ಸಿದ್ದರಾಮಯ್ಯ 2.0 ನ ಗ್ಯಾರಂಟಿಗಳು ಜಾರಿ ; ಕಂಡೀಷನ್ ಅಪ್ಲೈ..!!!

ಬೆಂಗಳೂರು, ( www.thenewzmirror.com ) ;

ಸಿದ್ದರಾಮಯ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ಚುನಾವಣೆಗೂ ಮೊದಲಿನಿಂದಲೂ ನಾವು ಕೊಟ್ಟಿರುವ 5 ಗ್ಯಾರಂಟಿಗಳನ್ನ ಮೊದಲ ಕ್ಯಾಬಿನೇಟ್ ನಲ್ಲೇ ಈಡೇರಿಸುತ್ತೀವಿ ಅಂತ ಹೇಳುತ್ತಿದ್ದ ಕಾಂಗ್ರೆಸ್ ನ ನಾಯಕರು ತಮ್ಮ ಮೊದಲ ಸಚಿವ ಸಂಪುಟದಲ್ಲಿ ಡಿಸಿಎಂ ಹಾಗೂ 8 ಸಚಿವರನ್ನ ಒಳಗೊಂಡ ಸಭೆ ಮುಕ್ತಾಯಗೊಂಡಿದೆ,

RELATED POSTS

ಸಭೆ ಬಳಿಕ ನೂತನ ಸಿಎಂ ತಮ್ಮ 2.0 ನ ಕನಸುಗಳನ್ನ ಬಿಚ್ಚಿಟ್ಟರು. ಅದರ ಪ್ರಕಾರ ಬಡವರ ಪರವಾದ ಆಡಳಿತ ನೀಡುವುದೇ ನಮ್ಮ ಮೊದಲ ಆದ್ಯತೆ ಅಂತ ನೂತನ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಹಾಗಿದ್ರೆ ಸಿದ್ದರಾಮಯ್ಯ 2.0 ನ ಐದು ಗ್ಯಾರಂಟಿಗಳ ಪೈಕಿ ಮೊದಲಿಗೆ ಜಾರಿಗೆ ಬರುವ ಗ್ಯಾರಂಟಿಗಳು ಯಾವುವು ಅನ್ನೋದನ್ನ ನೋಡೋದಾದ್ರೆ

ಚುನಾವಣೆಗೂ ಮೊದಲು ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳು

  1. ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ತಿಂಗಳಿಗೆ 2000
  2. ಮಹಿಳೆಯರಿಗೆ ಉಚಿತ ಬಸ್ ಪಾಸ್
  3. ಅನ್ನಭಾಗ್ಯ – 10 ಕೆಜಿ ಅಕ್ಕಿ ಉಚಿತ
  4. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ಕರೆಂಟ್
  5. ಯುವನಿಧಿ – ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000

ಸಿದ್ದರಾಮಯ್ಯ ಗ್ಯಾರಂಟಿಗಳ ಕುರಿತಂತೆ ಹೇಳಿದ್ದು

  • ತೆರಿಗೆ ಸಂಗ್ರಹ ಹೆಚ್ಚಳ ಮಾಡಲು ತೀರ್ಮಾನ
  • ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು
  • ಸಾಲ ಪಡೆಯುವ ಪ್ರಮಾಣವನ್ನ ಕಡಿಮೆ ಮಾಡುವುದು
  • ಬಜೆಟ್ ಗಾತ್ರವನ್ನ ಸ್ವಲ್ಪ ಹೆಚ್ಚಳ ಮಾಡುವುದು

ತಮ್ಮ 2.0 ನಲ್ಲಿ ಮೊದಲನೇ ಕ್ಯಾಬಿನೇಟ್ ಮುಗಿಸಿದ ಬಳಿಕ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ಸ್ಪಷ್ಟ ಬಹುಮತ ನೀಡಿದ ರಾಜ್ಯದ ಜನತೆಗೆ ಧನ್ಯವಾದಗಳನ್ನ ಇದೇ ವೇಳೆ ನೂತನ ಸಿಎಂ ತಿಳಿಸಿದ್ದಾರೆ. ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನ ಒಂದೇ ವರ್ಷದಲ್ಲಿ ಈಡೇರಿಸೋಕೆ ಸಾಧ್ಯವಿಲ್ಲ. ಬದಲಾಗಿ ಹಂತ ಹಂತವಾಗಿ ಈಡೇರಿಸೋ ಮಾತನ್ನ ಇದೇ ವೇಳೆ ತಿಳಿಸಿದ ಸಿಎಂ, 5 ಗ್ಯಾರಂಟಿಗಳ ಕುರಿತಂತೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳ ಕುರಿತಂತೆ ಕೆಲ ತೀರ್ಮಾನಗಳನ್ನ ಈಗಾಗಲೇ ಕೈಗೊಂಡಿದ್ದು, ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಅದರ ಪ್ರಕಾರ ನಾವು ನಡೆದುಕೊಳ್ತೀವಿ ಅಂತ ಇದೇ ವೇಳೆ ತಿಳಿಸಿದ್ರು.

50 ಸಾವಿರ ಕೋಟಿ 5 ಗ್ಯಾರಂಟಿಗಳನ್ನ ಪೂರೈಸೋದಿಕ್ಕೆ ವೆಚ್ಚವಾಗಲಿದ್ದು, ರಾಜ್ಯದ ಬಜೆಟ್ ಮೂರೂಕಾಲು ಲಕ್ಷ ಕೋಟಿ ಆಗಿದೆ ಅಂತ ಇದೇ ವೇಳೆ ತಿಳಿಸಿದ ಸಿಎಂ ಸಿದ್ದರಾಮಯ್ಯ,

ಐದು ಗ್ಯಾರಂಟಿಗಳ ಜಾರಿ ಕುರಿತಂತೆ ಕ್ಯಾಬಿನೇಟ್ ಕೈಗೊಂಡ ತೀರ್ಮಾನಗಳು ಏನೆಂದರೆ

  1. ಗೃಹ ಜ್ಯೋತಿ – 200 ಯೂನಿಟ್ ಎಲ್ಲಾ ಮನೆಗಳಿಗೆ ಫ್ರೀ ವಿದ್ಯುತ್ ( ತಿಂಗಳಿಗೆ 1200 ಕೋಟಿ ವೆಚ್ಚ ಸಾಧ್ಯತೆ)
  2. ಗೃಹ ಲಕ್ಷ್ಮೀ – ಪ್ರತಿ ಮನೆಯ ಒಡತಿಗೆ ತಿಂಗಳಿಗೆ 2000 ಅಕೌಂಟ್ ಗೆ ಹಾಕಲು ತೀರ್ಮಾನ
  3. ಅನ್ನಭಾಗ್ಯ ಯೋಜನೆ – 10 ಕೆಜಿ ನೀಡಲು ತೀರ್ಮಾನ
  4. ನಿರುದ್ಯೋಗಿ ಪದವೀಧರಿಗೆ – ಈ ವರ್ಷ ನಿರೊದ್ಯೋಗಿಗಳಾಗಿದ್ದವರಿಗೆ 2 ವರ್ಷದ ಅವಧಿಗೆ ತಿಂಗಳಿಗೆ 3000 ರೂ ( ಮದ್ಯದಲ್ಲಿ ಕೆಲಸ ಸಿಕ್ಕರೆ ಅನುದಾನ ಕಟ್ ಆಗಲಿದೆ) ಹಾಗೆನೇ ಡಿಪ್ಲೋಮಾ ಆಗಿ ನಿರುದ್ಯೋಗಿಗಳಾಗಿದ್ದವರಿಗೆ 1500 ರೂ ತಿಂಗಳಿಗೆ ನೀಡಲು ತೀರ್ಮಾನ ಮಾಡಲಾಗಿದೆ.
  5. ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ತೀರ್ಮಾನ ಮಾಡಲಾಗಿದೆ.( ಕರ್ನಾಟಕದ ಮಹಿಳೆಯರಾಗಿರಬೇಕು)

ಈ ಎಲ್ಲಾ ಗ್ಯಾರಂಟಿಗಳನ್ನ ತಕ್ಷಣದಲ್ಲೇ ಜಾರಿಗೆ ಮಾಡದಿರಲು ತೀರ್ಮಾನಿಸಿದ್ದು, ಮುಂದಿನ ಕ್ಯಾಬಿನೇಟ್ ಆದ ಬಳಿಕ ಜಾರಿಗೆ ತರಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ರು. ಇದರ ಜತೆಗೆ ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಗಳನ್ನ ಮರು ಓಪನ್ ಮಾಡಲು ಕ್ಯಾಬಿನೇಟ್ ತೀರ್ಮಾನ ಮಾಡಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist