ಬೆಂಗಳೂರು, (www.thenewzmirror.com);
ಖ್ಯಾತ ತಬಲವಾದಕ , ಪದ್ಮವಿಭೂಷಣ ಪುರಸ್ಕೃತ ಜಾಕೀರ್ ಹುಸೇನ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 73 ವೃಷ ವಯಸ್ಸಾಗಿತ್ತು.
ಜಾಕಿರ್ ಅವ್ರನ್ನ ಇತ್ತಿಚಿಗಷ್ಟೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ತೀವ್ರ ಹೃದಯ (Heart) ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರಿಂದ ಅವರನ್ನ ದಾಖಲು ಮಾಡಲಾಗಿತ್ತು. ಐಸಿಯುವಿನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವ್ರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಸಧ್ಯ ಜಾಕೀರ್ ಹುಸೇನ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಜಾಕೀರ್ ಹುಸೇನ್ ಅವ್ರ ಹೆಸರನ್ನ ಸಂಗೀತ ಜಗತ್ತಿನಲ್ಲಿ ಗೌರವದಿಂದ ತೆಗೆದುಕೊಳ್ಳಲಾಗುತ್ತದೆ. 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದ ಉಸ್ತಾದ್ ಜಾಕಿರ್ ಹುಸೇನ್ ಅವರಿಗೆ 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನ ನೀಡಲಾಯಿತು. ಜಾಕಿರ್ ಹುಸೇನ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನ ಸಹ ಪಡೆದಿದ್ದಾರೆ.