ಬೆಂಗಳೂರು, (www.thenewzmirror.com) ;
ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಗಳು ದೇಶದಲ್ಲೇ ನಂಬರ್ ಒನ್ ಸಂಸ್ಥೆ ಎನ್ನುವ ಖ್ಯಾತಿಯನ್ನ ಪಡೆದಿವೆ. ಸಾರಿಗೆ ಕ್ಷೇತ್ರದಲ್ಲಿ ಯಾವುದೇ ಪ್ರಶಸ್ತಿ ಇದ್ದರೂ ನಮ್ ರಾಜ್ಯಕ್ಕೆ ಒಂದು ಪ್ರಶಸ್ತಿ ಪಕ್ಕಾ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಸೇವೆ, ವ್ಯವಸ್ಥೆ ಸಿಗ್ತಾಇದೆ. ನಾಲ್ಕು ಸಂಸ್ಥೆಗಳ ಸಾವಿರಾರು ಬಸ್ ಗಳು ಪ್ರಯಾಣಿಕರನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವ ಕೆಲ್ಸ ಮಾಡ್ತಿರೋ ಕಾರಣಕ್ಕೆ ನೂರಾರು ಪ್ರಶಸ್ತಿಗಳು ಸಂಸ್ಥೆಗಳನ್ನ ಅರಸಿ ಬಂದಿವೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಅಂತ ನಾಲ್ಕು ಸಂಸ್ಥೆಗಳ ಮೂಲಕ ಪರಿಸರ ಹಾಗೂ ಪ್ರಯಾಣಿಕರ ಸ್ನೇಹಿ ಸೇವೆ ನೀಡುತ್ತಿರುವ ಇಲಾಖೆಗೆ 2023 ರಿಂದ ರಾಮಲಿಂಗಾ ರೆಡ್ಡಿ ಸಚಿವರಾಗಿದ್ದಾರೆ. ತಾವು ಅಧಿಕಾರ ವಹಿಸಿಕೊಳ್ಳೋದಕ್ಕೂ ಮೊದಲು ನಾಲ್ಕೂ ಸಂಸ್ಥೆಗಳು ನಷ್ಟ, ಸಿಬ್ಬಂದಿ ಪ್ರತಿಭಟನೆ, ವೇತನ ತಾರತಮ್ಯದಂತಹ ಕಷ್ಟಗಳ ಸರಮಾಲೆಯನ್ನೇ ಹೊದ್ದು ಕುಳಿತಿದ್ದವು. ಆದರೆ ಕಳೆದ ಒಂದು ವರ್ಷದಿಂದ ಯಾರೂ ನಿರೀಕ್ಷೆ ಮಾಡದ ಮಟ್ಟಿಗೆ ಸಂಸ್ಥೆಗಳಲ್ಲಿದ್ದ ಸಮಸ್ಯೆಗಳು ಕರಗಿಹೋಗಿವೆ. ಇದು ಅಪಾರ ಜನಮನ್ನಣೆಯನ್ನೂ ಗಳಿಸಿದೆ.
ಒಂದು ಕಡೆ ಮುಜರಾಯಿ ಇಲಾಖೆ ಸಚಿವರಾಗಿ ಅಲ್ಲಿ ಬದಲಾವಣೆ ತರುವ ರೀತಿಯಲ್ಲಿಯೇ ಸಾರಿಗೆ ಸಚಿವರಾಗಿ ಅಲ್ಲಿಯೂ ಅಷ್ಟೇ ಪ್ರಮಾಣದ ಚೇಂಜ್ ಮಾಡಿದ್ದಾರೆ. ಇದು ರಾಜ್ಯಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ಇದನ್ನ ತಿಳಿಸೋ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಲ್ಲಿ ತಮ್ಮ ಒಂದು ವರ್ಷದ ಸಾಧನೆ ಕುರಿತ 40 ಪುಟಗಳಕೈಪಿಡಿಯೊಂದನ್ನ ಬಿಡುಗಡೆ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ತಾವು ಸಾರಿಗೆ ಸಚಿವರಾಗಿ ಯಾವೆಲ್ಲ ಕ್ರಮಗಳನ್ನ ಕೈಗೊಳ್ಳಲಾಗಿದೆ. ಹಾಗೆನೆ ಮುಂದಿನ ಯೋಜನೆಗಳ ಕುರಿತ ಮಾಹಿತಿ ಕೈಪಿಡಿಯಲ್ಲಿದೆ.
ಸಾರಿಗೆಯ ಒಂದು ವರ್ಷದ ಸಾರ್ಥಕ ಸಾಧನೆಯ ಕೈಪಿಡಿ ಎನ್ನುವ ಪುಸ್ತಕ ಇದಾಗಿದ್ದು, ಕಳೆದ ಒಂದು ವರ್ಷದಲ್ಲಿ ಅದರಲ್ಲೂ ತಾವು ಸಾರಿಗೆ ಸಚಿವರಾದ ಮೇಲೆ ನಾಲ್ಕೂ ನಿಗಮಗಳಲ್ಲಿ ಏನೆಲ್ಲ ಬದಲಾವಣೆಗಲಾಗಿವೆ ಜತೆಗೆ ಯಾವೆಲ್ಲ ಅಭಿವೃದ್ಧಿ ಕೆಲ್ಸಗಳು ಇಲಾಖೆಯಲ್ಲಿ ನಡೆದಿವೆ ಅನ್ನೋದ್ರ ಮಾಹಿತಿ ಇದರಲ್ಲಿದೆ. ನಾಲ್ಕೂ ನಿಗಮಗಳಿಗೆ ಇದೂವರೆಗೂ 535 ಪ್ರಶಸ್ತಿಗಳು ಲಭಿಸಿದ್ದರೆ ಕಳೆದ ಒಂದು ವರ್ಷದಲ್ಲೇ ಬರೋಬ್ಬರಿ ನೂರು ಪ್ರಶಸ್ತಿಗಳು ಸಂಸ್ಥೆಗಳನ್ನ ಅರಸಿ ಬಂದಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಶಕ್ತಿಯೋಜನೆ ಜಾರಿ ಆದಬಳಿಕ ಏನೆಲ್ಲ ಬದಲಾವಣೆಗಲಾಗಿವೆ ಅನ್ನೋದನ್ನೂ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಶಕ್ತಿ ಯೋಜನೆ ಯಶಸ್ವಿಗೆ ಸಹಕರಿಸಿದ ಹಾಗೂ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರೋ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
ಎರಡನೇ ಅವಧಿಯಲ್ಲಿ ಸಾರಿಗೆ ಸಚಿವರಾಗಿ ನಾಲ್ಕೂ ನಿಗಮಗಳಿಗೆ ಒಟ್ಟು 5800 ಹೊಸ ಬಸ್ ಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ ಈಗಾಗಲೇ 2862 ಬಸ್ ಗಳು ನಿಗಮಗಳನ್ನ ಸೇರಿಕೊಂಡಿವೆ. ಹಾಗೆನೇ ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿರಲಿಲ್ಲ. ತಾವು ಸಚಿವರಾಗಿ ಬಂದ ಬಳಿಕ 1844 ನೇಮಕಾತಿ, 553 ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿದ್ದರ ಬಗ್ಗೆಯೂ ಕೈಪಿಡಯಲ್ಲಿ ಉಲ್ಲೇಖವಾಗಿದೆ. ಪಲ್ಲಕ್ಕಿ ಅಶ್ವಮೇಧ ಕ್ಲಾಸಿಕ್, ಕಲ್ಯಾಣ ರಥ, ಅಮೋಘ ವರ್ಷದಂತಹ ಹೊಸ ಬ್ರಾಂಡ್ ಗಳನ್ನ ಕಳೆದ ಒಂದು ವರ್ಷದಲ್ಲಿ ಪ್ರಯಾಣಿಕರಿಗೆ ಪರಿಚಯಿಸಲಾಗಿದೆ. ಕುರಿತಂತೆ ಸಂದೇಶದಲ್ಲಿ ಉಲ್ಲೇಖವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ 1277 ಹಳೆ ಬಸ್ ಗಳಿಗೆ ಹೊಸ ರೂಪ ಕೊಟ್ಟು ಸಂಸ್ಥೆಯ ಆರ್ಥಿಕ ಹೊರೆಯನ್ನ ತಗ್ಗಿಸುವಲ್ಲಿ ಸಾರಿಗೆ ಸಚಿವರ ಪಾತ್ರ ಬಹಳ ದೊಡ್ಡದಿದೆ.
ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರಿಂದ ಭಾರೀ ಬೇಡಿಕೆ ಬಂದಿದ್ದು, ಬಸ್ ಗಳ ಟ್ರಿಪ್ ಗಳನ್ನೂ ಹೆಚ್ಚಿಸಲಾಗಿದೆ. ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗುವ ಮೊದಲು ಪ್ರತಿ ದಿನ ನಾಲ್ಕೂ ನಿಗಮಗಳಿಂದ 158909 ಟ್ರಿಪ್ ಓಡಿಸಲಾಗುತ್ತಿತ್ತು. ಆದ್ರೀಗ ಆ ಸಂಖ್ಯೆಯನ್ನ 169627 ಕ್ಕೆ ಹೆಚ್ಚಳ ಮಾಡಲು ಸಚಿವರು ಕ್ರಮ ಕೈಗೊಂಡಿದ್ದಾರೆ. ಇದು ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರ ಮಚ್ಚುಗೆಗೂ ಪಾತ್ರವಾಗಿದೆ. ಹಾಗೆನೇ ಆನ್ ಹಾಗೂ ಆಫ್ ಡ್ಯೂಟಿಯಲ್ಲಿ ಯಾವುದಾದರೂ ಸಿಬ್ಬಂದಿ ಮೃತಪಟ್ಟರೆ ಅವ್ರ ಅವಲಂಬಿತರಿಗೆ ಒಂದು ಕೋಟಿ ಹಾಗೆನೇ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಮೃತಪಟ್ಟರೆ ಈ ಹಿಂದೆ 3 ಲಕ್ಷ ನೀಡಲಾಗುತ್ತಿತ್ತು. ಅದರ ಪ್ರಮಾಣವನ್ನ 10 ಲಕ್ಷಕ್ಕೆ ಏರಿಸಿದ ಕೀರ್ತಿ ಸಾರಿಗೆ ಸಚಿವರಿಗೆ ಸಲ್ಲುತ್ತದೆ. ಸಿಬ್ಬಂದಿಗೆ ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡುವ ಸಂಬಂಧ ಒಡಂಬಡಿಕೆ ಹಾಗೂ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಪದ್ಧತಿ ರಾಮಲಿಂಗಾರೆಡ್ಡಿ ಅವಧಿಯಲ್ಲಿ ಜಾರಿಯಾಗಿದೆ.
ಕಾರ್ಗೋ ಸೇವೆಗೆ ಉತ್ತಮ ಸ್ಪಂದನೆ..!
ಇದೆಲ್ಲಕ್ಕಿಂತ ಮುಖ್ಯವಾಗಿ ಆದಾಯವನ್ನ ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಕಾರ್ಗೋ ಯನ್ನ ಮೊದಲ ಬಾರಿಗೆ ಪರಿಚಯಿಸಿದ್ದು, ಅತ್ಯಂತ ಕಡಿಮೆ ದರದಲ್ಲಿ ಕಾರ್ಗೋ ಸೇವೆ ಸಾರ್ವಜನಿಕರಿಗೆ ಸಿಗುವಂತೆ ಮಾಡಿದ್ದಲ್ಲದೆ ಆದಾಯ ಹೆಚ್ಚಳಕ್ಕೂ ಕಾರಣೀಕೃತರಾಗಿದ್ದಾರೆ. ಇದರ ಜತೆಗೆ ಸಿಬ್ಬಂದಿ ರಜೆ ಕೇಳುವ ನಿಟ್ಟಿನಲ್ಲಿ ಆಗ್ತಿದ್ದ ಕಿರಿಕಿರಿ ತಪ್ಪಿಸಿದ್ದು, ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ವ್ಯವಸ್ಥೆ ಜಾರಿ ಮಾಡುವಲ್ಲಿಯೂ ರಾಮಲಿಂಗಾರೆಡ್ಡಿ ಪಾತ್ರ ಬಹಳ ಮುಖ್ಯವಾಗಿದೆ.
ಬೆಂಗಳೂರು ಜನರ ಬಹುದಿನದ ಬೇಡಿಕೆಯಾಗಿರುವ ಡಬಲ್ ಡೆಕ್ಕರ್ ಬಸ್ ಓಡಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಬೆಂಗಳೂರಿನ ರಸ್ತೆಯ ಮೇಲೆ ಓಡಾಡಲಿವೆ. ಹೀಗೆ ಕಳೆದ ಒಂದು ವರ್ಷದಲ್ಲಿ ನಿರೀಕ್ಷೆಗೂ ಮೀರಿ ನಾಲ್ಕೂ ಸಂಸ್ಥೆಗಳನ್ನ ನಷ್ಟದಿಂದ ಲಾಭದತ್ತ ತರುವಲ್ಲಿ ರಾಮಲಿಂಗಾರೆಡ್ಡಿ ಪಾತ್ರ ಮುಖ್ಯವಾಗಿದ್ದು, ಇದು ಹೀಗೆ ಮುಂದುವರೆಯಲಿ ಅನ್ನೋದೇ ನಮ್ಮ ಆಶಯ.
ಸಾರಿಗೆ ಇಲಾಖೆಯಲ್ಲಿ ವರ್ಷದ ಸಾಧನೆ..!
– 5800 ಹೊಸ ಬಸ್ ಗಳ ಪೈಕಿ 2862 ಬಸ್ ಖರೀದಿ
– 1844 ನೇಮಕಾತಿ, 553 ಅನುಕಂಪದ ಆಧಾರದ ಮೇಲೆ ನೇಮಕಾತಿ
– ಪಲ್ಲಕ್ಕಿ ಅಶ್ವಮೇಧ ಕ್ಲಾಸಿಕ್, ಕಲ್ಯಾಣ ರಥ, ಅಮೋಘ ವರ್ಷದಂತಹ ಹೊಸ ಬ್ರಾಂಡ್ ಪರಿಚಯ
_ 1277 ಹಳೆ ಬಸ್ ಗಳಿಗೆ ಹೊಸ ರೂಪ ಕೊಟ್ಟು ಆರ್ಥಿಕ ನಷ್ಟ ತಗ್ಗಿಸಿದ್ದು
– ಶಕ್ತಿ ಯೋಜನೆಯಿಂದ ಬಸ್ ಗಳ ಟ್ರಿಪ್ ಗಳ ಸಂಖ್ಯೆ ಹೆಚ್ಚಳ
– ಮೃತಪಟ್ಟ ಸಿಬ್ಬಂದಿಗೆ 1 ಕೋಟಿ ಪರಿಹಾರ
– ಪ್ರಯಾಣಿಕರು ಮೃತಪಟ್ಟರೆ ನೀಡುತ್ತಿದ್ದ ಪರಿಹಾರ 3 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ
– ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆಗೆ ಅವಕಾಶ
– ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಪದ್ಧತಿ
– ಮೊದಲ ಬಾರಿಗೆ ಕಾರ್ಗೋ ಸೇವೆಗೆ ಚಾಲನೆ
– ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ವ್ಯವಸ್ಥೆ