ಬೆಂಗಳೂರು, (www.thenewzmirror.com) ;
ಇಷ್ಟು ದಿನ ಮನುಷ್ಯರು ಆತ್ಮಹತ್ಯೆ(Suicide) ಮಾಡಿಕೊಳ್ಳುತ್ತಿದ್ದ ವಿಚಾರವನ್ನ ಕೇಳುತ್ತಾ ಇದ್ವಿ. ಆದರೆ ಮಧ್ಯೆ ದಕ್ಷಿಣ ಕೋರಿಯಾದಲ್ಲಿ ಇದೇ ಮೊದಲ ಬಾರಿಗೆ ಪುರಸಭೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಬೋಟ್ ಮೆಟ್ಟಿಲುಗಳ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದೆ. ಈ ಪ್ರಕರಣ ಇಡೀ ವಿಶ್ವದಲ್ಲೇ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿದ್ದು ಮೊದಲನೇ ಪ್ರಕರಣ ಎನ್ನಲಾಗುತ್ತಿದೆ.
ಮಧ್ಯೆ ದಕ್ಷಿಣ ಕೋರಿಯಾದ ಪುರಸಭೆಯೊಂದರ ಭಾಗವಾಗಿದ್ದ ರೊಬೋಟ್ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿತ್ತು. ಗುಮಿ ನಗರದ ವಾಸಿಗಳಿಗೆ ಆಡಳಿತಾತ್ಮಕ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ರೋಬೋಟ್ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವು ಅಲ್ಲಿನ ನಿವಾಸಿಗಳ ಬೇಸರಕ್ಕೆ ಕಾರಣವಾಗಿದೆ.
ಗುಮಿ ಕೌನ್ಸಿಲ್ ಕಟ್ಟಡದ ಮೊದಲನೆ ಮತ್ತು ಎರಡನೇ ಮಹಡಿಗಳ ಮೆಲ್ಲಿಲುಗಳ ಸಾಲಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ರೋಬೋಟ್ ಕಂಡುಬಂದಿತ್ತು. ಮೆಟ್ಟಿಲುಗಳ ಕೆಳಗೆ ಬಿದ್ದ ನಂತರ ಅದು ನಿಷ್ಕ್ರಿಯವಾಗಿದೆ ಎಂದು ಗುಮಿ ಸಿಟಿ ಕೌನ್ಸಿಲ್ ಮಾಹಿತಿ ನೀಡಿದೆ, ಸದ್ಯ ರೋಬೋಟ್ನ ಭಾಗಗಳನ್ನ ಸಂಗ್ರಹಿಸಲಾಗಿದ್ದು, ಮೃತ ರೋಬೋಟ್ ಅಧಿಕೃತವಾಗಿ ಪಾಲಿಕೆಯ ಭಾಗವಾಗಿತ್ತು ಎಂದು ಗುಮಿ ಕೌನ್ಸಿಲ್ ಮಾಹಿತಿ ನೀಡಿದೆ.
ಕಳೆದ ಒಂದು ವರ್ಷದ ಹಿಂದೆ ಕ್ಯಾಲಿಫೋರ್ನಿಯಾದ ಬೇರ್ ರೋಬೋಟಿಕ್ಸ್ ಇದನ್ನು ಅಭಿವೃದ್ಧಿಪಡಿಸಿ ಗುಮಿ ಕೌನ್ಸಿಲ್ ಗೆ ಆಡಳಿತಾತ್ಮಕ ಕಾರ್ಯದಲ್ಲಿ ಸಹಾಯ ಮಾಡಲು ನೇಮಿಸಿಕೊಳ್ಳಲಾಗಿತ್ತು. ಸದ್ಯ ಅಲ್ಲಿನ ನಿವಾಸಿಗಳ ಪ್ರಕಾರ ಕೆಲಸದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲ ರೋಬೋಟ್ ಆತ್ಮಹತ್ಯೆ ಎಂದು ಕರೆಯಲ್ಪಡುವ ದಕ್ಷಿಣ ಕೊರಿಯಾದ ನಗರದ ಸ್ಥಳೀಯರು ಈಗ ಶೋಕಸಾಗರದಲ್ಲಿದ್ದಾರೆ. ಅಷ್ಟೇ ಅಲ್ದೇ ರೊಬೋಟ್ ನಮ್ಮ ಒಡನಾಡಿಯ ರೀತಿ ಕೆಲ್ಸ ಮಾಡುತ್ತಿತ್ತು, ಕೂಡಲೇ ಇದರ ಪತನಕ್ಕೆ ನಿಖರ ಕಾರಣ ತಿಳಿಯಬೇಕೆಂದು ಗುಮಿ ನಗರದ ಜನತೆ ಒತ್ತಾಯ ಮಾಡ್ತಿದ್ದಾರೆ.