ಶಿವಮೊಗ್ಗ, (www.thenewzmirror.com) ;
ಶಿವಮೊಗ್ಗ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಾರಿಗೆ ಅಧಿಕಾರಿ (RTO) ಅನಾರೋಗ್ಯದಿಂದ ನಿಧನಹೊಂದಿದ್ದಾರೆ. ಬಿ. ಶಂಕರಪ್ಪ ಮೃತ ಅಧಿಕಾರಿ.
59 ವರ್ಷ ವಯಸ್ಸಾಗಿದ್ದ ಶಂಕರಪ್ಪರಿಗೆ ಕಳೆದ ಕೆಲ ದಿನಗಳಿಂದ ಆರೋಗ್ಯದ ಸಮಸ್ಯೆ ಕಾಡುತ್ತಿತ್ತು. ಶಿವಮೊಗ್ಗದ ಆಸತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರಾದರೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬಿ.ಶಂಕರಪ್ಪನವರಿಗೆ 59 ವರ್ಷವಾಗಿದ್ದು ನಿವೃತ್ತಿಗೆ ಇನ್ನೂ 9 ತಿಂಗಳ ಅವಧಿ ಉಳಿದಿತ್ತು. ಅನಾರೋಗ್ಯದ ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 2023 ರ ಜುಲೈ ತಿಂಗಳಿನಿಂದ ಪ್ರಭಾರ RTO ಆಗಿ ಕಾರ್ಯನಿರ್ವಹಣೆ ಮಾಡುತ್ತುದ್ದ ಶಂಕರಪ್ಪ ಅವರನ್ನ ಇತ್ತೀಚೆಗೆ ರೆಗ್ಯೂಲರ್ ಆರ್ ಟಿಓ ಆಗಿ ನಿಯುಕ್ತಿಗೊಳಿಸಲಾಗಿತ್ತು.
ಮೂಲತಃ ಗುಲ್ಬರ್ಗದವರಾಗಿರುವ ಶಂಕರಪ್ಪ ಅವರ ನಿವೃತ್ತಿ ಅವಧಿ ಇನ್ನು 9 ತಿಂಗಳು ಮಾತ್ರ ಉಳಿದಿತ್ತು. ಶಂಕರಪ್ಪ ನಿಧನಕ್ಕೆ ಸಂಬಂಧಿಕರು, ಅಧಿಕಾರಿ ವರ್ಗ ಸಂತಾಪ ಸೂಚಿಸಿದ್ದಾರೆ.