ಬೆಂಗಳೂರು, (www.thenewzmirror.com);
ಕಿಂಗ್ ಖಾನ್ ಶಾರುಖ್ ಖಾನ್, ಇದೀಗ ಪುಟಿದೆದ್ದಿದ್ದಾರೆ. ಒಂದಲ್ಲ ಎರಡಲ್ಲ ಮೂರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪಠಾಣ್, ಜವಾನ್, ಡಂಕಿ ಸಿನಿಮಾಗಳು ಹಿಟ್ ಪಟ್ಟಿ ಸೇರಿ ಗಳಿಕೆಯಲ್ಲೂ ಕಮಾಲ್ ಮಾಡಿವೆ. 2023ರಲ್ಲಿ ಟಾಪ್ 5 ಸಿನಿಮಾಗಳ ಪೈಕಿ ಮೂರು ಚಿತ್ರಗಳು ಶಾರುಖ್ ಅವರದ್ದು ಅನ್ನೋದೇ ವಿಶೇಷ.
ಜನವರಿ 25 2023ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಪಠಾಣ್ ರೆಕಾರ್ಡ್ ಗಳೆಲ್ಲವನ್ನೂ ಊಡೀಸ್ ಮಾಡಿತ್ತು. ಈ ಚಿತ್ರದ ಮೂಲಕ ಗಲ್ಲಾಪೆಟ್ಟಿಗೆ ಲೂಟಿಗಿಳಿದ ಬಾಲಿವುಡ್ ಬಾದ್ ಷಾ ಆ ನಂತರ ಜವಾನ್ ಮೂಲಕ ಪ್ರೇಕ್ಷಕರ ಎದುರು ಬಂದರು. ಈ ಎರಡು ಪವರ್ ಪ್ಯಾಕ್ಡ್ ಸಿನಿಮಾಗಳು ಕಲೆಕ್ಷನ್ ನಲ್ಲಿಯೂ ಕಮಾಲ್ ಮಾಡಿದ್ದವು. ಇದೀಗ ಪಠಾಣ್ ಸಿನಿಮಾಗೆ ಒಂದು ವರ್ಷ.
‘ಪಠಾಣ್’ ಸಿನಿಮಾ ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಈ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿತ್ತು. ಬಾಕ್ಸ್‌ಆಫೀಸ್‌ನಲ್ಲಿ ಅಷ್ಟೇ ದೊಡ್ಡ ಮಟ್ಟದ ಕಲೆಕ್ಷನ್ ಫಸಲು ತೆಗೆದಿತ್ತು. ಜವಾನ್ ಕೂಡ ಅಪಾರ ಮೆಚ್ಚುಗೆ ಪಡೆದು ಸಾವಿರ ಕೋಟಿ ಲೂಟಿಮಾಡಿತ್ತು. ಪಠಾಣ್, ಜವಾನ್ ಬಳಿಕ ಬಂದ ಡಂಕಿ ಸಿನಿಮಾ ಧಮಾಕ ಎಬ್ಬಿಸಿತ್ತು.
ಶಾರುಖ್ ಈ ಹಿಂದಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರಂತೆ ಡಂಕಿ ಸಿನಿಮಾವೂ ಅದ್ಭುತ ಪ್ರದರ್ಶನ ಕಂಡಿದೆ. 500 ಕೋಟಿ ಗಳಿಕೆ ಮಾಡಿರುವ ಡಂಕಿ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ಡಂಕಿ ಸಿನಿಮಾದಲ್ಲಿ ತೋರಿಸಲಾಗಿದೆ.
ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.