ಬೆಂಗಳೂರು, ( www.thenewzmirror.com) ;
ಗೃಹಜ್ಯೋತಿ ಯೋಜನೆಯಡಿ ರಾಜ್ಯ ಜನತೆಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಿದ ರಾಜ್ಯ ಸರ್ಕಾರ ಅದು ಜಾರಿಗೆ ಬರುವ ಮುನ್ನವೇ ರಾಜ್ಯದ ಜನತೆಗೆ ಸದ್ದಿಲ್ಲದೆ ಶಾಕ್ ನೀಡಿದೆ.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿ ಈಗ ಬೆಲೆ ಏರಿಕೆಯನ್ನೂ ಮಾಡಿದೆ. ಮತ್ತೆ ವಿದ್ಯುತ್ ದರ ಏರಿಸುವ ಮೂಲಕ ಮತ್ತೆ ಜನರ ಜೇಬಿನಿಂದ ಹಣ ಮತ್ತೆ ಖಜಾನೆ ಸೇರುವಂತೆ ಮಾಡಿಕೊಂಡಿದೆ.
ಜುಲೈ 1 ರಿಂದಲೇ 200 ಯೂನಿಟ್ ವಿದ್ಯುತ್ ಉಚಿತ ಯೋಜನೆ ಜಾರಿ ಎಂದು ಹೇಳಿದ್ದ ಸರ್ಕಾರ, ಅಂದಿನಿಂದಲೇ ವಿದ್ಯುತ್ ದರ ಪರಿಷ್ಕರಣೆ ಮಾಡಿ ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕೆಲಸ ಮಾಡಿದೆ ಅಂದರೆ ಗ್ರಾಹಕರಿಂದ ಪಡೆದು ಅದನ್ನ ಉಚಿತ ಯೋಜನೆ ಹೆಸರಲ್ಲಿ ಉಚಿತವಾಗಿ ನೀಡುವ ಕೆಲಸಕ್ಕೆ ಮುಂದಾಗಿದೆ.
ಹಾಗಿದ್ದರೆ ಯಾವ ಯಾವ ವಿದ್ಯುತ್ ಕಂಪನಿಗಳಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆ ಮಾಡಲಾಗಿದೆ ಎನ್ನುವುದನ್ನ ನೋಡುವುದಾದರೆ..,
ಎಷ್ಟೆಷ್ಟು ದರ ಹೆಚ್ಚಳ..!
ಬೆಸ್ಕಾಂ 51
ಹೆಸ್ಕಾಂ 50
ಮೆಸ್ಕಾಂ 47
ಸೆಸ್ಕಾಂ 41
ಗೆಸ್ಕಾಂ 34
ಬೆಸ್ಕಾಂ
ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ ಗೆ 51 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರ ವರೆಗೆ ಪ್ರತಿ ಯೂನಿಟ್ ಗೆ 50 ಪೈಸೆ ಹೆಚ್ಚಳ ಮಾಡಲು ಕೆಇಆರ್ ಸಿ ತೀರ್ಮಾನಿಸಿದೆ.
ಮೆಸ್ಕಾಂ
ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 47 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 46 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.
ಸೆಸ್ಕಾಂ
ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 41 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.
ಹೆಸ್ಕಾಂ
ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 50 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.
ಗೆಸ್ಕಾಂ
ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 34 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 33 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.