ಬೆಂಗಳೂರು, (www.thenewzmirror com) ;
ಒ್ಯಾರೀಸ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ವಿಚಾರದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್ ಕೊನೆ ಹಂತದಲ್ಲಿ ಅನರ್ಹರಾಗಿದ್ರು. ಕೇವಲ 100 ಗ್ರಾಂ ತೂಕ ಹೆಚ್ಚಿಸಿಕೊಂಡ ಕಾರಣಕ್ಕಾಗಿ ಫೈನಲ್ ಆಡುವ ಅವಕಾಶ ತಪ್ಪಿಸಿಕೊಂಡ ವಿನೇಶ್ ಕುರಿತಾದ ಭಯಾನಕ ಸತ್ಯವನ್ನ ಆಕೆಯ ಕೋಚ್ ಹೊರಹಾಕಿದ್ದಾರೆ.
ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಅವರು ಕೇವಲ 100 ಗ್ರಾಮ್ ಹೆಚ್ಚುವರಿ ತೂಕ ಹೊಂದಿದ್ದ ಕಾರಣ ಬೆಳ್ಳಿ ಪದಕವನ್ನೂ ಪಡೆಯದೇ ಅನರ್ಹತೆಗೊಂಡಿದ್ರು. ಫೈನಲ್ ಗೂ ಮುನ್ನ ತಮ್ಮ ದೇಹದ ತೂಕ ಹೆಚ್ಚಿಸಿಕೊಂಡಿದ್ದ ಪೋಗಟ್, ಅದನ್ನ ಇಳಿಸುವ ನಿಟ್ಟಿನಲ್ಲಿ ಕಠಿಣ ಅಭ್ಯಾಸ ಮಾಡಿದ್ರು. ಅದು ಯಾವ ಹಂತಕ್ಕೆ ಹೋಗಿತ್ತುವೆಂದರೆ ತಮ್ಮ ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗಿತ್ತಂತೆ. ಹೀಗಂತ ಆಕೆಯ ಕೋಚ್ ವೊಲ್ರ್ ಅಕೋಸ್ ಭಯಾನಕ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಫೈನಲ್ ಮೊದಲು ತೂಕ ಇಳಿಸಲು ಮುಂದಾದ ಅವರು ಸಾವಿನ ಮನೆಯ ಕದ ತಟ್ಟಿ ಬಂದಿದ್ದರು. ಪೋಗಟ್ ಮ್ಯಾಟ್ಗೆ ಹತ್ತೋ ಮೊದಲು ತಮಗೆ ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ ಎಲ್ಲಿತನಕ ಎಂದರೆ ತೂಕ ಇಳಿಸಲು ಹೋಗಿ ಸಾಯುವ ಹಂತಕ್ಕೆ ಹೋಗಿದ್ದರು ಅಂತ ತಮ್ಮ ಶಿಷ್ಯೆಯ ಸಾಧನೆಯ ಗುಟ್ಟನ್ನ ಬಿಚ್ಚಿಟ್ಟಿದ್ದಾರೆ.
ಹಂಗೇರಿ ಮೂಲದವರಾದ ಕೋಚ್, ತಮ್ಮ ಅನಿಸಿಕೆಯನ್ನ ಹಂಗೇರಿಭಾಷೆಯಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್ ನಲ್ಲಿ ತನ್ನ ಮೊದಲ ಒಲಿಂಪಿಕ್ ಪದಕವನ್ನು ಪಡೆಯುವ ವಿನೇಶ್ ಫೋಗಟ್ ಅವರ ಬದ್ಧತೆಯನ್ನು ಎತ್ತಿ ತೋರಿಸಿದರು. ಸೆಮಿಫೈನಲ್ ಬಳಿಕ 2.7 ಕೆಜಿ ಹೆಚ್ಚುವರಿ ತೂಕ ಉಳಿದಿತ್ತು. ಒಂದು ಗಂಟೆ ಇಪ್ಪತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡಿಸಿದೆ. ಆದರೆ 1.5 ಕೆ.ಜಿ ಇನ್ನೂ ಉಳಿದಿತ್ತು. , 50 ನಿಮಿಷಗಳ ದೇಹ ದಂಡನೆ ಬಳಿಕ ಆಕೆಯ ದೇಹ ಸಂಪೂರ್ಣವಾಗಿ ನೀರಿನಂಶ ಕೊರತೆಯಿಂದ ಸೊರಗಿತು. ಮಧ್ಯರಾತ್ರಿಯಿಂದ ಬೆಳಿಗ್ಗೆ 5:30 ರವರೆಗೆ, ಅವರು ವಿವಿಧ ಕಾರ್ಡಿಯೋ ಯಂತ್ರಗಳು ಮತ್ತು ಕುಸ್ತಿ ಚಲನೆಗಳಲ್ಲಿ ಕೆಲಸ ಮಾಡಿದರು. ಒಂದೇ ಬಾರಿಗೆ ಸುಮಾರು ಮುಕ್ಕಾಲು ಗಂಟೆಗಳ ಕಾಲ ಶ್ರಮವಹಿಸಿದು. ಎರಡು-ಮೂರು ನಿಮಿಷಗಳ ವಿಶ್ರಾಂತಿಯೊಂದಿಗೆ ನಂತರ ಅವಳು ತೂಕ ಇಳಿಸಲು ಯತ್ನಿಸಿದರು. ಒಂದು ಹಂತದಲ್ಲಿ ಕುಸಿದುಬಿದ್ದರು. ಹೇಗೋ ನಾವು ಆಕೆಯನ್ನು ಎಬ್ಬಿಸಿದೆವು. ಆ ಬಳಿಕ ಏನು ಮಾಡಲು ಸಾಧ್ಯವಾಗಲಿಲ್ಲ ಅಂತ ಬರೆದುಕೊಂಡಿದ್ದಾರೆ.
ಆಕೆ ಇನ್ನಷ್ಟು ಶ್ರಮಪಟ್ಟು ಕಸರತ್ತು ಮುಂದುವರೆಸಿದ್ರೆ ಆಕೆ ಸತ್ತು ಹೋಗುತ್ತಿದ್ದಳು ಅಂತಾನೂ ಬರೆದುಕೊಂಡಿದ್ದಾರೆ.
ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಕಣ್ಣೀರು ಹಾಕುತ್ತಿದ್ದರೂ ಧೈರ್ಯ ಕಳೆದುಕೊಂಡಿರಲಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ.
ಒಲಿಂಪಿಕ್ ಪದಕಕ್ಕೆ ವಿನೇಶ್ ಫೋಗಟ್ ಎಷ್ಟು ಬೆಲೆ ನೀಡುತ್ತಾರೆ ಎಂಬುದನ್ನು ಅವರು ಇದೇ ವೇಳೆ ಬರೆದುಕೊಂಡಿದ್ದಾರೆ. ಕಳೆದ ವರ್ಷ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಅವರೊಂದಿಗೆ ಹರಿದ್ವಾರದಲ್ಲಿ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಬಿಡಲು ಮುಂದಾಗಿದ್ದನ್ನು ಅವರು ಸ್ಮರಿಸಿಕೊಂಡಿದ್ದಾರೆ. ಒಲಿಂಪಿಕ್ ಪದಕಗಳನ್ನು ನದಿಗೆ ಎಸೆಯಬೇಡಿ ಎಂದು ಸಾಕ್ಷಿ ಮತ್ತು ಬಜರಂಗ್ ಗೆ ವಿನೇಶ್ ತಿಳಿ ಹೇಳಿದ್ದನ್ನೂ ಅವರು ಬರೆದಿದ್ದಾರೆ.