ಬೆಂಗಳೂರು, (www.thenewzmirror.com ) ;
ಸಾರಿಗೆ ಇಲಾಖೆ ಅತಿ ಹೆಚ್ಚು ಆದಾಯ (Revenue) ತರುವ ಇಲಾಖೆಗಳ ಪೈಕಿ ಟಾಪ್ 5ರೊಳಗೆ ಬಂದು ನಿಲ್ಲುತ್ತೆ. ಪ್ರತಿ ವರ್ಷ ಸಾವಿರಾರು ಕೋಟಿ ಆದಾಯ ತರುವ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಇಲಾಖೆಯಲ್ಲಿನ ಭ್ರಷ್ಟತೆ ಕುರಿತಂತೆ ಈ ಹಿಂದೆಯೂ ಸುದ್ದಿ ಮಾಡಿದ್ದ ನಿಮ್ಮ ನ್ಯೂಝ್ ಮಿರರ್ ಇದೀಗ ಮತ್ತೊಂದು ಅವ್ಯವಸ್ಥೆಯನ್ನ ನಿಮ್ಮ ಮುಂದೆ ಬಿಚ್ಚಿಡುವ ಕೆಲಸವನ್ನ ಮಾಡುತ್ತಿದೆ. ಈ ಅವ್ಯವಸ್ಥೆಯನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸರಿ ಮಾಡಲಿ ಎನ್ನುವ ಉದ್ದೇಶವಷ್ಟೇ ಈ ವರದಿಯ ಕಳಕಳಿ.
ಸದ್ಯ ಸಾರಿಗೆ ಇಲಾಖೆ (Karnataka RTO)ಯಲ್ಲಿ ಆರು ಅಪರ ಸಾರಿಗೆ ಆಯುಕ್ತರ ಹುದ್ದೆ ಹಾಗೂ ಆರು ಜಂಟಿ ಆಯುಕ್ತರ ಹುದ್ದೆ ಇದೆ. ಆದರೆ ಅಧಿಕಾರದ ಆಸೆಗಾಗಿ ಜಂಟಿ ಆಯುಕ್ತರ ಹುದ್ದೆ ವಿಚಾರದಲ್ಲಿ ಭಾರೀ ಜಟಾಪಟಿ ನಡೆಯುತ್ತಿದೆ.
ನ್ಯೂಝ್ ಮಿರರ್ ಗೆ ಲಭಿಸಿರುವ ಮಾಹಿತಿ ಪ್ರಕಾರ ಒಬ್ಬ ಜಂಟಿ ಆಯುಕ್ತರು ಮತ್ತೊಬ್ಬ ಜಂಟಿ ಆಯುಕ್ತರಿಗೆ ಇಲ್ಲಸಲ್ಲದ ಕಿರುಕುಳ ನೀಡುತ್ತಿದ್ದಾರಂತೆ. ಸಾರಿಗೆ ಇಲಾಖೆಯಲ್ಲಿ ಆದಾಯ ಕೊರತೆ ಆಗಬಾರದು ಎಂಬ ಕಾರಣಕ್ಕೆ ಇಡೀ ರಾಜ್ಯಾದ್ಯಂತ ಆರು ಜಂಟಿ ಆಯುಕ್ತರ ಹುದ್ದೆ ಸೃಷ್ಟಿಸಿ ಆಡಳಿತ ನಡೆಸುವ ಕಲಸ ಆಗುತ್ತಿದೆ. ಒಬ್ಬ ಜಂಟಿ ಆಯುಕ್ತರ ವ್ಯಾಪ್ತಿಯ ಕಾರ್ಯವನ್ನ ಸಮರ್ಪಕವಾಗಿ ನಿಭಾಯಿಸಿ ಹೆಚ್ಚಿನ ಆದಾಯ ತರಬೇಕಾಗಿದ್ದ ಜಂಟಿ ಆಯುಕ್ತರೊಬ್ಬರು ಮತ್ತೊಮ್ಮ ಜಂಟಿ ಆಯುಕ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರಂತೆ.,
ತಮ್ಮ ವ್ಯಾಪ್ತಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಜಂಟಿ ಆಯುಕ್ತರ ಹುದ್ದೆಹೊಂದಿರುವ ಆ ಸ್ವಾಮಿ ಅದಕ್ಕೆ ಕೊಕ್ಕೆ ಹಾಕುವೆ ಕೆಲಸ ಮಾಡುತ್ತಿದ್ದಾರಂತೆ. ಆರು ಜಂಟಿ ಆಯುಕ್ತರ ಹುದ್ದೆಯಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಜಂಟಿ ಆಯುಕ್ತರ ಹುದ್ದೆ ಅಲಂಕರಿಸಿದ್ದಾರೆ. ಆ ಮೂವರ ಪೈಕಿ ಒಬ್ಬ ಸ್ವಾಮಿ ಒಬ್ಬ ಮಹಿಳಾ ಜಂಟಿ ಆಯುಕ್ತರಿಗೆ ಕಿರುಕುಳ ನೀಡುತ್ತಿದ್ದಾರಂತೆ.
ಈ ಹಿಂದೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದ ಜಂಟಿ ಆಯುಕ್ತರು ಇದೀಗ ಪ್ರತಿಷ್ಠಿತ ವಲಯದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿದ್ದಾಗ ಅವರಿಂದ ಲಾಭ ಪಡೆದುಕೊಂಡಿದ್ದ ಒಂದಿಷ್ಟು ಸಿಬ್ಬಂದಿ ತಮ್ಮ ಗುರುದಕ್ಷಿಣೆಯನ್ನ ಮಾಹಿತಿ ಸೋರಿಕೆ ಮಾಡುವ ಮೂಲಕ ನೀಡುವ ಕೆಲಸ ಮಾಡುತ್ತಿದ್ದಾರೆ. ಆಯಾ ಜಂಟಿ ಆಯುಕ್ತರಿಗೆ ಆಯುಕ್ತರು ಒಂದಿಷ್ಟು ಜವಾಬ್ದಾರಿಯನ್ನ ನೀಡುವ ಜತೆಗೆ ಆದಾಯ ಹೆಚ್ಚಳ ಮಾಡುವ ಹೊಣೆಯನ್ನ ಕೊಟ್ಟಿರುತ್ತಾರೆ. ಆದರ ಅದನ್ನ ಜಾರಿ ಮಾಡುವ ವಿಚಾರದಲ್ಲಿ ಮಾತ್ರ ಯಶಸ್ಸು ಕಾಣುತ್ತಿಲ್ಲ ಅನ್ನುವ ಮಾತುಗಳೂ ಕಚೇರಿವಲಯದಲ್ಲಿ ಕೇಳಿ ಬರುತ್ತಿವೆ.
ಇಲಾಖೆಯ ಗೌಪ್ಯ ವಿಚಾರಗಹಳನ್ನ ಸೋರಿಕೆ ಮಾಡುವ ಮೂಲಕ ಗುರು ದಕ್ಷಿಣೆ ತೀರಿಸುವ ಕೆಲ್ಸವನ್ನ ಕೆಲ ಸಿಬ್ಬಂದಿ ಮಾಡುತ್ತಿದ್ದಾರಂತೆ. ಕೇವಲ ಶಿಷ್ಯಂದಿರು ಮಾತ್ರವಲ್ಲ ಗುರುವೂ ಕೂಡ ಎನಾಗುತ್ತಿದೆ ಎಂದು ಆಗಾಗ ಮೂರನೇ ದರ್ಜೆ ನೌಕರರಿಗೆ ಫೋನ್ ಮಾಡಿ ಕೇಳುತ್ತಿರುತ್ತಾರಂತೆ. ಈ ಬಗ್ಗೆ ಗುರುದಕ್ಷಿಣೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನ ನ್ಯೂಝ್ ಮಿರರ್ ಮಾತನಾಡಿಸಿದಾಗ ಏನ್ ಮಾಡೋದು ಸಾರ್, ಅವರ ಜತೆ ಕೆಲಸ ಮಾಡುವಾಗ ನಮಗೆ ಸಹಾಯ ಮಾಡಿದ್ದಾರೆ. ಕಷ್ಟದಲ್ಲಿದ್ದಾಗ ನಮ್ಮ ಕೈ ಹಿಡಿದಿದ್ದಾರೆ. ಹೀಗಾಗಿ ಅವರು ಕೇಳುವ ಮಾಹಿತಿಯನ್ನ ನೀಡುತ್ತಿದ್ದೇನೆ ಅಷ್ಟೇ ಅಂತ ಹೇಳಿಕೊಳ್ಳುತ್ತಿದ್ದಾರೆ.
ಆಯುಕ್ತರು ಸುಮ್ಮನಿರೋದು ಏಕೆ.?
ಇಲಾಖೆಯಲ್ಲಿ ಏನಾಗುತ್ತಿದೆ ಎನ್ನುವುದು ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಎ.ಎಂ ಗೆ ಗೊತ್ತಿಲ್ಲ ಅಂತ ಏನಿಲ್ಲ. ಅವರಿಗೂ ಗೊತ್ತಿದೆ ಆದರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವಂತೆ. ತಮ್ಮ ಅಧೀನದಲ್ಲಿ ಈ ರೀತಿ ಸಮಸ್ಯೆ ಆಗುತ್ತಿದೆ ಎಂದು ಮೌಖಿಕವಾಗಿ ಹೇಳಿದ್ದರೂ ಅದನ್ನ ತಲೆಗೆ ಹಾಕಿಕೊಳ್ಳುತ್ತಿಲ್ಲವಂತೆ. ತನ್ನ ವ್ಯಾಪ್ತಿ ಮೀರಿ ಕಾರ್ಯನಿರ್ವಹಣೆ ಮಾಡುವ ಜತೆಗೆ ಗೌಪ್ಯ ಮಾಹಿತಿಯನ್ನ ಪಡೆಯುತ್ತಿರುವ ಅಧಿಕಾರಿಗೆ ಯಾವ ಶಿಕ್ಷೆ ಕೊಡುವ ಕೆಲ ಮಾಡಬೇಕಾದ ಆಯುಕ್ತರು ಮೌನ ವಹಿಸಿರುವುದು ಏಕೆ ಎನ್ನುವ ಪ್ರಶ್ನೆ ಎದ್ದಿದೆ.
ಮಹಿಳಾ ಅಧಿಕಾರಿ ಪರ ನಿಲ್ತಾರಾ ಸಾರಿಗೆ ಸಚಿವರು.?
ಮಹಿಳೆಯ ಸಬಲೀಕರಣವೇ ನಮ್ಮ ಮೊದಲ ಆದ್ಯತೆ ಅಂತ ಹೇಳುತ್ತಿರುವ ಸರ್ಕಾರದ ಭಾಗವಾಗಿರುವ ಸಾರಿಗೆ ಸಚಿವರು, ಮಹಿಳಾ ಅಧಿಕಾರಿ ಪರ ನಿಲುತ್ತಾರಾ ಎನ್ನುವ ಪ್ರಶ್ನೆ ಎದ್ದಿದ್ದು, ಇದಕ್ಕೆ ಸಾರಿಗೆ ಸಿವರೇ ಉತ್ತರ ಕೊಡ್ಬೇಕಿದೆ. ಪುರುಷ ಅಧಿಕಾರಿಯಿಂದ ಆಗುತ್ತಿರುವ ಮಾನಸಿಕ ಹಿಂಸೆ ಅರಿತು ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಾರಾ ನೋಡಬೇಕಿದೆ.
ಲೀಡರ್ ಗಳು ಏನು ಮಾಡುತ್ತಿದ್ದಾರೆ..?
ಸಾರಿಗೆ ಇಲಾಖೆಯಲ್ಲಿ ಅಲಿಖಿತ ಲೀಡರ್ ಗಳ ತಂಡವೊಂದಿದೆ. ಆ ತಂಡಕ್ಕೂ ಮಹಿಳಾ ಅಧಿಕಾರಿ ಗಮನಕ್ಕೆ ತಂದಿದ್ದಾರೆ. ಆದರೆ ಆ ಪುರುಷ ಅಧಿಕಾರಿಂದ ಲಾಭ ಪಡೆದಿರುವ ಲೀಡರ್ ಗಳು ಮಹಿಳಾ ಅಧಿಕಾರಿಯ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿಲ್ಲ. ಏನೂ ಆಗಿಲ್ಲ ಸುಮ್ಮನಿರಿ ಎಂದು ನಿರ್ಲಕ್ಷ್ಯ ವಹಿಸಿದ್ದಾರಂತೆ.
ಈ ವರದಿಯ ಮುಖ್ಯ ಉದ್ದೇಶ ಸಾರಿಗೆ ಇಲಾಖೆಯಲ್ಲಿ ಆಗುತ್ತಿರುವ ಮಾನಸಿಕ ಕಿರುಕುಳ, ಹಿಂಸೆಗೆ ಇತಿಶ್ರೀ ಹಾಡುವ ಕೆಲ್ಸ ಆಗಬೇಕಿದೆ. ಅದನ್ನ ಸಾರಿಗೆ ಇಲಾಖೆ ಸಚಿವರು ಮಾಡುತ್ತಾರಾ.? ಆಯುಕ್ತರು ಮಾಡುತ್ತಾರಾ..? ಇಲ್ಲ ದಕ್ಷಿಣ ವಿಭಾಗದ ಅಪರ ಆಯುಕ್ತರು ಮಾಡ್ತಾರಾ ಅನ್ನೋದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.