ಕೋಲಾರ,(www.thenewzmirror com) ;
DS ಸ್ಟೇಟ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಗೆ ಕೋಲಾರ ಜಿಲ್ಲೆಯ ಯುವಕ ಪೃಥ್ವಿ ಆಯ್ಕೆಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಟ್ಟಗಾನಹಳ್ಳಿ ಗ್ರಾಮದ ನಿವಾಸಿ ದೊರೆಸ್ವಾಮಿ ಮತ್ತು ಶೈಲಜಾ ದಂಪತಿಯ ಹಿರಿಯ ಮಗಪೃಥ್ವಿ ಆಯ್ಕೆಯಾದ ಯುವಕ.
ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಂಥಾ ಮಹಾನ್ ಸಾಧನೆ ಮಾಡುವ ಮೂಲಕ ರಾಜ್ಯ ಮಟ್ಟದ ಕಟಾರೆ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುವ ಪೃಥ್ವಿಗೆ ಮಾಲೂರು ನಾಗರಿಕರು ಮತ್ತು ಸ್ನೇಹಿತರು ಶುಭ ಕೋರಿದ್ದಾರೆ. ಹಾಗೆನೇ ಕೋಲಾರ ತಾಲೂಕು ಅಧ್ಯಕ್ಷ ಚಿನ್ನ ಜಿಲ್ಲಾಧ್ಯಕ್ಷರಾದ ವೇಣು, ಪ್ರಧಾನ ಕಾರ್ಯದರ್ಶಿ ದಿಂಬಾ ಚಾಮನಹಳ್ಳಿ, ಪ್ರಕಾಶ್, ಮಾಲೂರು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಶಶಿ, ಪೃಥ್ವಿಗೆ ಸನ್ಮಾನ ಮಾಡುವ ಮೂಲಕ ಶುಭಕೋರಿದರು.