ಬೆಂಗಳೂರು, (www.thenewzmirror.com) ;
ದೊಡ್ಮನೆ ಕುಟುಂಬ ಯಾರೂ ಊಹೆ ಮಾಡೋಕೆ ಆಗದಂತ ಘಟನೆಗೆ ಸಾಕ್ಷಿಯಾಗಿದೆ. ದೊಡ್ಮನೆ ಹುಡುಗ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಿಚ್ಛೇದನ ಕೋರಿ ನಟ ಯುವರಾಜ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ದಿವಂಗತ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಮತ್ತು ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಮಗ ಯುವ ರಾಜ್‌ಕುಮಾರ್ ಮೇ 26, 2019 ರಲ್ಲಿ ಮೈಸೂರು ಮೂಲದ ಶ್ರೀದೇವಿಯನ್ನು ಮದುವೆಯಾಗಿದ್ದರು. ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಗೆ ಮುಂದಾದಾಗ ಆರಂಭದಲ್ಲಿ ಕುಟುಂಬಸ್ಥರ ಒಪ್ಪಿಗೆ ಇರಲಿಲ್ಲವಂತೆ. ಆರಂಭದಲ್ಲಿ ರಾಘವೇಂದ್ರ ದಂಪತಿ ಈ ವಿವಾಹಕ್ಕೆ ಒಪ್ಪಿರಲಿಲ್ಲ. ಆದರೆ, ಇವರ ಲವ್‌ಗೆ ಪುನೀತ್ ರಾಜ್‌ಕುಮಾರ್ ಬೆಂಬಲ ನೀಡಿದ್ದರು. ಬಳಿಕ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಮದುವೆಗೆ ಒಪ್ಪಿತ್ತು. ಇತ್ತೀಚೆಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ನಿಂದ ಸ್ಯಾಂಡಲ್‌ವುಡ್‌ಗೆ ಆಘಾತ ನೀಡಿದ್ದರು. ಇದೀಗ ಯುವ ಸಿನಿಮಾದ ನಟ ಯುವ ರಾಜ್‌ಕುಮಾರ್ ದಂಪತಿಯೂ ಡಿವೋರ್ಸ್‌ಗೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕಳೆದ 6 ತಿಂಗಳಿನಿಂದ ಯುವರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ಬೇರೆ ಬೇರೆಯಾಗಿದ್ದು, ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನಲಾಗಿದೆ. ದಂಪತಿ ನಡುವೆ ಇತ್ತೀಚಿನ ದಿನಗಳಲ್ಲಿ ಸಂಬಂಧ ಹದಗೆಟ್ಟಿತ್ತು. ಎರಡು ಕಡೆಯ ಕುಟುಂಬದವರೂ ಸಮಸ್ಯೆಗಳನ್ನು ಸರಿಪಡಿಸಲು ಯತ್ನಿಸಿದ್ದರು. ಆದರೆ, ಇದರಿಂದ ಪ್ರಯೋಜನವಾಗಿಲ್ಲ. ವರದಿಗಳ ಪ್ರಕಾರ ಯುವ ರಾಜ್‌ಕುಮಾರ್ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿವಾಹ ವಿಚ್ಚೇದನದ ಕುರಿತು ಶ್ರೀದೇವಿ ಭೈರಪ್ಪ ನಿರ್ಧಾರ ತಿಳಿದಿಲ್ಲ.