ಬೆಂಗಳೂರು,(www.thenewzmirroe.com):
ಪರೀಕ್ಷೆಗಳು ಹತ್ರ ಬರುತ್ತಿವೆ.., ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡ್ತಿದ್ದಾರೆ.. ಇದರ ನಡುವೆನೇ ಶಿಕ್ಷಣ ಇಲಾಖೆ ಬಿಚ್ಚಿಟ್ಟ ಆತಂಕ ಕಾರಿ ಅಂಶ ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಹೌದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕೊಟ್ಟ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 1,316 ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆಯಂತೆ. ಇದರಲ್ಲಿ 871 ಶಾಲೆಗಳು ಬೆಂಗಳೂರಿನಲ್ಲಿಯೇ ಇವೆಯಂತೆ.
ಅನಧಿಕೃತ ಶಾಲೆಗಳು ಯಾವ್ಯಾವು ಅನ್ನೋದನ್ನ ಪತ್ತೆ ಹಚ್ಚಿರುವ ಶಿಕ್ಷಣ ಇಲಾಖೆ ಪರೀಕ್ಷಡ ಹತ್ತಿರ ಬರುತ್ತಿರೋ ಹೊತ್ತಲ್ಲಿ ನೊಟೀಸ್ ಕೊಡುವ ಕೆಲಸ ಮಾಡಿದೆ. ನೊಟೀಸ್ ನೀಡಿರೋ ಶಾಲೆಗಳು ದಾಖಲೆ ಸಮೇತ ಮಾಹಿತಿ ನೀಡಿ ಎಂದೂ ಸೂಚಿಸಲಾಗಿದೆ.
ಹಾಗೆನೇ ಶಿಕ್ಷಣ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ರಾಜದಯದ 14 ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳೇ ಇಲ್ಲವಂತೆ. ದಕ್ಷಿಣ ಕನ್ನಡ, ಗದಗ, ಶಿರಸಿ, ವಿಜಯಪುರ, ಬಾಗಲಕೋಟೆ, ಚಿಕ್ಕೊಡಿ, ಬೆಳಗಾವಿ, ಕೊಡಗು, ಕೊಪ್ಪಳ, ಯಾದಗಿರಿ, ವಿಜಯನಗರ, ರಾಮನಗರ, ದಾವಣಗೆರೆ, ಶಿವಮೊಗ್ಗ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳು ಕಂಡು ಬಂದಿಲ್ಲ ಎಂದು ವರದಿ ಸಿದ್ದಮಾಡಿದೆ.
ಉಳಿದಂತೆ ಉಡುಪಿ, ಹಾವೇರಿ ಮತ್ತು ಚಿತ್ರದುರ್ಗದಲ್ಲಿ ಒಂದೇ ಒಂದು ಅನಧಿಕೃತ ಶಾಲೆ ಪತ್ತೆಯಾಗಿದೆ. ಹಾಸನ 2, ರಾಯಚೂರು 4, ಚಾಮರಾಜನಗರ 5, ಮೈಸೂರು ಜಿಲ್ಲೆಯಲ್ಲಿ 7 ಅನಧಿಕೃತ ಶಾಲೆಗಳನ್ನು ಗುರುತಿಸಲಾಗಿದೆ.
ಅನುಮತಿ ಒಂದಕ್ಕೆ ನಡೆಸುವುದು ಮತ್ತೊಂದು
ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರೆ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ 95 ಶಾಲೆಗಳು, ಒಂದು ಮಾಧ್ಯಮಕ್ಕೆ ಅನುಮತಿ ಪಡೆದು ಇನ್ನೊಂದು ಮಾಧ್ಯಮದಲ್ಲಿ ಬೋಧಿಸುತ್ತಿರುವ 294 ಶಾಲೆಗಳು ಪತ್ತೆಯಾಗಿವೆ. ಅನುಮತಿ ಪಡೆಯದೇ 63 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು 74 ಶಾಲೆಗಳು ಅನಧಿಕೃತವಾಗಿವೆ.
ಬೆಂಗಳೂರಿನಲ್ಲಿಯೇ ಸಿಂಹ ಪಾಲು
ಒಟ್ಟು 1316 ಅನಧಿಕೃತ ಶಾಲೆಗಳ ಪೈಕಿ ಬೆಂಗಳೂರಿನಲ್ಲಿ ಸಿಂಹಪಾಲಿದೆ. ಬೆಂಗಳೂರು ದಕ್ಷಿಣದಲ್ಲಿ 386 ಶಾಲೆಗಳು ಮತ್ತು ಬೆಂಗಳೂರು ಉತ್ತರದಲ್ಲಿ 485 ಅನಧಿಕೃತ ಶಾಲೆಗಳು ಪತ್ತೆಯಾಗಿದೆ. ರಾಜ್ಯದ ಒಟ್ಟು ಅನಧಿಕೃತ ಶಾಲೆಗಳಲ್ಲಿ ಶೇ. 66 ಬೆಂಗಳೂರಿನಲ್ಲೇ ಇದೆ ಅನ್ನೋದು ತಿಳಿದು ಬಂದಿದೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು..?
ತುಮಕೂರು 109, ಬೆಂಗಳೂರು ಗ್ರಾಮಾಂತರ 66, ಚಿಕ್ಕಬಳ್ಳಾಪುರ 59, ಬೀದರ್ 50, ಕೋಲಾರ 32, ಚಿಕ್ಕಮಗಳೂರು 21, ಕಲಬುರಗಿ 17, ಧಾರವಾಡ 14, ಮಂಡ್ಯ ಜಿಲ್ಲೆಯಲ್ಲಿ 10 ಶಾಲೆಗಳು ಅನಧಿಕೃತವಂತೆ.
ಶಿಕ್ಷಣ ಇಲಾಖೆ ಹೇಳುವುದು ಏನು.?
ಅನಧಿಕೃತ ಶಾಲೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಅನಧಿಕೃತ ಶಾಲೆಗಳ ಅಂತಿಮ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಮೇಲ್ನೋಟಕ್ಕೆ ಅನಧಿಕೃತ ಅಂತ ಕಂಡುಬಂದಿರುವ ಶಾಲೆಗಳಿಗೆ ನಪಟೀಸ್ ನಿಒಡಿ ದಾಖಲೆ ಪರಿಶೀಲನೆ ನಡೆಯುತ್ತಿದ್ದು, ಸಂಖ್ಯೆ ಕಡಿಮೆ ಅಥವಾ ಹೆಚ್ಚಾಗುವ ಸಾಧ್ಯತೆಯಿದೆ.
ಖಾಸಗಿ ಶಾಲೆ ಒಕ್ಕೂಟ ಹೇಳುವುದೇನು.?
ಶಿಕ್ಷಣ ಇಲಾಖೆಯ ಆಯುಕ್ತರ ಆನುಮೋದಿತ ಎಸ್‌ಎಟಿಎಸ್ ತಂತ್ರಾಂಶದಲ್ಲಿ ಮಕ್ಕಳ ದಾಖಲಾತಿ, ಹಾಜರಾತಿಗಳನ್ನು ನೋಂದಾಣಿ ಮಾಡಿಕೊಂಡು ಬಂದಿದ್ದೇವೆ. ಆರ್‌ಟಿಇ ಅಡಿಯಲ್ಲಿ ಅಧಿಕೃತ ಶಾಲೆಯೆಂದು, ಪ್ರತಿ ವರ್ಷ ಆರ್‌ಟಿಇ ಆಡಿ ಸೀಟುಗಳನ್ನು ಘೋಷಿಸಿ ಈಗ ಅನಧಿಕೃತ ಶಾಲೆಯೆಂದು ಪ್ರಕಟಿಸಿರುವುದು ಸರಿಯಲ್ಲ ಅನ್ನುವುದು ಕ್ಯಾಮ್ಸ್ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರ ಅಭಿಪ್ರಾಯ.