Good News | ಬೆಳವಣಿಗೆ ಮತ್ತು ವಿಸ್ತರಣೆಗಾಗಿ ಯುಕೆ & ಕಂ. ಜೊತೆಗೆ ಪಾಲುದಾರಿಕೆ ಮಾಡಿಕೊಂಡ ರಿಪೋಸ್ ಮ್ಯಾಟ್ರೆಸ್

Repose Mattress partners with UK & Co. for growth and expansion

ಬೆಂಗಳೂರು, (www.thenewzmirror.com) ;

ಪ್ರೀಮಿಯಂ ಮ್ಯಾಟ್ರೆಸ್ ಉದ್ಯಮದಲ್ಲಿ ಪ್ರಮುಖ ಸಂಸ್ಥೆಯಾಗಿರುವ ರಿಪೋಸ್ ಮ್ಯಾಟ್ರೆಸ್ ಇದೀಗ ಜನಪ್ರಿಯ ಕೌಟುಂಬಿಕ ವಹಿವಾಟು ಸಲಹಾ ಸಂಸ್ಥೆ ಯುಕೆ & ಕಂ. ಜೊತೆಗೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯು ವಹಿವಾಟನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದು, ಮ್ಯಾಟ್ರೆಸ್ ಉದ್ಯಮದಲ್ಲಿ ದಶಕಗಳಷ್ಟು ಅನುಭವವನ್ನು ಹೊಂದಿರುವ ಮತ್ತು ಹದಿನೇಳು ರಾಜ್ಯಗಳಲ್ಲಿ ಕಾರ್ಯಾಚರಣೆಯನ್ನು ಹೊಂದಿರುವ ರಿಪೋಸ್ ಮ್ಯಾಟ್ರೆಸ್ಸಸ್‌ ಮುಂದಿನ ಹಂತದ ಬೆಳವಣಿಗೆ ಮತ್ತು ವಿಸ್ತರಣೆಯ ಪ್ರಯಾಣವನ್ನು ಆರಂಭಿಸಿದಂತಾಗಿದೆ.

RELATED POSTS

ಯುಕೆ & ಕಂ ಸಂಸ್ಥಾಪಕ ಹಾಗೂ ಜನಪ್ರಿ ಬ್ಯುಸಿನೆಸ್ ಸಲಹೆಗಾರ ಉಲ್ಲಾಸ್ ಕಾಮತ್ ಅವರ ನಾಯಕತ್ವದಲ್ಲಿ ಹಲವು ಉದ್ಯಮಗಳಿಗೆ ಹೊಸ ಎತ್ತರಕ್ಕೆ ಏರಲು ಯುಕೆ & ಕಂ. ನೆರವಾಗಿದೆ. ಉತ್ಪನ್ನ ತಂತ್ರಜ್ಞಾನ, ಮಾರಾಟ, ಮಾರ್ಕೆಟಿಂಗ್, ವಿತರಣೆ ಮತ್ತು ಹಣಕಾಸು ಯೋಜನೆಯಲ್ಲಿ ಮಹತ್ವದ ಅನ್ವೇಷಣೆಗಳನ್ನು ಮಾಡಲು ಇದು ನೆರವಾಗಿದೆ. ಈ ಪಾಲುದಾರಿಕೆಯಿಂದಾಗಿ ತನ್ನ ಕಾರ್ಯಾಚರಣೆಯನ್ನು ಮತ್ತು ಮಾರ್ಕೆಟ್‌ನ ಪ್ರಸ್ತುತತೆಯನ್ನು ವಿಸ್ತರಿಸಲು ಯುಕೆ & ಕಂ. ಪರಿಣಿತಿಯನ್ನು ಬಳಸಿಕೊಳ್ಳುವ ಗುರಿಯನ್ನು ರಿಪೋಸ್ ಮ್ಯಾಟ್ರೆಸ್ ಹೊಂದಿದೆ.

ಪಾಲುದಾರಿಕೆಯ ಬಗ್ಗೆ ಮಾತನಾಡಿದ ಯುಕೆ & ಕಂ. ಸಂಸ್ಥಾಪಕ ಉಲ್ಲಾಸ್ ಕಾಮತ್‌ “ರಿಪೋಸ್ ಮ್ಯಾಟ್ರೆಸ್ ಭಾರತೀಯ ಮ್ಯಾಟ್ರೆಸ್ ಮಾರ್ಕೆಟ್‌ನಲ್ಲಿ ಅಪಾರ ಬೆಳವಣಿಗೆ ಸಾಧ್ಯತೆಯನ್ನು ಪ್ರದರ್ಶಿಸಿದೆ. ನಮ್ಮ ಸಹಭಾಗಿತ್ವದಿಂದಾಗಿ ಅವರ ಬ್ಯುಸಿನೆಸ್ ಕಾರ್ಯತಂತ್ರವನ್ನು ಇನ್ನಷ್ಟು ಬಲಪಡಿಸಲಾಗುತ್ತದೆ ಮತ್ತು ಇನ್ನಷ್ಟು ಬೆಳವಣಿಗೆ ಕಾಣಲು ಸಹಾಯ ಮಾಡಲಾಗುತ್ತದೆ. ಅನ್ವೇಷಣೆ, ಮಾರುಕಟ್ಟೆ ವಿಸ್ತರಣೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೇಲೆ ಗಮನಹರಿಸುವ ಮೂಲಕ ನಾವು ರಿಪೋಸ್ 2.0 ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಇದು ಉದ್ಯಮದಲ್ಲಿ ಹೊಸ ಮಾನದಂಡವನ್ನು ನಿರ್ಮಿಸುವ ರಿಪೋಸ್‌ನ ಹೊಸ ಅವತಾರವಾಗಿರಲಿದೆ” ಎಂದಿದ್ದಾರೆ.

ಯುಕೆ & ಕಂ. ಜೊತೆಗೆ ಪಾಲುದಾರಿಕೆ ವಹಿಸಲು ಮತ್ತು ಉಲ್ಲಾಸ್ ಕಾಮತ್ ಅವರ ಅಮೂಲ್ಯ ಒಳನೋಟಗಳನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ” ಎಂದು ರಿಪೋಸ್ ಮ್ಯಾಟ್ರೆಸ್ಸೆಸ್‌ನ ವ್ಯವಸ್ಥಾಪಕ ನಿರ್ದೇಶಕ ಬಾಲಚಂದರ್ ಎಸ್‌ ಹೇಳಿದ್ದಾರೆ. ನಮ್ಮ ಉತ್ಪನ್ನ ಪೋರ್ಟ್‌ಫೋಲಿಯೋವನ್ನು ಹೆಚ್ಚಿಸುವುದು, ಕಾರ್ಯಾಚರಣೆಗಳನ್ನು ಸರಾಗಗೊಳಿಸುವುದು ಮತ್ತು ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಅಗತ್ಯವಿರುವ ಸರಿಯಾದ ದಿಕ್ಕನ್ನು ಈ ಸಹಭಾಗಿತ್ವವು ಒದಗಿಸುತ್ತದೆ. ವಿಶ್ವದರ್ಜೆಯ ನಿದ್ರಾ ಸೌಲಭ್ಯಗಳನ್ನು ಒದಗಿಸುವುದಕ್ಕೆ ನಾವು ಬದ್ಧವಾಗಿದ್ದೇವೆ ಮತ್ತು ಈ ಪಾಲುದಾರಿಕೆಯು ಈ ಧ್ಯೇಯವನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರಲಿದೆ.

ರಿಪೋಸ್ ಮ್ಯಾಟ್ರೆಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಮಾನಾಥ್ ಭಟ್ ಮಾತನಾಡಿ “ಮ್ಯಾಟ್ರೆಸ್ ಉದ್ಯಮವು ಪ್ರೀಮಿಯಂ ಮತ್ತು ಸುಧಾರಿತ ನಿದ್ರೆ ತಂತ್ರಜ್ಞಾನಗಳ ಕಡೆಗೆ ಬದಲಾಗುತ್ತಿರುವ ಸಮಯದಲ್ಲಿ ಈ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿದೆ. ನಿದ್ರೆಯ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ಹೆಚ್ಚು ಜಾಗೃತಿ ಮೂಡುತ್ತಿದ್ದು, ಬದಲಾಗುತ್ತಿರುವ ಟ್ರೆಂಡ್ ಅನ್ನು ಬಳಸಿಕೊಳ್ಳಲು ಮತ್ತು ಮಾರುಕಟ್ಟೆಯಲ್ಲಿ ನಾಯಕತ್ವ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ರಿಪೋಸ್ ಮ್ಯಾಟ್ರೆಸ್ ಒಂದು ಉತ್ತಮ ಸ್ಥಾನದಲ್ಲಿದೆ” ಎಂದಿದ್ದಾರೆ.

ಈ ಮಹತ್ವದ ಸಹಭಾಗಿತ್ವದ ಮೂಲಕ ಉದ್ಯಮದಲ್ಲಿ ತನ್ನ ಹೆಜ್ಜೆ ಗುರುತನ್ನು ರಿಪೋಸ್ ಮ್ಯಾಟ್ರೆಸ್ಸೆಸ್ ಬಲಪಡಿಸಲಿದೆ ಮತ್ತು ತನ್ನ ಪ್ರಸ್ತುತ ಮಾರ್ಕೆಟ್‌ಗಳ ಆಚೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಅನ್ವೇಷಣೆ, ಗ್ರಾಹಕರ ಅನುಭವ ಮತ್ತು ಬ್ಯುಸಿನೆಸ್ ಪರಿಣಿತಿಯಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುವ ಮೂಲಕ ಹೊಸ ಎತ್ತರಕ್ಕೆ ಏರುವುದಕ್ಕೆ ಕಂಪನಿ ಆಶಾವಾದವನ್ನು ಹೊಂದಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist