TATA Great| ದೇಶ್ ಕಾ ಟ್ರಕ್ ಉತ್ಸವ 2.0, ಅತ್ಯುನ್ನತ ಹಾಗೂ ಇಂಧನ ದಕ್ಷವುಳ್ಳ ILMCV ಶ್ರೇಣಿಯ ವಾಹನ ಪರಿಚಯಿಸಿದ ಟಾಟಾ ಮೋಟಾರ್ಸ್..!

ಬೆಂಗಳೂರು, (www.thenewzmirror.com) ;

ವಾಹನ ತಯಾರಿಕೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಇದೀಗ ತನ್ನ ಹೊಸ ಉತ್ಪನ್ನವನ್ನ ಪರಿಚಯಿಸಿದೆ. ಅತಿ ಹೆಚ್ಚು ಇಂಧನ ದಕ್ಷತೆಯುಳ್ಳ ILMCV ಶ್ರೇಣಿಯ ವಾಹನವನ್ನ ರಾಜ್ಯದ ಜನತೆಗೆ ಪರಿಚಯಿಸಿದೆ. ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ಆಯೋಜಿಸಿದ್ದದೇಶ್ ಕಾ ಟ್ರಕ್ ಉತ್ಸವ 2.0 ರಲ್ಲಿ ಕಂಪನಿ ತನ್ನ ಅತ್ಯುನ್ನತ ಮತ್ತು ಇಂಧನ ದಕ್ಷತೆಯುಳ್ಳ ವಾಹನಗಳ ಶ್ರೇಣಿಯನ್ನು ಬೆಂಗಳೂರಿನ ಟ್ರಕ್ ಆಸಕ್ತ ಗ್ರಾಹಕರಿಗೆ ಪರಿಚಯಿಸಿತು.

RELATED POSTS

ದೇಶ್ ಕಾ ಟ್ರಕ್ ಉತ್ಸವ 2.0 ಗೆ ಭಾಗಿಯಾಗಿದ್ದ ಗ್ರಾಹಕರು ಟಾಟಾ ಮೋಟಾರ್ಸ್ ನ ಹೊಸ ಮಾದರಿ ವಾಹನ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ರು. BS6 ಫೇಸ್ 2 ಶ್ರೇಣಿಯ ಇಂಧನ ದಕ್ಷತೆ ಮತ್ತು ಲಾಭದಾಯಕ ಪ್ರಯೋಜನಗಳ ಕುರಿತಾದ ಒಳನೋಟಗಳನ್ನು ಹಂಚಲಾಯಿತು. ಈ ವೇಳೆ ಮಾತನಾಡಿದ ವಿನಾಯಕ ಟ್ರಾನ್ಸ್ ಪೋರ್ಟ್ ನ ಮಾಲೀಕ ಅಂಜಿನಪ್ಪ, ನಾನು ಕಳೆದ ಒಂದು ದಶಕದಿಂದ ಟಾಟಾ ಟ್ರಕ್‌ಗಳನ್ನು ಬಳಸುತ್ತಿದ್ದೇನೆ. ಈ ವಿಶೇಷ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದಕ್ಕಾಗಿ ಕಂಪನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸರಕು ಸಾಗಾಣಿಕೆ ವಲಯದಲ್ಲಿ ಆಪರೇಟರ್ ಆಗಿರುವ ನಾನು, ಹೊಸ ಇಂಧನ-ದಕ್ಷ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ವೈಶಿಷ್ಟ್ಯಗಳು ಬಗ್ಗೆ ತಿಳಿದುಕೊಂಡಿದ್ದೇನೆ. ನನ್ನ ವ್ಯಾಪಾರವನ್ನು ಮತ್ತಷ್ಟು ಲಾಭದಾಯಕಗೊಳಿಸಲು ಇವೆಲ್ಲವೂ ನನಗೆ ಸಹಾಯ ಮಾಡಲಿವೆ ಎಂದು ಹೇಳಿದರು.

ಬಿಸಿಬಿ ಕುಶಾಲ್ ಸರ್ವೀಸಸ್ ಲಿಮಿಟೆಡ್ ನ ಮಾಲೀಕ ಚಿಕ್ಕೇ ಗೌಡ, ಟ್ರಕ್ ಉತ್ಸವ 2.0ದಲ್ಲಿ ಭಾಗವಹಿಸಿರುವುದರಿಂದ ನನಗೆ ಲಾಭದಾಯಕ ಅನುಭವ ದೊರೆಯಿತು. ಕಾರ್ಯಕ್ರಮದಲ್ಲಿ ನಾನು ಟಾಟಾ ಮೋಟಾರ್ಸ್‌ನ ಹೊಸ ತಾಂತ್ರಿಕ ಪ್ರಗತಿಗಳು ಮತ್ತು ಅವರ ಟ್ರಕ್ ಶ್ರೇಣಿಗಳು ಹೇಗೆ ಇಂಧನ ದಕ್ಷವಾಗಿರುತ್ತವೆ ಎಂಬುದರ ಕುರಿತಾದ ಒಳನೋಟಗಳನ್ನು ಗಳಿಸಿದ್ದೇನೆ. ಜೊತೆಗೆ ಟಾಟಾ ಫ್ಲೀಟ್ ಎಡ್ಜ್, ಕಸ್ಟಮೈಸ್ ಮಾಡಬಹುದಾದ ವಾರ್ಷಿಕ ನಿರ್ವಹಣಾ ಒಪ್ಪಂದಗಳು ಮತ್ತು ಟಾಟಾ ಓಕೆ ಪ್ರೋಗ್ರಾಮ್ ಅಡಿಯಲ್ಲಿ ಎಕ್ಸ್‌ಚೇಂಜ್ ಯೋಜನೆಗಳು ಮುಂತಾದ ಕಂಪನಿಯ ಹಲವು ಮೌಲ್ಯವರ್ಧಿತ ವೈಶಿಷ್ಟ್ಯತೆಗಳ ಬಗ್ಗೆ ಕೂಡ ತಿಳಿದುಕೊಂಡಿದ್ದೇನೆ ಎಂದರು.

ಟಾಟಾ ಮೋಟಾರ್ಸ್ ILMCV ಶ್ರೇಣಿಯಲ್ಲಿ 4 ರಿಂದ 19 ಟನ್ GVW ವರೆಗಿನ ಹಲವಾರು ಶ್ರೇಣಿಯ ಉತ್ಪನ್ನಗಳನ್ನು ಒದಗಿಸುತ್ತದೆ. ಹಲವು ವಿಭಾಗಗಳಲ್ಲಿ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ವಾಹನಗಳನ್ನು ಸೂಕ್ತವಾಗಿ, ದೃಢವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಕಠಿಣ ಪರೀಕ್ಷೆಗಳನ್ನು ಮಾಡಲಾಗಿದೆ. ILMCV ಪೋರ್ಟ್‌ಫೋಲಿಯೊವು LPT, SFC, ಸಿಗ್ನಾ ಮತ್ತು ಅಲ್ಟ್ರಾ ಶ್ರೇಣಿಯಂತಹ ಬಹು ಕ್ಯಾಬಿನ್ ಆಯ್ಕೆಗಳು, ಹಲವು ವಿಧದ ಡೆಕ್ ಗಾತ್ರಗಳು ಮತ್ತು ಬಾಡಿ ಶೈಲಿಗಳ ಜೊತೆಗೆ ದೊರೆಯುತ್ತವೆ.

ಕರ್ನಾಟಕವೊಂದರಲ್ಲೇ ಟಾಟಾ ಮೋಟಾರ್ಸ್ 250ಕ್ಕೂ ಹೆಚ್ಚು ಸೇಲ್ಸ್ ಮತ್ತು ಸರ್ವೀಸ್ ಟಚ್‌ಪಾಯಿಂಟ್‌ಗಳಿವೆ. ಈ ಮೂಲಕ ರಾಜ್ಯದ ಗ್ರಾಹಕರಿಗೆ ಸಮಗ್ರ ಬೆಂಬಲ ಮತ್ತು ಉತ್ಪನ್ನ ಲಭ್ಯತೆಯನ್ನು ಒದಗಿಸಲಾಗುತ್ತಿದೆ. ದೇಶಾದ್ಯಂತ ಟಾಟಾ ಮೋಟಾರ್ಸ್ 2500ಕ್ಕೂ ಹೆಚ್ಚು ಸೇಲ್ಸ್ ಮತ್ತು ಸರ್ವಿಸ್ ಟಚ್‌ಪಾಯಿಂಟ್‌ಗಳನ್ನು ಹೊಂದಿದ್ದು, ಅಲ್ಲಿ ವಾಹನಗಳ ಬಿಡಿಭಾಗಗಳು ಕೂಡ ಲಭ್ಯವಿರುತ್ತವೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist