ಬೆಂಗಳೂರು,(www.thenewzmirror.com) ;
ಮೊದಲೇ ಆರ್ಥಿಕ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ ಮತ್ತೊಂದು ಹೊರೆ ಯಾಗುವಂಥ ಯೋಜನೆಯನ್ನ ಅಧಿಕಾರಿಗಳು ಸಾರಿಗೆ ಸಚಿವರ ಮುಂದಿಟ್ಟಿದ್ದಾರೆ. ಇದರಿಂದ ನಷ್ಟದಲ್ಲಿರುವ ಸಂಸ್ಥೆಗಳಿಗೆ ಇನ್ನಷ್ಟು ಆರ್ಥಿಕ ಹೊರೆ ಆಗೋದರಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಹಂತ ಹಂತವಾಗಿ ಸ್ಮಾರ್ಟ್ ಆಗುವತ್ತ ಹೊರಟಿವೆ. ಇದಕ್ಕೆ ಮುನ್ಮುಡಿ ಎನ್ನುವಂತೆ ಬಿಎಂಟಿಸಿ, ಕೆಎಸ್ಸಾರ್ಟಿಸಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿವೆ. ಇನ್ಮೂ ಒಂದೇ ಹೆಜ್ಜೆ ಮುಂದೆ ಹೋಗಿ ನಾಲ್ಕೂ ನಿಗಮಗಳ ಬಸ್ ಗಳ ಬಣ್ಣ ಒಂದೇ ರೀತಿ ಮಾಡುವತ್ತ ಚಿಂತನೆ ನಡೆದಿದೆ.
ಹೌದು, ಸಾರಿಗೆ ಸಚಿವ ಶ್ರೀರಾಮುಲು ನಾಲ್ಕೂ ನಿಗಮಗಳ ಬಸ್ ಗಳಿಗೆ ಒಂದೇ ಬಣ್ಣ ಬಳಿಯುವ ಚಿಂತನೆ ಇದೆ. ಅದೂ ಕಮಪು ಬಣ್ಣದಿಂದ ಕೂಡಿರಲಿದೆ ಎಂದು ತಿಳಿಸಿದ್ದಾರೆ.
ಹಿಂದೊಂದು ಮಾತಿತ್ತು ಹಳ್ಳಿಯಿಂದ ಯಾರಾದ್ರೂ ಸಿಟಿಗೆ ಬಂದ್ರೆ ಏನ್ ಕೆಂಪ್ ಬಸ್ ಹತ್ಕೊಂಡು ಬಂದ್ಯಾ ಅಂತ ಗೇಲಿ ಮಾಡ್ತಾ ಇದ್ರು. ಬಳಿಕ ಹೈಟೆಕ್ ಆಗುವ ಭರದಲ್ಲಿ ಬಸ್ ಗಳ ಬಣ್ಣ ಬದಲಾಗುತ್ತಾ ಹೋಯ್ತು.
ಇದು ಬರೀ ಕೆಎಸ್ಸಾರ್ಟಿಸಿಯಲ್ಲಿ ಮಾತ್ರವಲ್ಲ ಬಿಎಂಟಿಸಿಯಲ್ಲೂ ಇದೇ ಆಗಿತ್ತು. ಮೊದಲು ಬಿಳಿ ನೀಲಿ ಇದ್ದ ಬಸ್ ಗಳ ಬಣ್ಣ ಬಳಿಕ ಹಸಿರು, ಕೆಂಪು,( ಒಬ್ಬೊಬ್ಬ ಎಂಡಿ ಬಂದಾಗ ಒಂದೊಂದು ಬಣ್ಣ) ಹೀಗೆ ಬೇರೆ ಬೇರೆ ಬಣ್ಣಗಳಿಂದ ರಸ್ತೆಗೆ ಇಳಿಯುತಿದ್ವು.
ಎಲ್ಲಾ ಬಸ್ ಗಳ ಬಣ್ಣ ಒಂದೇ ಬಣ್ಣ ಕೆಂಪು ಬಣ್ಣ ಇರಲಿದೆ. ಇದಕ್ಕಾಗಿ ನಾಲ್ಕೂ ನಿಗಮಗಳಲ್ಲಿ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಈ ಕುರಿತು ಮುನ್ಸೂಚನೆ ನೀಡಿರುವ ಸಾರಿಗೆ ಸಚಿವ ಶ್ರೀರಾಮುಲು, ಶೀಘ್ರದಲ್ಲೇ ಒಂದೇಬಣ್ಣದ ಬಸ್ ಗು ರಸ್ತೆಗೆ ಇಳಿಯುತ್ತವೆ ಎಂದಿದ್ದಾರೆ.
ಒಂದೇ ಬಣ್ಣ ಅವಶ್ಯಕತೆ ಇತ್ತಾ.?
ಸಾರಿಗೆ ಸಚಿವರ ಒಂದೇ ಬಣ್ಣದ ಮಾತು ನೌಕರರ ಸಂಘಟನೆಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊದಲೇ ಆರ್ಥಕ ಸಂಕಷ್ಟದಲ್ಲಿ ನಾಲ್ಕೂ ನಿಗಮಗಳಿದಾವೆ. ಹೀಗಿರುವಾಗ ಬಣ್ಣದ ಹೆಸರಲ್ಲಿ ಕೋಟಿ ಕೋಟಿ ಖರ್ಚು ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾವೆ.
‘ಒಂದೊಂದು ಬಸ್ ಗೆ ಬೇಕು ಹತ್ರತ್ರ ಲಕ್ಷ ಹಣ’
ಈಗಿರುವ ಬಸ್ ಗಳ ಬಣ್ಣ ಗಳನ್ನ ತೆಗೆದು ಅದಕ್ಕೆ ಕೆಂಪು ಬಣ್ಣ ಬಳಿಯೋಕೆ ಕಡಿಮೆ ಖರ್ಚಾಗುತ್ತಾ..? ಇಲ್ಲ ಮೂಲಗಳ ಪ್ರಕಾರ ಒಂದೊಂದು ಬಸ್ ಗೆ ಕನಿಷ್ಠ 80 ರಿಂದ 90 ಸಾವಿರ ಬೇಕಂತೆ…! ಅಂದರೆ ನಾಲ್ಕೂ ನಿಗಮಗಳಲ್ಲಿರುವ ಬಸ್ ಗಳಿಗೆ ಬಣ್ಣ ಬಳಿಯೋಕೆ ಕೋಟಿಗಟ್ಟಲೃ ಹಣ ಬೇಕು.
ನಾಲ್ಕೂ ನಿಗಮಗಳು ಸೇರಿ ಹತ್ರತ್ರ 21 ಸಾವಿರ ಬಸ್ ಗಳಿದಾವೆ. ಇಷ್ಟೂ ಬಸ್ ಗಳಿಗೆ ಬಣ್ಣ ಬಳಿಬೇಕು ಅಂದ್ರೆ ಕನಿಷ್ಠ 41 ಕೋಟಿ ಬೇಕಾಗುತ್ತೆ. ಆರ್ಥಿಕ ಸಂಕಷ್ಟದಲ್ಲಿರುವ ನಿಗಮಗಳಿಗೆ ಇದು ಅಗತ್ಯವಿತ್ತಾ ಎನ್ನುವ ಪ್ರಶ್ನೆ ಪ್ರಯಾಣಿಕ ವಲಯದಿಂದ ಕೇಳಿಬರುತ್ತಿದೆ.