ಬೆಂಗಳೂರು, (www.thenewzmirror.com) ;
ರಾಜ್ಯ ಸರ್ಕಾರ ಕನ್ನಡ ಕಡ್ಡಾಯಗೊಳಿಸಿ ಈಗಾಗಲೃ ಆದೇಶ ಹೊರಡಿಸಿಯಾಗಿದೆ. ಆದೇಶಗಳು, ಒತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಸೂಚನೆಯನ್ನೂ ನೀಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ವೈದ್ಯರೂ ಕೂಡ ಕನ್ನಡದಲ್ಲಿಯೇ ಔಷಧ ಸಲಹೆ ಚೀಟಿ ಬರೆಯಲಿ ಎಂಬ ಒತ್ತಾಯಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇಲ್ಲೋರ್ವ ವೈದ್ಯರು ಕನ್ನಡದಲ್ಲಿಯೇ ಔಷಧ ಚೀಟಿ ಬರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕನ್ನಡದಲ್ಲಿಯೇ ಪ್ರಿಸ್ಕ್ರಿಪ್ಶನ್ ಇರುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಇದೀಗ ಕನ್ನಡದಲ್ಲಿ ವೈದ್ಯರೊಬ್ಬರು ಬರೆದ ಪ್ರಿಸ್ಕ್ರಿಪ್ಶನ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇನ್ನು ವೈದ್ಯರು ಬರೆದುಕೊಡುವ ಪ್ರಿಸ್ಕ್ರಿಪ್ಶನ್ ಅಕ್ಷರಗಳು ಯಾರಿಗೂ ಅರ್ಥವಾಗಲ್ಲ. ಔಷಧಿ ಅಂಗಡಿಯವರನ್ನು ಬಿಟ್ಟರೆ ಸಾಮಾನ್ಯ ಜನರಿಗೆ ಅರ್ಥ ಮಾಡಿಕೊಳ್ಳುವುದು ಸವಾಲಿನ ಕೆಲಸ. ಹಾಗಾಗಿ ವೈದ್ಯರು ಕನ್ನಡದಲ್ಲಿ ಪ್ರಿಸ್ಕ್ರಿಫ್ಶನ್ ಬರೆದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಕೆ.ವಿ.ಡೆಂಟಲ್ ಕ್ಲಿನಿಕ್‌ನ ಡಾ. ಹರಿಪ್ರಸಾದ್ ಸಿ.ಎಸ್ ರೋಗಿಯೊಬ್ಬರಿಗೆ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆದುಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಪ್ರಿಸ್ಕ್ರಿಪ್ಶನ್ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಎಲ್ಲ ವೈದ್ಯರು ಕನ್ನಡದಲ್ಲಿಯೇ ಸಲಹಾ ಚೀಟಿ ಬರೆಯಲಿ. ಮದ್ದಿನ ವ್ಯಾಪಾರಿಗಳು ಕನ್ನಡದಲ್ಲೆ ಮದ್ದಿನ ವಿವರ ಮುದ್ರಿಸಲಿ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಮದ್ದನ್ನು ಬರೆದುಕೊಟ್ಟಿರುವ ಡಾ ಹರಿಪ್ರಸಾದ್ ರವರಿಗೆ ಧನ್ಯವಾದಗಳ ಮಹಾಪೂರ ಹರಿದುಬರುತ್ತಿದೆ.