ಬೆಂಗಳೂರು, (www.thenewzmirror.com) ;
ಮುಖ್ಯಮಂತ್ರಿ ಸಿದ್ದರಾಮಯ್ಯ ತೇಜೋವಧೆ ಮಾಡಲು ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ರಾಜ್ಯಪಾಲರ ನಡೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಇದೇ ಐದರಂದು ಪ್ರತಿಭಟನೆ ಮಾಡಲು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ರಾಜ್ಯ ಸಮಿತಿ ನಿರ್ಧರಿಸಿದೆ.
ರಾಜ್ಯಪಾಲರು ತಮ್ಮ ನಡೆಯನ್ನು ವಾಪಾಸ್ ಪಡೆಯದಿದ್ದರೆ ರಾಜಭವನ ಚಲೋ ಬೃಹತ್ ಪ್ರತಿಭಟನೆಯನ್ನು ಅತೀ ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು, ಹಿಂದುಳಿದ ವರ್ಗಗಳ ನಾಯಕ ಸಿದ್ಧರಾಮಯ್ಯ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬಿಜೆಪಿ ಜೆಡುಎಸ್ ನಾಯಕರಿಗೆ ತಕ್ಕ ಪಾಠವನ್ನು ಕಲಿಸಲು ನಿರ್ಧರಿಸಿದ್ದೇವೆ ಎಂದು ಸಮುದಾಯ ಎಚ್ಚರಿಕೆ ನೀಡಿದೆ.
ಬಹುತತ್ವದ ಮೇಲೆ ನಂಬಿಕೆ ಇಲ್ಲದಿರುವ ಬಿಜೆಪಿ ಈ ಹಿಂದೆ ಶಿಬು ಸೂರೆನ್, ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳಿಸುವ ಕೆಲಸ ಮಾಡಿದೆ ಅದೇ ರೀತಿ ಸಿದ್ದರಾಮಯ್ಯ ಅವರ ಪಾತ್ರ ಮೂಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಇಲ್ಲದಿದ್ದರೂ ಅವರನ್ನು ತನಿಖಾ ವರದಿ ಬರುವ ಮುಂಚೆಯೇ ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಸಿವೆ ಈ ಹಿನ್ನಲೆಯಲ್ಲಿ ಎಲ್ಲ ಶೋಷಿತ ಸಮುದಾಯಗಳು ಒಟ್ಟಾಗಿ ಹೋರಾಟ ನಡೆಸಲು ನಿರ್ಧರಿಸಿವೆ ಎಂದು ಸಮುದಾಯದ ಮುಖಂಡ ಮಾವಳ್ಳಿ ಶಂಕರ್ ಮಾಹಿತಿ ನೀಡಿದ್ರು.
ರಾಜ್ಯಪಾಲರು ಒಬ್ಬ ಶೋಷಿತ, ಹಿಂದುಳಿದ ಸಮುದಾಯದಿಂದ ಬಂದವರಾಗಿದ್ದು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಈ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದರೆ ಅದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಆಗಸ್ಟ್ ಐದರಂದು ರಾಜ್ಯದ ಎಲ್ಲ ಕಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,ಇದರೊಳಗೆ ರಾಜ್ಯಪಾಲರು ತಮ್ಮನಿರ್ಧಾರ ಬದಲಿಸದಿದ್ದರೆ ಈ ಎರಡನೇ ವಾರದಲ್ಲಿ ಬೃಹತ್ ಮಟ್ಟದಲ್ಲಿ ರಾಜಭವನ ಚಲೋ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.