ಬೆಂಗಳೂರು, (www.thenewzmirror.com) ;
ಲೋಕಸಭೆಯಲ್ಲಿ ಇತ್ತೀಚೆಗೆ ‘ಚಕ್ರವ್ಯೂಹ’ ಭಾಷಣ ಮಾಡಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ನಡೆಸಲು ಯೋಜಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಇಡಿ ದಾಳಿ ಬಗ್ಗೆ ಅಲ್ಲಿನ ಮೂಲಗಳಿಂದ ಮಾಹಿತಿಯನ್ನು ಪಡೆದಿದ್ದೇನೆ. ಕೇಂದ್ರ ತನಿಖಾ ಸಂಸ್ಥೆ ನನ್ನ ವಿರುದ್ಧ ದಾಳಿಯನ್ನು ಯೋಜಿಸುತ್ತಿದೆ. ಅಂತಹ ಕ್ರಮದ ಸಾಧ್ಯತೆಯ ಇದ್ದರೆ ಇಡಿ ಅಧಿಕಾರಿಗಳನ್ನು ತೆರೆದ ತೋಳುಗಳಿಂದ ಸ್ವಾಗತಿಸುವುದಾಗಿ ಘೋಷಿಸಿದ್ದಾರೆ.