ಬೆಂಗಳೂರು, (www.thenewzmirror.com);
ಇಡೀ ದೇಶಾದ್ಯಂತ ಚಳಿಗಾಲ ಆರಂಭವಾಗಿದೆ. ಅದರಲ್ಲೂ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಚಳಿಗೆ ಜನಜೀವನ ಸಂಪೂರ್ಣ ಹದಗೆಟ್ಟಿದೆ. ನಿರೀಕ್ಷಗೂ ಮೀರಿ ಚಳಿ ಇರುವುದರಿಂದ ಜನ ಮನೆಯಿಂದ ಆಚೆ ಬರೋದಕ್ಕೂ ಯೋಚನೆ ಮಾಡುವಂತಾಗಿದೆ.
ರಾಜಸ್ಥಾನದಲ್ಲಿ ದಾಖಲೆ ಪ್ರಮಾಣದಲ್ಲಿ ಚಳಿ ದಾಖಲಾಗಿದೆ. ಹವಾಮಾನ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ರಾಜಸ್ಥಾನದ ಬಹುತೇಕ ಜಿಲ್ಲೆಗಳಲ್ಲಿ ಸುಮಾರು ೪ ಡಿಗ್ರಿ ಸೆಲ್ಸಿಯಸ್ ಗೆ ತಾಪಮಾನ ಇಳಿಕೆಕಂಡಿದೆಯಂತೆ. ಅದರಲ್ಲೂ ಫತೇಪುರ್ ನಗರದಲ್ಲಿ ಕನಿಷ್ಠ ತಾಪಮಾನ 1.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತ್ಯಂತ ಶೀತಲವಾಗಿದೆ ಎಂದು ಐಎಂಡಿ (ಭಾರತೀಯ ಹವಾಮಾನ ಇಲಾಖೆ) ವರದಿ ಕೊಟ್ಟಿದೆ.
ರಾಜಸ್ಥಾನದ ಇತರ ನಗರಗಳಲ್ಲಿ ಎಷ್ಟೆಷ್ಟು ತಾಪಮಾನ ದಾಖಲಾಗಿದೆ ಎನ್ನುವುದನ್ನ ನೋಡುವುದಾದರೆ.., ಕರೌಲಿ 5.2°C, ಸಂಗರಿಯಾ 6°C, ವಂಸತ್ಲಿ 7.7°C, ಉದಯಪುರ 7.9°C, ಬಿಕಾನೇರ್ 9.3°C ದಾಖಲಾಗಿದೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ 6.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಹಿಂದಿನ ದಿನಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದ ಕೆಲ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ.