ಬೆಂಗಳೂರು, (www.thenewzmirror.com) ;
ಹೇಳಿಕೊಳ್ಳೊಕೆ ಇದು ರಾಜ್ಯದ ಅತಿ ಹೆಚ್ಚು ಆದಾಯ ತರುವ ಇಲಾಖೆ.., ಆದರೆ ಈ ಇಲಾಖೆ ಇದೀಗ ಸಾರ್ವಜನಿಕರಿಂದ ದೂರ ಆಗುತ್ತಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ಸಾರ್ವಜನಿಕರಿಗೆ ಹತ್ತಿರ ಆಗಬೇಕಿರುವ ಇಲಾಖೆ ಇದೀಗ ಹಂತ ಹಂತವಾಗಿ ಸಾರ್ವಜನಿಕರ ಕೈಗೆ ಮರಿಚಿಕೆಯಾಗುತ್ತಿದೆ. ನಿಮ್ಮ thenewzmirror ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಸಾರಿಗೆ ಇಲಾಖೆಯ ಅಸಲಿಯತ್ತು ಬಟಾಬಯಲಾಗಿದೆ.
ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಅದು ಸಾರ್ವಜನಿಕರ ಪರವಾಗಿ ಕೆಲ್ಸ ನಿರ್ವಹಣೆ ಮಾಡಬೇಕು.., ಎಲ್ಲೋ ದೂರದೂರಗಳಿಂದ ತಮ್ಮ ಕೆಲಸ ಕಾರ್ಯನಿಮಿತ್ತ ಸರ್ಕಾರಿ ಕಚೇರಿಗೆ ಬರುವ ತೆರಿಗೆದಾರರಿಗೆ ಅನುಕೂಲವಾಗಲಿ ಎಂದು ಪ್ರತಿ ಸರ್ಕಾರಿ ಕಚೇರಿಗೆ ಹಾಗೂ ಪ್ರತಿ ವಿಭಾಗಕ್ಕೂ ಒಂದೊಂದು ದೂರವಾಣಿ (ಲ್ಯಾಂಡ್ ಲೈನ್) ನೀಡಲಾಗಿದೆ.
ಇತ್ತೀಚಿನ ಮೊಬೈಲ್ ಯುಗದಲ್ಲಿ ವಾಟ್ಸ್ ಅಫ್ ಜಮಾನದಲ್ಲಿ ಯಾರು ಹೆಚ್ಚಿನದಾಗಿ ಲ್ಯಾಂಡ್ ಲೈನ್ ಫೋನ್ ಅನ್ನ ಬಳಕೆ ಮಾಡುತ್ತಿಲ್ಲ.. ಹಾಗಂತ ಸರ್ಕಾರಿ ಕಚೇರಿಗಳಲ್ಲಿ ಇವುಗಳ ಅಗತ್ಯ ಬಹಳಷ್ಟಿದೆ. ಹೀಗಾಗಿಯೇ ತಂತ್ರಜ್ಙಾನ ಎಷ್ಟೇ ಮುಂದುವರೆದಿದ್ದರೂ ಲ್ಯಾಂಡ್ ಲೈನ್ ಮಾತ್ರ ತೆಗೆಯೋದಿಕ್ಕೆ ಸರ್ಕಾರ ಅವಕಾಶ ಕೊಟ್ಟಿಲ್ಲ.
ಹೀಗೆ ಸರ್ಕಾರಿ ಕಚೇರಿಗೆ ನೀಡಿರುವ ಲ್ಯಾಂಡ್ ಲೈನ್ ಗೆ ಬಿಲ್ ಎಂದು ಪ್ರತಿ ತಿಂಗಳು ಆಯಾ ಇಲಾಖೆಯಿಂದ ಸಾವಿರಾರು ರೂಪಾಯಿ ತೆರಿಗೆ ಹಣ ಪಾವತಿ ಮಾಡಲಾಗ್ತಿದೆ. ಇಂಥ ಸಂಧರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ಅದರಲ್ಲೂ ಬೆಂಗಳೂರು ವಲಯದಲ್ಲಿರುವ ಸಾರಿಗೆ ಕಚೇರಿಗಳ ಲ್ಯಾಂಡ್ ಲೈನ್ ಕಾರ್ಯವೈಖರಿ ಕುರಿತಂತೆ ರಿಯಾಲಿಟಿ ಚೆಕ್ ಮಾಡಲಾಯ್ತು.
ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಉಲ್ಲೇಖವಾಗಿರುವ ಬೆಂಗಳೂರು ನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿ ಇರುವ ಸಾರಿಗೆ ಕಚೇರಿಗಳ ಲ್ಯಾಂಡ್ ಲೈನ್ ಗಳಿಗೆ ದೂರವಾಣಿ ಕರೆ ಮಾಡಲಾಯ್ತು.
ವೆಬ್ ಸೈಟ್ ನಲ್ಲಿ ಕೊಟ್ಟಿರುವ ಲ್ಯಾಂಡ್ ಲೈನ್ ನಂಬರ್ (ಆರ್ ಟಿಓ ಕಚೇರಿ)
KA 01 080-25533525
KA 02 080-23324388
KA 03 080-29735190
KA 04 080-23376039 / 23371538
KA 05 080-26630989/26633853
KA 41 080-23286712/13
KA 43 080-25264043
KA 50 080-29729909/08
KA 51 080-29911921
KA 53 080-25617951/59
KA 57 080-22230051/22230110
KA 59 080-27827265
ಈ ಎಲ್ಲಾ ಲ್ಯಾಂಡ್ ಲೈನ್ ಗಳಿಗೆ ಕರೆ ಮಾಡಿದ್ರೂ ಒಂದೇ ಒಂದು ಕಚೇರಿಯಿಂದ ಪ್ರತಿಕ್ರಿಯೆ ಬರಲಿಲ್ಲ.., ಕೆಲ ಕಚೇರಿಗಳ ಲ್ಯಾಂಡ್ ಲೈನ್ ಗಳು ಚಾಲನೆಯಲ್ಲಿ ಇಲ್ಲ ಎಂಬ ಪ್ರತಿಕ್ರಿಯೆ ಬರುತ್ತಿದ್ದರೆ ಮತ್ತೆ ಕೆಲವು ಕಚೇರಿಗಳ ಫೋನ್ ರಿಂಗಾದ್ರೂ ರಿಸವ್ ಮಾಡುವವರು ಯಾರೂ ಇರಲಿಲ್ಲ.. ಮತ್ತೆ ಕೆಲ ನಂಬರ್ ಗಳು ಬ್ಯುಸಿ ಎಂದು ಬಂದ ಕಾರಣ ಕಚೇರಿ ಅವಧಿ ಮುಗಿದು ತಡರಾತ್ರಿ ವರೆಗೂ ಟ್ರೈ ಮಾಡಿದ್ರೂ ಬ್ಯುಸಿ ಎಂದೇ ಬರುತ್ತಿತ್ತು.
ಆಯುಕ್ತರೇ ಇತ್ತ ಗಮನ ಹರಿಸಿ
ಇಲಾಖಾ ಮುಖ್ಯಸ್ಥರುಗಳಿಗೆ ತಮ್ಮ ಕೆಳಹಂತದ ಅಧಿಕಾರಿಗಳ ಮೊಬೈಲ್ ನಂಬರ್ ಗೊತ್ತಿರುತ್ತೆ. ಅವರು ಕರೆ ಮಾಡಿದ್ರೆ ಕ್ಷಣ ಮಾತ್ರದಲ್ಲಿ ರಿಸೀವ್ ಮಾಡ್ತಾರೆ.., ಬ್ಯುಸಿ ಇದ್ರೂ ಫ್ರೀ ಆದ್ಮೇಲೆ ವಾಪಾಸ್ ಕರೆ ಮಾಡಿ ಮಾತನಾಡುತ್ತಾರೆ. ಆದರೆ ಜನ ಸಾಮಾನ್ಯರ ಪಾಡೇನು..? ಸಾರಿಗೆ ಇಲಾಖೆ ಅಂದ್ರೆ ಪತ್ರಿ ದಿನ ಹತ್ತಾರು ಸಮಸ್ಯೆಗಳು ಇರುತ್ತವೆ.., ಸಾರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳ ಮೊಬೈಲ್ ನಂಬರ್ ಇದ್ದರೂ ಸಾರ್ವಜನಿಕರು ಕರೆ ಮಾಡಿದ ಎಲ್ಲ ಕ್ಷಣದಲ್ಲೂ ಅವರು ರಿಸಿವ್ ಮಾಡೋದಿಕ್ಕೆ ಸಾಧ್ಯ ಆಗೋದಿಲ್ಲ. ಸಣ್ಣ ಪುಟ್ಟ ಸಮಸ್ಯೆ ಅಂತ ಬಂದರೂ ಆರ್ ಟಿಓಗೆ ಕರೆ ಮಾಡೋದಿಕ್ಕೆ ಸಾಧ್ಯ ಆಗೋದಿಲ್ಲ. ಹೀಗಾಗಿ ಲ್ಯಾಂಡ್ ಲೈನ್ ಗೆ ಕರೆ ಮಾಡೋಣ ಅಂದ್ರೆ ಅದ್ರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ಕೂಡಲೇ ಸಾರಿಗೆ ಇಲಾಖೆಯಲ್ಲಿ ದಕ್ಷ ಅಧಿಕಾರಿ ಅನಿಸಿಕೊಂಡಿರುವ ಆಯುಕ್ತರು ಇಂಥ ಸಮಸ್ಯೆಯನ್ನ ಬಗೆಹರಿಸಬೇಕೆಂದು ವಾಹನ ಮಾಲೀಕರಾದ ಅರುಣ್ ಮನವಿ ಮಾಡ್ತಿದ್ದಾರೆ.