ಬೆಂಗಳೂರು,(www.thenewzmirror.com);
ಪ್ರಭಾಸ್ ಅವರ ಬಹು ನಿರೀಕ್ಷಿತ ಸಿನೆಮಾ ಬಿಡುಗಡೆಗೂ ಮುನ್ನವೇ ಹವಾ ಎಬ್ಬಿಸಿದೆ. ಈ ಹವಾ ಸಿನಿಮಾ ಪ್ರಿಯರ ಎದೆಬಡಿತ ಹೆಚ್ಚಿಸಿದ್ದು, ಸಿನೆಮಾದ ಮೇಲೆ ನಿರೀಕ್ಷೆಯನ್ನ ಇಮ್ಮಡಿಗೊಳಿಸಿದೆ.
ಪ್ರಶಾಂತ್ ನೀಲ್ ಅವರ ಸಿನೆಮಾ ಆಗಿರೋದ್ರಿಂದ ಈ ಹವಾ ಕ್ರಿಯೇಟ್ ಆಗಿದ್ದು, ಸಲಾರ್ ಸಿನೆಮಾಗೆ ಭರ್ಜರಿ ಬೇಡಿಕೆ ಬಂದಿದೆಯಂತೆ. ಪ್ರಭಾಸ್ ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಸೋಲು ಕಂಡಿದ್ದರೂ, ಸಲಾರ್ ಮೇಲೆ ನಿರೀಕ್ಷೆ ಇಮ್ಮಡಿಗೊಂಡಿದೆ.. ಅವರ ಅಭಿಮಾನಿಗಳು ಬಿಗ್ ಸ್ಕ್ರೀನ್ ನಲ್ಲಿ ನೋಡೋಕೆ ಕಾತರದಿಂದ ಕಾಯುತ್ತಿದ್ದಾರೆ.
ಸಲಾರ್ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ವ್ಯವಹಾರ ಮಾಡಿದೆಯಂತೆ. ಈ ಸಿನೆಮಾದ ಸ್ಯಾಟಲೈಟ್ ಮತ್ತು ಓಟಿಟಿ ಹಕ್ಕುಗಳ ಮಾರಾಟದಿಂದ ಬರೋಬ್ಬರಿ 350 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಸುದ್ದಿ ಹರಿದಾಡುತ್ತಿದೆ.
ಖಾಸಗಿ ವಾಹಿನಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಪ್ಎಸಾರದ ಹಕ್ಕನ್ನ ಖರೀದಿಸಿದೆಯಂತೆ ಅದೇ ರೀತಿ ನೆಟ್ಫ್ಲಿಕ್ಸ್ಗೆ ಎಲ್ಲ ಭಾಷೆಯ ಓಟಿಟಿ ರೈಟ್ಸ್ ಮಾರಾಟ ಆಗಿದೆಯಂತೆ. ಆದರೆ ಈ ಡೀಲ್ ಕುರಿತಂತೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.