ಪದಕ ಗಳಿಸಿದರು. ನೀರಜ್ ಚೋಪ್ರಾ ಮೊದಲ, 3, 4, 5 ಮತ್ತು 6 ಪ್ರಯತ್ನಗಳಲ್ಲಿ ವಿಫಲರಾದರು. ಇದರಿಂದ ತಮ್ಮ ಸಾಧನೆ ಉತ್ತಮ ಪಡಿಸಿಕೊಳ್ಳುವ ಅವಕಾಶ ಕಳೆದುಕೊಂಡರು.
ಅರ್ಹತಾ ಸುತ್ತಿನ ಹೀರೋ
ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರದು ಅಮೋಘ ಪರಾಕ್ರಮ. ಒಂದೇ ಎಸೆತಕ್ಕೆ 89.34 ಮೀ. ಸಾಧನೆಗೈದು ಮೊದಲ ಸ್ಥಾನದೊಂದಿಗೆ “ಮಿಲಿಯನ್ಸ್ ಹೋಪ್ಸ್’ ಮೂಡಿಸಿದ ಹೆಗ್ಗಳಿಕೆ ಇವರದು. ಇದು ಅವರ ಜಾವೆಲಿನ್ ಬಾಳ್ವೆಯ 2ನೇ ಶ್ರೇಷ್ಠ ನಿರ್ವಹಣೆಯಷ್ಟೇ ಅಲ್ಲ, ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲೇ 2ನೇ ಅತ್ಯುತ್ತಮ ಸಾಧನೆಯಾಗಿದೆ. 2000ದ ಸಿಡ್ನಿ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಜಾನ್ ಝೆಲೆಜ್ನಿ 89.39 ಮೀ. ಎಸೆದದ್ದು ದಾಖಲೆ.
ಚೋಪ್ರಾ ಚಿನ್ನ ಪಡೆದು ಮೂರು ವರ್ಷ ಪೂರ್ಣ..!
ನೀರಜ್ ಚೋಪ್ರಾ ಟೋಕಿಯೊದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿ ಬುಧವಾರಕ್ಕೆ (ಆ. 7) ಭರ್ತಿ 3 ವರ್ಷ ತುಂಬಿತು. ಪ್ಯಾರಿಸ್‌ನಲ್ಲಿ ಆ. 8ರಂದು ಚಿನ್ನ ಕ್ಕಾಗಿ ಸ್ಪರ್ಧಿಸಿದ್ರು .ಆದರೆ ಫೈನಲ್ ನಲ್ಲಿ ಪಾಕಿಸ್ತಾನದ ನದೀಮ್ ಪ್ರಥಮ ಸ್ಥಾನ ಪಡೆದ್ರೆ ನೀರಜ್ ಬೆಳ್ಳಿ ಪದಕಕಗಕೆ ತೃಪ್ತಿಪಟ್ಟುಕೊಂಡರು.