ಸ್ಯಾಂಡಲ್ ವುಡ್ ನಲ್ಲಿ ಬರ್ತಿದೆ X&Y ಹೆಸರಿನ ಚಿತ್ರ.! ಏನಿದರ ಕತಯಾ ಹಂದರ.?

ಬೆಂಗಳೂರು, (www.thenewzmirror.com) :

ಕನ್ನಡ ಚಿತ್ರರಂಗದಲ್ಲಿ ಚಿತ್ರ ವಿಚಿತ್ರದ ಹೆಸರಿನ ಸಿನೆಮಾಗಳು ತೆರೆಗೆ ಬರುತ್ತಿವೆ. ಇದೀಗ ಅಂಥದ್ದೇ ವಿಚಿತ್ರ ಹೆಸರಿನ X&Y ಎಂಬ ಚಿತ್ರ ತೆರೆಗೆ‌ ಬರಲಿದೆ.

RELATED POSTS

ಸತ್ಯ ಪಿಕ್ಚರ್ಸ್ ಗೂಡಿನಿಂದ ಮತ್ತೊಂದು ಹೊಸ ಸಿನಿಮಾ ಮೂಡಿಬರುತ್ತಿದೆ. ಚಿತ್ರದ ಹೆಸರು X&Y. ಇದು ಇವತ್ತಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಅಪ್ಪ-ಅಮ್ಮ ಆಗುತ್ತಿರುವವರ, ಅಪ್ಪ –ಅಮ್ಮ ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ ಕಥೆ, ಇವತ್ತಿನ ಮಕ್ಕಳ ಕಥೆ.

ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ಅದರಲ್ಲೂ ನಗುನಗುತ್ತಾ ನೋಡುವಂತಹ ಕಥೆಯಾಗಿ ನಿಮ್ಮ ಮುಂದೆ ತರುವ ಯತ್ನ ಸಿನೆಮಾ ತಂಡ ಮಾಡುತ್ತಿದೆ.

ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ವಾಸುಕಿ-ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕಿದೆ. 

ಅಥರ್ವ ಪ್ರಕಾಶ, ಬೃಂದಾ ಆಚಾರ್ಯ, ಅಯನ, ಸುಂದರ್ ವೀಣಾ, ವೀಣಾ ಸುಂದರ್, ದೊಡ್ಡಣ್ಣ ಹೀಗೆ ಹಿರಿಯ ಮತ್ತು ಹೊಸ ಕಲಾವಿದರ ಸಂಗಮ ಚಿತ್ರದಲ್ಲಿದೆ. ಇದು ಸತ್ಯ ಪಿಕ್ಚರ್ಸ್  ಸಂಸ್ಥೆಯ ನಾಲ್ಕನೇ ಸಿನಿಮಾ. ಈ ಹಿಂದಿನ ಮೂರು ಚಿತ್ರಗಳಿಗೆ ನೀವು ತೋರಿದ ಪ್ರೀತಿ, ತಪ್ಪುಮಾಡಿದಾಗ ನೀವು ತಿದ್ದಿದ ರೀತಿ, ಈ ಸಿನಿಮಾದಲ್ಲೂ ಬೇಕೇ ಬೇಕೆಂಬ ಬೇಡಿಕೆ ಚಿತದರ ತಂಡದ್ದು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist