ಬೆಂಗಳೂರು, (www.thenewzmirror.com);
ಭೂ ಸೇನೆಯ ಪಥ ಸಂಚಲನ ನೋಡೋದೇ ಒಂದು ಅದ್ಬುತ.., ಕೈಯಲ್ಲಿ ಆಯುಥಗಳನ್ನ ಹಿಡಿದು ಪೆರೇಡ್ ಮಾಡ್ತಾ ಇದ್ರೆ ನೋಡೋಕೆ ಎರಡೂ ಕಣ್ಣು ಸಾಲದು.., ಇಂಥ ಅತ್ಯದ್ಬುತ ಕ್ಷಣವನ್ನ ಹತ್ತಿರದದಿದ ನೋಡೋಕ ಅವಕಾಶ ಸಿಲಿಕಾನ್ ಸಿಟಿ ಮಂದಿಗೆ ಸಿಕ್ಕಿದೆ. ಇದೇ ಪ್ರಪ್ರಥಮ ಬಾರಿಗೆ ಆರ್ಮಿ ದಿನವನ್ನ ಬೆಂಗಳೂರಿನಲ್ಲಿ ನಡೆಸಲಾಗ್ತಿದ್ದು, ಅದ್ರೆ ಒಂದು ಝಲಕ್ ಇಲ್ಲಿದೆ.
ಜನವರಿ 15 ಅಂದ್ರೆ ಭಾರತೀಯ ಸೇನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತೆ. 1949 ರ ಜನವರಿ 15 ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭಾರತೀಯ ಸೈನ್ಯದ ಪ್ರಧಮ ಪ್ರಧಾನ ದಂಡಾನಾಯಕರಾದ ದಿನ. ಹೀಗಾಗಿ ಅಂದಿನಿಂದ ಇಂದಿನ ವರೆಗೂ ಪ್ರತಿ ವರ್ಷ ಸೇನಾ ದಿನಾಚರಣೆಯನ್ನ ಅದ್ಧೂರಿಯಾಗಿ ಆಚರಿಸಲಾಗ್ತಿದೆ.
ಪ್ರತಿ ವರ್ಷ ದೆಹಲಿಯಲ್ಲಿ ನಡೆಯುತ್ತಿದ್ದ ಸೇನೆಯ ಆಕರ್ಷಕ ಮೆರವಣಿಗೆ ಹಾಗೂ ಮಿಲಿಟರಿ ಪ್ರದರ್ಶನ ಈ ಬಾರಿ ದೆಹಲಿ ಬದಲು ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಲಸೂರಿನ ಎಂಇಜಿ ಮೈದಾನದಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗ್ತಿವೆ. ಇನ್ನು ಸೇನಾ ದಿನದ ಪೆರೇಡ್ ನಲ್ಲಿ 8 ರೆಜಿಮೆಂಟ್ ಗಳು ಪಥಸಂಚಲನ ನಡೆಸಲಿವೆ..,
ಸೇನಾ ಹಬ್ಬ ಅಂತಾನೇ ಕರೆಸಿಕೊಳ್ಳೋ ಆರ್ಮಿ ಡೇ ದಿನವಾದ ಜನವರಿ 15 ರಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ. ಅದಾದ ಬಳಿಕ ಸೈನ್ಯದ ಪಥ ಸಂಚಲದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಪಥ ಸಂಚಲನದದಲ್ಲಿ ಭಾರತೀಯ ಸೈನ್ಯದ ಶೌರ್ಯ ಪ್ರದರ್ಶನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮಿಲಿಟರಿ ಬ್ಯಾಂಡ್‌ಗಳು, ಯುದ್ಧ ಸನ್ನದ್ಧತೆಗಳ ಕವಾಯತ್ತು ಇರಲಿದೆ.
ರುಧ್ರ & ಧ್ರುವ ಹೆಲಿಕಾಪ್ಟರ್.., K9 ವಜ್ರ ಸ್ವಯಂಚಾಲಿತ ಗನ್.., ಪಿನಾಕ ರಾಕೆಟ್ .., ತುಂಗುಸ್ಕಾ ಫೈಟರ್ ಜೆಟ್.., 155mm ಹಾಗೂ 130 mm ಗನ್ ಪ್ರದರ್ಶನ ಕೂಡ ಇರಲಿದೆ. ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ಶೌರ್ಯ ಪದಕಗಳ ಪ್ರದಾನ, ಸೈನಿಕ ದಳ ಮತ್ತು ಸೈನಿಕರ ಸಾಹಸಕ್ಕೆ ಮೆಚ್ಚುಗೆ ಸೂಚಿಸಿ ಶ್ಲಾಘನೀಯ ಪದಕಗಳ ಪ್ರದಾನ ಜನವರಿ 13 ರಂದು ನಡೆಯಲಿದೆ ಎಂದು ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಜಿಓಸಿ ಮೇ. ಜ. ರವಿ ಮುರುಗನ್ ಮಾಹಿತಿ ನೀಡಿದರು.
1949ರ ಜನವರಿ 15ರಂದು ಭಾರತೀಯ ಸೇನೆಯ ಜವಾಬ್ದಾರಿಯನ್ನು ಕೊನೆಯ ಬ್ರಿಟಿಷ್ ಸೇನಾಧಿಕಾರಿ ಎಫ್.ಆರ್.ಆರ್.ಬುಚೆರ್‌ರಿಂದ ಮೊತ್ತ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್, ಫೀಲ್ಡ್ ಮಾರ್ಷಲ್, ಕನ್ನಡಿಗೆ ಕೆ.ಎಂ.ಕಾರ್ಯಪ್ಪ ವಹಿಸಿಕೊಂಡಿದ್ದರು. ಇದರ ನೆನಪಿಗಾಗಿ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಹಾಗೆಯೇ ಭಾರತೀಯ ಸೇನಾ ಪಡೆಗಳ ಚಟುವಟಿಕೆಗಳಲ್ಲಿ ಹೆಚ್ಚು ಜನರು ಭಾಗವಹಿಸಬೇಕು, ಜನರಲ್ಲಿ ಅರಿವು ಮೂಡಬೇಕು ಎಂಬ ಉದ್ದೇಶದಿಂದ ದೆಹಲಿಯ ಹೊರಗೆ ಸೇನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬ ಆಶಯದಿಂದ ಬೆಂಗಳೂರಿನಲ್ಲಿ ಸೇನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.