ಬೆಂಗಳೂರು, (www.thenewzmirror.com ) ;
ಇತ್ತೀಚೆಗೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಶೇಕಡಾ 15 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ., ನಮ್ಮ ಹೋರಾಟಕ್ಕೆ ಜಯ ಸಿಗ್ತು ಅಂತ ಸಾರಿಗೆ ಸಂಘಟನೆ ಮುಖಂಡರು ಸಿಎಂಗೆ ಅಭಿನಂದನೆಯನ್ನೂ ಸಲ್ಲಿಸಿದ್ರು, ಆದರೆ ಸರ್ಕಾರ ಹೆಚ್ಚಿಸಿದ ವೇತನ ನಿಜವಾಗ್ಲೂ ನೌಕರರಿಗೆ ಸಿಗುತ್ತಾ..? ಇದರ ಅಸಲಿಯತ್ತು ಏನು ಅನ್ನೋದನ್ನ ದಿ ನ್ಯೂಝ್ ಮಿರರ್ ಬಿಚ್ಚಿಡೋ ಪ್ರಯತ್ನ ಮಾಡುತ್ತಿದೆ.
ಸರ್ಕಾರ ಹೆಚ್ಚಳ ಮಾಡಿದ್ದರೂ ಅದು ನೌಕರರಿಗೆ ಸಿಗಬೇಕಾಗಿರುವುದು 2020 ರ ಜನವರಿ 1ರಿಂದ. ಅಂದ್ರೆ ಬರೋಬ್ಬರಿ 39 ತಿಂಗಳ ಹಳೆಯದ್ದು. ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿರುವ ನಾಲ್ಕೂ ಸಾರಿಗೆ ಸಂಸ್ಥೆಗಳು ತಿಂಗಳಾಂತ್ಯಕ್ಕೆ ವೇತನ ನೀಡೋಕೆ ಹಿಂದೇಟು ಹಾಕ್ತಿವೆ. ಅಂಥದ್ರಲ್ಲಿ ಹಳೆಯ 39 ತಿಂಗಳ ಅರಿಯರ್ಸ್ ಸೇರಿ ಕೊಡುತ್ತಾ ಎನ್ನುವ ಪ್ರಶ್ನೆಗೆ ಸಿಕ್ಕ ಉತ್ತರ ಇಲ್ಲ ಅನ್ನೋದು.
ಒಂದು ಕಡೆ ಸರ್ಕಾರ ವೇತನ 15 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದೇ ತಡ ನಾಲ್ಕೂ ನಿಗಮಗಳಿಗೆ 1000 ಕೋಟಿ ಬಿಡುಗಡೆ ಮಾಡಿದೆ. ವಾಸ್ತವದಲ್ಲಿ ಆದೇಶವಾಗಿದ್ರೂ ನಿಗಮಗಳಿಗೆ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ.., ಸಾರಿಗೆ ನೌಕರರ ಹೋರಾಟ ಜೋರಾಗುವ ಮುನ್ಸೂಚನೆ ಸಿಗ್ತಾ ಇದ್ದಂತೆ ಸರ್ಕಾರ ಬೀಸೋ ದೊಣ್ಣೆಯಿಂದ ತಪ್ಪಿಸೋ ಕೆಲ್ಸ ಮಾಡ್ತಾ ಅನ್ನೋ ಅನುಮಾನ ಮೂಡುತ್ತಿದೆ.
ಯಾಕಂದರೆ ಸದ್ಯಕ್ಕೆ ನಾಲ್ಕೂ ನಿಗಮಗಳಲ್ಲಿ ಸರಿ ಸುಮಾರು 1,05,000 ಸಿಬ್ಬಂದಿ ಕಾರ್ಯನಿರ್ವಹಣೆ ಮಾಡ್ತಿದ್ದಾರೆ.., ವೇತನ ಹೆಚ್ಚಳ ಮಾಡಬೇಕು ಅಂತ ಹೋರಾಟ ಮಾಡಿದ ಅದೆಷ್ಟೋ ಸಿಬ್ಬಂದಿಗೆ ಇದರ ವೇತನ ಹೆಚ್ಚಳದ ಅನುಕೂಲ ಸಿಗೋದು ಅನುಮಾನವಾಗಿದೆ. ಯಾಕಂದ್ರೆ ಸರ್ಕಾರ ಸದ್ಯ ಹೆಚ್ಚಿಸಿ ಆದೇಶ ಮಾಡಿರೋ ಅನುದಾನ ಕೇವಲ ಕರ್ತವ್ಯ ನಿರ್ವಹಣೆ ಮಾಡುತ್ತಿರೋ ನೌಕರರಿಗೆ ಮಾತ್ರ ಅನ್ವಯವಾಗುತ್ತೆ. ವೇತನ ಹೆಚ್ಚಳ ಮಾಡಬೇಕು ಎಂದು ಹೋರಾಟ ಮಾಡಿದದವರಿಗೆ ಹಾಗೂ ಹೋರಾಟದಿಂದ ವಜಾ ಹಾಗೂ ಅಮಾನತ್ತಾದ ಸಿಬ್ಬಂದಿಗೆ ಇದರ ಅನುಕೂಲ ಸಿಗೋದಿಲ್ಲವಂತೆ.., ಹಾಗೆನೆ ಕೋರ್ಟ್ ನಿಂದ ಮರು ನೇಮಕಗೊಂಡ ಸಿಬ್ಬಂದಿಗೂ ಇದರ ಅನುಕೂಲ ಸಿಗೋದು ಅನುಮಾನ ಎಂದೇ ಹೇಳಲಾಗುತ್ತಿದೆ,. ಹೀಗೆ ಸರಿ ಸುಮಾರು 6000 ಸಿಬ್ಬಂದಿ ವೇತನ ಪರಿಷ್ಕರಣೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಅದು ಒಂದು ಕಡೆಯಾದರೆ ಮತ್ತೊಂದ್ಕಡೆ ಸರ್ಕಾರ ಹೆಚ್ಚಿಸಿರೋ ವೇತನದಿಂದ ಯಾರಿಗೆಲ್ಲಾ ಎಷ್ಟೆಷ್ಟು ಹಣ ಸಿಗುತ್ತೆ ಅನ್ನೋದನ್ನ ಲೆಕ್ಕ ಹಾಕೋದಾದರೆ.., ಎ ದರ್ಜೆಯ ನೌಕಕರಿಗೆ 39 ತಿಂಗಳಿನಿಂದ ಬಾಕಿ ಹತ್ರತ್ರ ಎರಡೂವರೆ ಲಕ್ಷದಿಂದ ಮೂರು ಲಕ್ಷದ ವರೆಗೂ ನೀಡಬೇಕಾಗುತ್ತೆ.., ಇನ್ನು ಡ್ರೈವರ್, ಕಂಡಕ್ಟರ್ ಹಾಗೂ ಡಿಪೋಗಳಲ್ಲಿ ಕೆಲ್ಸ ಮಾಡುವ ನೌಕರರಿಗೆ ಹತ್ರತ್ರ 80 ರಿಂದ 1 ಲಕ್ಷದ ವರೆಗೂ ಬಾಕಿ ನೀಡಬೇಕಿದೆ. ಅಂದ್ರೆ ಒಂದೂ ಕಾಲು ಲಕ್ಷ ನೌಕರರಿಗೆ ನಾಲ್ಕೂ ನಿಗಮಗಳಿಂದ ಕನಿಷ್ಠ ಸಾವಿರದ ನೂರು ಕೋಟಿ ನೀಡಬೇಕಾಗುತ್ತೆ. (ಆದರೆ ಇದು ಮುಷ್ಕರದಲ್ಲಿ ವಜಾ, ಅಮಾನತ್ತಾದ ಸಿಬ್ಬಂದಿ, ಅಮಾನತ್ತು ಹಾಗೂ ವಜಾ ಗೊಂಡ ನೌಕರರು ಮೃತಪಟ್ಟಿದ್ದರೆ ಅಂಥವ್ರಿಗೆ ಯಾವುದೇ ಸೌಲಭ್ಯ ಸಿಗೋದಿಲ್ಲ).
ದಿ ನ್ಯೂಝ್ ಮಿರರ್ ಗೆ ಸಿಕ್ಕಿರೋ ಮಾಹಿತಿ ಪ್ರಕಾರ ಹತ್ರತ್ರ 6000 ಸಿಬ್ಬಂದಿಗೆ ವೇತನ ಪರಿಷ್ಕರಣೆಯ ಸೌಲಭ್ಯ ಸಿಗೋದಿಲ್ಲವಂತೆ.., ಅಷ್ಟೇ ಅಲ್ದೇ ಕೋರ್ಟ್ ಆದೇಶದ ಮೇರೆಗೆ ಮತ್ತೆ ಕೆಲಸ ಮಾಡುತ್ತಿರುವ ನೌಕರರೂ ಇದರಿಂದ ವಂಚಿತರಾಗಲಿದ್ದಾರೆ.
ಕಾನೂನು ಸಲಹೆಗಾರರ ಮೋರೆ ಹೋಗುತ್ತಿರೋ ಸಿಬ್ಬಂದಿ..!
ಸರ್ಕಾರ ಏನೋ ವೇತನ ಪರಿಷ್ಕರಣೆ ಮಾಡ್ತೀವಿ ಅಂತ ಹೇಳಿದೆ. ಆದ್ರೆ ಕಾನೂನಾತ್ಮಕವಾಗಿ ಈ ಸೌಲಭ್ಯದಿಂದ ವಂಚಿತರಾಗುತ್ತಿರುವ ಸಿಬ್ಬಂದಿ ಇದೀಗ ಕಾನೂನು ಸಲಹೆಗಾರರ ಮೊರೆ ಹೋಗುತ್ತಿದ್ದಾರೆ. ಬಿಎಂಟಿಸಿ ಇತಿಹಾಸದಲ್ಲೇ ಅತಿ ಹೆಚ್ಚು ಕಾರ್ಮಿಕ ಸಂಘಟನೆಗಳ ಕಾನೂನು ಸಲಹೆಗಾರರನ್ನ ಕೊಟ್ಟಿರೋ ಡಿಪೋ 33 ರಲ್ಲಿನ ಸಲಹೆಗಾರರ ಮೊರೆ ಹೋಗುತ್ತಿದ್ದು, ನಮಗೂ ನ್ಯಾಯಕೊಡಿಸಿ( ವೇತನ ಪರಿಷ್ಕರಣೆಯ ಅನುಕೂಲ) ಅಂತ ದುಂಬಾಲು ಬಿದ್ದಿದ್ದಾರಂತೆ..,
ಚುನಾವಣೆ ಆದರೆ ಮುಂದೇನು..?
ಸದ್ಯಕ್ಕೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆ ಹತ್ರ ಬರುತ್ತಿರೋದ್ರಿಂದ ವೇತನ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಅಂತ ಬಣ್ಣಿಸಲಾಗುತ್ತಿದ್ದರೂ ಒಂದು ವೇಳೆ ಚುನಾವಣೆ ನಡೆದು ಬೇರೆ ಸರ್ಕಾರ ಆಡಳಿತಕ್ಕೆ ಬಂದರೆ ಮತ್ತೆ ಸಾರಿಗೆ ನೌಕರರಿಗೆ ಅನ್ಯಾಯವಾಗೋದರಲ್ಲಿ ಯಾವುದೇ ಅನುಮಾನವಿಲ್ಲ.., ಹೊಸ ಸರ್ಕಾರ ಬಂದರೆ ಅವ್ರು ಹಳೆ ಸರ್ಕಾರದ ಆದೇಶ ಪಾಲನೆ ಮಾಡೋದು ಅನುಮಾನ.., ಇದೇ ಸರ್ಕಾರ ಬಂದರೆ ತಕ್ಷಣದಲ್ಲಿ ಜಾರಿ ಮಾಡುವುದು ಅನುಮಾನ. ಹೀಗಾಗಿ ಅತ್ತ ವೇತನ ಪರಿಷ್ಕರಣೆಯೂ ಇಲ್ಲದೇ ಇತ್ತ ಹೆಚ್ಚಿನ ವೇತನವೂ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದಾರೆ ಲಕ್ಷಾಂತರ ನೌಕರರು.
ಕಾರ್ಮಿಕ ಮುಖಂಡರು ಹೇಳೋದೇನು..?
ಸರ್ಕಾರ ವೇತನ ಪರಿಷ್ಕರಣೆ ಮಾಡಿದೆ. 2020ರಿಂದ ಇಲ್ಲೀವರೆಗೂ ವೇನತ ಪರಿಷ್ಕರಣೆ ಮಾಡಿಲ್ಲ ಇದೀಗ ಮಾಡಿದ್ದು 2020 ರ ಜನವರಿ 1 ರಿಂದಲೇ ಅನ್ವಯವಾಗುವಂತೆ ತಕ್ಷಣವೇ ನೀಡುವ ಕೆಲ್ಸ ಮಾಡಲಿ.., ಹಾಗೆನೇ 2024 ರ ಜನವರಿ 1ರ ವೇಳೆಗೆ ಮತ್ತೆ ಪರಿಷ್ಕರಣೆ ಮಾಡಬೇಕಿದ್ದು, ಅದು ಮತ್ತಷ್ಟು ವಿಳಂಬವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು., ಕಾಲ ಕಾಲಕ್ಕೆ ವೇತನ ಪರಿಷ್ಕರಣೆ ಮಾಡದೇ ಕಾಲ ಹಣರ ಮಾಡೋದನ್ನ ಬಿಡುವ ಕೆಲಸ ಮಾಡಲಿ.