ಬೆಂಗಳೂರು,(www.thenewzmirror.com);
ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಈ ಬಾರಿ ಕರ್ನಾಟಕದ ಯಾವುದೇ ಪಾತಿನಿಧ್ಯ ಇರೋದಿಲ್ಲವಂತೆ. ಆ ಮೂಲಕ ಸತತ 13 ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ತನ್ನ ಸಂಸ್ಕೃತಿ ಹಾಗೂ ಪರಂಪರೆ ಪ್ರದರ್ಶಿಸಿದ ರಾಜ್ಯ ಈ ಬಾರಿ ಅವಕಾಶ ಕಳೆದುಕೊಂಡಂತೆ ಆಗಿದೆ.
ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಸಿರಿಧಾನ್ಯಗಳ ವೈವಿಧ್ಯತೆಯನ್ನ ಪ್ರದರ್ಶಿಸಲು ಸಿದ್ಧತೆ ಮಾಡಿಕೊಂಡಿತ್ತು. ರಾಜ್ಯದ ಈ ಪ್ರಸ್ತಾವನೆಯನ್ನ ಕೇಂದ್ರ ತಳ್ಳಿ ಹಾಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಮೂಲಕ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಪ್ರಾತಿನಿಧ್ಯ ಇರುವುದು ಅನುಮಾನ ಮೂಡಿಸಿದೆ
ಕರ್ನಾಟಕವು ಈ ಹಿಂದೆ ತನ್ನ ಸ್ತಬ್ಧಚಿತ್ರಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಸೃಜನಶೀಲತೆ ಮತ್ತು ವರ್ಣರಂಜಿತ ಪ್ರಸ್ತುತಿಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ. 2022 ರಲ್ಲಿ, ಕರ್ನಾಟಕದ ಸ್ತಬ್ಧಚಿತ್ರವು ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿತ್ತು. ಇದು ಎರಡನೇ ಅತ್ಯುತ್ತಮ ಪ್ರಶಸ್ತಿಯನ್ನೂ ಪಡೆದಿತ್ತು. ಕರ್ನಾಟಕದ ಸ್ತಬ್ಧಚಿತ್ರಗಳು ಹೆಚ್ಚಾಗಿ ರಾಜ್ಯದ ಶ್ರೀಮಂತ ಜಾನಪದ, ಜೀವವೈವಿಧ್ಯ, ಕರಕುಶಲ ಮತ್ತು ಸಾಂಸ್ಕೃತಿಕ ಪರಂಪರೆಯ ಸುತ್ತ ಕೇಂದ್ರೀಕೃತವಾಗಿರುತಿದ್ದವು.
ತಮಿಳುನಾಡು ಮತ್ತು ಕೇರಳಕ್ಕೆ ಈ ಬಾರಿ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದು, ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿವೆ.
ಸಂಸದರ ಕಿಡಿ
ಗಣರಾಜೋತ್ಸವಕ್ಕೆ ಕರ್ನಾಟಕ ಟ್ಯಾಬ್ಲೋಗರ ಅವಕಾಶ ನೀಡದ ವಿಚಾರಕ್ಕೆ ಕುರಿತಂತರ ಸಂಸದ ಡಿ.ಕೆ. ಸುರೆರಶ್ ಕಿಡಿಕಾರಿದ್ದಾರೆ. ಕರ್ನಾಟಕ ವಿಶ್ವದಲ್ಲಿ ಇತಿಹಾಸದ ಚಾಪು ಹೊಂದಿರುವ ಪ್ರಗತಿಪರ ರಾಜ್ಯವಾಗಿದೆ. ಹೀಗಿದ್ರೂ ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.