ಕೆಜಿಎಫ್, (www.thenewzmirror.com) ;
ನಕಲಿ ವೈದ್ಯರೊಬ್ಬರ ನಿರ್ಲಕ್ಷ್ಯಕ್ಕೆ ಮೂಕ ಪ್ರಾಣಿಯೊಂದು ಬಲಿಯಾದ ಘಟನೆ ಕೆಜಿಎಫ್ ತಾಲೂಕಿನ ದೊಡ್ಡ ಕಂಬ್ಳಿ ಗ್ರಾಮದಲ್ಲಿ ನಡೆದಿದೆ.
ಹನುಮಂತು ಎನ್ನುವವರಿಗೆ ಸೇರಿದ್ದ ಕರುವೊಂದು ಅನಾರೋಗ್ಯದಿಂದ ಬಳಲುತ್ತಿತ್ತು. ಈ ವೇಳೆ ಹನುಮಂತು ಗ್ರಾಮಕ್ಕೆ ಸಂಬಂಧಪಟ್ಟ ಪಶು ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ರು. ಆದರೆ ಚಿಕಿತ್ಸೆ ನೀಡಿ ಅನುಭವವೇ ಇಲ್ಲದ ದಿನಕೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಹಾಗೆನೇ ಯಾವುದೇ ಅನುಭವ ಇಲ್ಲದ ಕಾರ್ತಿಕ್ ಎನ್ನುವ ವ್ಯಕ್ತಿಯನ್ನ ಪಶು ವೈದ್ಯಾಧಿಕಾರಿ ಚಿಕಿತ್ಸೆ ನೀಡೋಕೆ ಕಳುಹಿಸಿದ್ರಂತೆ.
ಯಾವುದೇ ಅನುಭವ ಇಲ್ಲದ ಕಾರ್ತಿಕ್ ಕರುವಿಗೆ ಇನ್ಜೆಕ್ಷನ್ ಕೊಟ್ಟಿ ಅಲ್ಲಿಂದ ತೆರಳಿದ್ದಾರೆ. ಇದಾಗಿ ಕೆಲವೇ ಕ್ಷಣದಲ್ಲಿ ಕರು ಸಾವನ್ನಪ್ಪಿದೆ. ಕೂಡಲೇ ವೈದ್ಯಾಧಿಕಾರಿಗೆ ಕರೆ ಮಾಡಿದ್ದ ಹನುಮಂತು ಮಾಹಿತಿ ನೀಡಿದ್ದಾರೆ. ಈ ವೇಳೆ ಉಡಾಫೆ ಉತ್ತರ ಕೊಟ್ಟ ಪಶು ವೈದ್ಯಾಧಿಕಾರಿ, ಆಗಿರುವ ಘಟನೆಗೆ ನಾವುಗಳು ಹೊಣೆಯಲ್ಲ ಅಂತ ಹೇಳಿ ಜಾರಿಕೊಂಡಿದ್ದಾರೆ.
ಅಷ್ಟೇ ಅಲ್ದೆ ಸತ್ತು ಹೋಗಿರುವುದು ಕರು ಅಷ್ಟೇ ತಾನೇ ನೋಡೋಣ ಅಂತಾನೂ ಉತ್ತರ ಕೊಟ್ಟಿದ್ದಾರಂತೆ ಪಶು ವೈದ್ಯಾಧಿಕಾರಿ. ಇನ್ನು ಚಿಕಿತ್ಸೆ ಕೊಟ್ಟ ಕಾರ್ತಿಕ್ ಎನ್ನುವ ದಿನಕೂಲಿ ನೌಕರ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿ ವರ್ತನೆ ಮಾಡ್ತಿದ್ದಾರಂತೆ.
ಕರು ಮಾಲೀಕರು ಹೇಳೋದು ಏನು?
ನಮ್ಮ ಕರುವಿಗೆ ಅನಾರೋಗ್ಯ ಎಂದು ವೈದ್ಯರಿಗೆ ಕರೆ ಮಾಡಿದ್ವಿ. ಕಾರ್ತಿಕ್ ಎನ್ನುವವರು ಬಂದು ಇನ್ಜೆಕ್ಷನ್ ಕೊಟ್ಟರು. ಅವರಿಗೆ ಯಾವುದೇ ಅನುಭವ ಇಲ್ಲದಿದ್ದರೂ ಟ್ರಿಟ್ ಮೆಂಟ್ ಕೊಟ್ಟರು. ಇನ್ಜೆಕ್ಷನ್ ಕೊಟ್ಟು ಕೆಲ ಹೊತ್ತಿನಲ್ಲೇ ಕರುವಿನ ಪ್ರಾಣ ಹೋಯ್ತು ನಮ್ಮ ಕರುವಿನ ಸಾವಿಗೆ ಕಾರ್ತಿಕ್ ಕಾರಣ ಅಂತ ಆರೋಪ ಮಾಡುತ್ತಿದ್ದಾರೆ ಕರುವಿನ ಮಾಲೀಕ ಹನುಮಂತು.
ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಬರೋದೇ ಇಲ್ಲವಂತೆ.
ಇನ್ನು ಕೆಜಿ ಎಫ್ ತಾಲೂಕಿನ ಕಂಬ್ಳಿ ಗ್ರಾಮದ ವ್ಯಾಪ್ತಿಗೆ ಬರುವ ಕ್ಯಾಸಂಬಳ್ಳಿ ವೈದ್ಯಾಧಿಕಾರಿ
ಇರುವ ಪಶು ಆಸ್ಪತ್ರೆಗೆ ವಾರಕ್ಕೆ ಎರಡು ಅಥವಾ ಮೂರು ದಿನ ಕೆಲಸಕ್ಕೆ ಬರುತ್ತಾರಂತೆ. ಆಸ್ಪತ್ರೆಗೆ ಬಂದರೂ ಯಾವುದೇ ಚಿಕಿತ್ಸೆ ನೀಡಲು ಹೋಗದೆ ಆಸ್ಪತ್ತೆಯಲ್ಲೇ ಕಾಲ ಹರಣ ಮಾಡುತ್ತಾರಂತೆ. ಯಾವುದಾದರೂ ಪಶು ಅಥವಾ ಪ್ರಾಣಿಗೆ ಆರೋಗ್ಯ ಸಮಸ್ಯೆ ಇದೆ ಎಂದು ದೂರು ಬಂದರೆ ದಿನಕೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಣೆ ಮಾಡುವ ಸಿಬ್ಬಂದಿಯನ್ನು ಚಿಕಿತ್ಸೆಗೆ ಕಳುಹಿಸುತ್ತಾರಂತೆ. ಕಳೆದ ಹಲವು ತಿಂಗಳಿನಿಂದ ಇದೇ ರೀತಿ ನಡೆದುಕೊಳ್ಳುತ್ತಿರೋ ಕ್ಯಾಸಂಬಳ್ಳಿ ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರು ಬೇಸತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲವಂತೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂಥ ನಿರ್ಲಕ್ಷ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರೋ ಮಾಡಿದ ತಪ್ಪಿಗೆ ಮೂಕ ಪ್ರಾಣಿಗಳ ಜೀವ ಬಲಿಯಾಗುತ್ತಿರೋದು ನಿಜಕ್ಕೂ ದುರಂತ.