ಬೆಂಗಳೂರು, (www.thenewzmirror.com):
ಬೆಂಗಳೂರಿನಲ್ಲಿ ಗುತ್ತಿಗೆದಾರನ ತಪ್ಪಿಗೆ ತಾಯಿ, ಮಗ ಬಲಿಯಾಗಿದ್ದಾರೆ. ನಾಗವಾರ ಬಳಿ ಘಟನೆ ನಡೆದಿದ್ದು, ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ ಬಿದ್ದಿದ್ದರಿಂದ ತಾಯಿ ಹಾಗೂ ಮಗು ಸಾವು ಕಂಡಿದ್ದಾರೆ.
ಮೆಟ್ರೋ ಪಿಲ್ಲರ್ ನಿರ್ಮಾಣಕ್ಕಾಗಿ ಹಾಕಿದ್ದ ರಾಡ್‌ಗಳು ಇಂದು ಬೆಳಗ್ಗೆ 10.45 ಕ್ಕೆ ಏಕಾಏಕಿ ಬಿದ್ದಿದೆ. ಈ ವೇಳೆ ಬೈಕ್‌ನ ಮೇಲೆ ಪ್ರಯಾಣ ಮಾಡುತ್ತಿದ್ದ ಕುಟುಂಬದ ಮೇಲೆ ಬಿದ್ದಿದ್ದರಿಂದ 35 ವರ್ಷದ ತೇಜಸ್ವಿನಿ ಹಾಗೂ ಆಕೆಯ ಎರಡು ವರ್ಷ ಆರು ತಿಂಗಳ ವಿಹಾನ್ ರಕ್ತಸ್ರಾವದಿಂದ ಸಾವು ಕಂಡಿದ್ದಾರೆ.
ತಂದೆ ಲೋಹಿತ್ ಕುಮಾರ್ ಹಾಗೂ ಮಗಳು ಎರಡೂವರೆ ವರ್ಷದ ವಿಸ್ಮಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೀಗೆ ಮೆಟ್ರೋ ದಿಂದ ಅನಾಹುತ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥ ಅನಾಹುತಗಳು ಸಂಭವಿಸಿದ್ವು. ಇಷ್ಟಾದ್ರೂ ಮೆಟ್ರೋ ಪದೆ ಪದೇ ನಿರ್ಲಕ್ಷ್ಯ ತೋರುತಿದ್ಯಾ ಎನ್ನುವ ಅನುಮಾನ ಮೂಡುತ್ತಿದೆ.
ಹಾಗೆನೇ ಮೆಟ್ರೋ ಕಾಮಗಾರಿ ಹಾಗೂ ಅದರ ಗುಣಮಟ್ಟದ ಬಗ್ಗೆ ದೊಡ್ಡ ಅನುಮಾನ ಮೂಡಿದೆ. ಜನನಿಬಿಡ ಮಾರ್ಗಗಳಲ್ಲಿ ಮೆಟ್ರೋ ಕಾಮಗಾರಿ ಹಗಲು ರಾತ್ರಿ ನಡೆಯುತ್ತಿದೆ. ಇಂಥ ಸ್ಥಳಗಳಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳದೇ ಇರೋದು ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರಯಾಣ ಮಾಡಬೇಕಾಗಿದೆ.
ನಾಗಾವಾರ ಬಳಿ ಇಂದಿನ ಘಟನೆ ಕುರಿತಂತೆ ವಾರದ ಹಿಂದೆನೇ ನಿವಾಸಿಗಳು ಮೆಟ್ರೋ ನಿಗಮಕ್ಕೆ ತಂದಿದ್ರು. ಆದರೆ ಮೆಟ್ರೋ ನಿಗಮ ಇದನ್ನ ನಿರ್ಲಕ್ಷ್ಯ ವಹಿಸಿದೆ. ಸಾರ್ವಜನಿಕತ ದೂರನ್ನ ಗಂಭೀರವಾಗಿ ಪರಿಗಣಿಸದೆ ಇರುವುದು ಇಂದು ಎರಡು ಜೀವ ಬಲಿ ತೆಗೆದುಕೊಂಡಿದೆ.
ಪಿಲ್ಲರ್‌ಗಳನ್ನು ಏರಿಸುವ, ಬೀಮ್‌ಗಳನ್ನು ಇರಿಸುವ ಕೆಲಸ ಕಾರ್ಯ ನಡೆಯುತ್ತಿದೆ. ಒಂದು ಸಣ್ಣ ಎಚ್ಚರ ತಪ್ಪಿದರೂ, ಅನಾಹುತ ಹೇಗಾಗಲಿದೆ ಅನ್ನೋದಕ್ಕೆ ನಾಗವಾರದ ಘಟನೆಯೇ ಸಾಕ್ಷಿ. ಒಂದೆಡೆ ಮೆಟ್ರೋ ಕೆಲಸದ ವೇಳೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ವಿಚಾರವಾಗಿದ್ದರೆ, ಇನ್ನೊಂದೆಡೆ ಈಗಾಗಲೇ ಚಾಲ್ತಿಯಲ್ಲಿರುವ ಮೆಟ್ರೋ ಮಾರ್ಗದ ಪಿಲ್ಲರ್‌ಗಳ ಕಳಪೆ ಕಾಮಗಾರಿಗಳು ಕೂಡ ಸಾಕಷ್ಟು ಬಾರಿ ಸುದ್ದಿಯಾಗಿವೆ.
ಗುಣಮಟ್ಟದ ಬಗ್ಗೆ ಪದೆ ಪದೇ ಅಪಸ್ವರ..!
ಗೊರಗುಂಟೆಪಾಳ್ಯ ಮತ್ತು ಪೀಣ್ಯ ಮೆಟ್ರೊ ನಿಲ್ದಾಣಗಳ ನಡುವಿನ ಪಿಲ್ಲರ್ ಗಳಲ್ಲಿ ಜೇನುಗೂಡುಗಳು ಪತ್ತೆಯಾಗಿತ್ತು. ಇದು ಗುಣಮಟ್ಟದ ಕುರಿತಂತೆ ಮೊದಲು ಅಪಸ್ವರ ಎದ್ದಿತ್ತು. ಗೊರಗುಂಟೆಪಾಳ್ಯ ನಿಲ್ದಾಣದ ಬಳಿ 377 ಮತ್ತು 384 ರ ನಡುವಿನ ಕೆಲವು ಪಿಲ್ಲರ್‌ಗಳಲ್ಲಿ ಜೇನುಗೂಡು ಕಾಣಿಸಿಕೊಂಡಿತ್ತು.