ಬೆಂಗಳೂರು, (www.thenewzmirror.com) ;
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷ ಭರ್ಜರಿ ಜಯ ಬಾರಿಸಿದೆ. ಅದರಂತೆ ಚಂದ್ರಬಾಬು ನಾಯ್ಡು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾಗಿದೆ. ಇದರ ಬೆನ್ನಲ್ಲೇ ನೂತನ ಸಿಎಂ ಗೆ ಜಗನ್ ಮೋಹನ್ ರೆಡ್ಡಿ ಹೆದರಿದ್ರಾ ಎನ್ನುವ ಪ್ರಶ್ನೆ ರಾಜ್ಯದ ಜನತೆಯನ್ನ ಕಾಡುವಂತೆ ಮಾಡಿದೆ.

ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿರುವ ವೈಎಸ್‌ಆರ್‌ಸಿಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ನಿವಾಸಕ್ಕೆ 30ಕ್ಕೂ ಹೆಚ್ಚು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಡಿದ್ದಾರೆ. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಪೊಲೀಸ್ ಭದ್ರತೆಯನ್ನು ಅವರು ಅಧಿಕಾರ ಕಳೆದುಕೊಂಡ ಬಳಿಕ ಹಿಂಪಡೆದಿರೋದು ಇದಕ್ಕೆ ಪ್ರಮುಖ ಕಾರಣ.
ಹೊಸದಾಗಿ ಬಂದಿರುವ ಚಂದ್ರಬಾಬು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಜಗನ್ ಮನೆ ಮುಂಭಾಗದ ರಸ್ತೆಗೆ ಇದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಜಗನ್ ನಿವಾಸದ ಪೊಲೀಸ್ ಭದ್ರತೆಯನ್ನೂ ಸರ್ಕಾರ ತೆಗೆದುಹಾಕಿದ್ದರಿಂದ ಖಾಸಗಿ ಭದ್ರತಾ ಏಜೆನ್ಸಿಯ ಮೊರೆ ಹೋಗಿದ್ದಾರೆ, ಜಗನ್ ನಿವಾಸದಲ್ಲಿ ಸುಮಾರು 30 ಹೊಸ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಜಗನ್ ಮೋಹನ್ ರೆಡ್ಡಿ ಅವರ ಪಕ್ಷವು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಡಿಮೆ ಸಂಖ್ಯೆಯ ಶಾಸಕ ಸ್ಥಾನಗಳನ್ನು ಪಡೆದಿದ್ದರಿಂದ ವಿರೋಧ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದ್ದರಿಂದ, ರಾಜ್ಯ ಸರ್ಕಾರ ಅವರಿಗೆ ಶಾಸಕರ ಸಮಾನ ಭದ್ರತೆಯನ್ನು ನೀಡುತ್ತಿದೆ. ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗಳಿಸಿದ ನಂತರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಸ್ಥಾನಮಾನವನ್ನು ನೀಡಲಾಗುತ್ತದೆ.
ಇತ್ತೀಚೆಗೆ ನಡೆದ ಎಲೆಕ್ಷನ್ ನಲ್ಲಿ ತೆಲುಗು ದೇಶಂ ಪಕ್ಷ 135 ಸ್ಥಾನಗಳನ್ನು ಹಾಗೆನೇ ಜನಸೇನೆ 21 ಸ್ಥಾನಗಳನ್ನು ಗೆದ್ದಿದ್ದರೆ ವೈಎಸ್‌ಆರ್‌ಸಿಪಿ 11 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿತ್ತು. ವೈಎಸ್‌ಆರ್‌ಸಿಪಿ ಸಾಕಷ್ಟು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾದ ಕಾರಣ ಸರ್ಕಾರವು ಅವರಿಗೆ ಶಾಸಕರ ಸಮಾನವಾದ ಭದ್ರತೆಯನ್ನು ಮಾತ್ರ ನೀಡುತ್ತಿದೆ.