ಬೆಂಗಳೂರು, (www.thenewzmirror.com) ;
ರಾಜಕೀಯ ನಾಯಕರು ತಮ್ಮ ಹೋರಾಟದಲ್ಲಿ, ಪ್ರಚಾರದ ವೇಳೆ ಆಡುವ ಪ್ರತಿಭಾಷಣದ ಮೇಲೆ ಹಿಡಿತ ಇರಬೇಕು. ಯಾರನ್ನೋ ಮೆಚ್ಚಿಸೋಕೆ ಹೋಗಿ ಕೊನೆಗೆ ಅವರೇ ಸಂಕಷ್ಟಕ್ಕಡ ಸಿಲುಕುತ್ತಾರೆ. ಇಂಥ ಘಟನೆಗಳು ಪದೆ ಪದೇ ನಡೆಯುತ್ತಿದ್ದರೂ ರಾಜಕಾರಣಿಗಳು ಮಾತ್ರ ಎಚ್ಚೆತ್ತುಕೊಳ್ಳೊದೇ ಇಲ್ಲ. ಈ ಲೀಸ್ಟ್ ಗೆ ಇದೀಗ ಸಚಿವ ಹಾಗೂ ಸಿಎಂ ಆಪ್ತ ಜಮೀರ್ ಅಹಮದ್ ಹಾಗೂ ಎಂಎಲ್ ಸಿ ಐವಾನ್ ಡಿಸೋಜಾ ಸೇರಿಕೊಂಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋ ರಾಜ್ಯಪಾಲರ ನಡೆ ವಿರೋಧಿಸಿ ಆಗಸ್ಟ್ 19 ರಂದು ರಾಜ್ಯಾದ್ಯಂರ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಆಯಾ ಜಿಲ್ಲೆಗಳಲ್ಲಿ ಆಯಾ ಭಾಗದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ರಾಜ್ಯಪಾಲರ ನಡೆ ಟೀಕಿಸುವ ಭರದಲ್ಲಿ ರಾಜಕೀಯ ಮುಖಂಡರು ನಾಲಿಗೆ ಹರಿ ಬಿಟ್ಟು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಸಚಿವ ಜಮೀರ್ ಅಹಮದ್ ಹಾಗೂ ಮಂಗಳೂರಿನಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಎಂಎಲ್ ಸಿ ಐವಾನ್ ಡಿಸೋಜಾ ವಿರುದ್ಧ ಹಿಂದೂ ಮುಖಂಡ ದೂರು ದಾಖಲು ಮಾಡಿದ್ದಾರೆ.
ಸಿಎಂ ಆಪ್ತ ಸಚಿವರ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವ ಸಚಿವ ಜಮೀರ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕಚೇರಿಯಲ್ಲಿ ಜಮೀರ್ ಹಾಗೂ ಶಾಸಕ ಐವಾನ್ ಡಿಸೋಜಾ ವಿರುದ್ಧ ಹಿಂದೂ ಮುಖಂಡ ತೇಜಸ್ ಗೌಡ ದೂರು ನೀಡಿದ್ದಾರೆ.
ತೇಜಸ್ ಗೌಡ ಎರಡು ಪ್ರತ್ಯೇಕ ದೂರುಗಳಲ್ಲಿ ಸಚಿವ ಜಮೀರ್ ಫ್ರೀಡಂ ಪಾರ್ಕ್‌ನಲ್ಲಿ ಭಾಷಣ ಮಾಡುತ್ತಾ ರಾಜ್ಯದಲ್ಲಿ ಎಲ್ಲಿಯಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಇದು ಪ್ರಚೋದನಾತ್ಮಕ ಹೇಳಿಕೆಯಾಗಿದೆ. ಹಾಗೆನೇ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂ ಎಲ್ ಸಿ ಐವಾನ್ ಡಿಸೋಜಾ ಮಾತನಾಡಿ, ಮುಂದೊಂದು ದಿನ ಬಾಂಗ್ಲಾದೇಶದಲ್ಲಿ ಉಂಟಾದ ಅರಾಜಕತೆ ಇಲ್ಲಿಯೂ ಆಗಬಹುದು ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಅಕ್ಷಮ್ಯ ಅಪರಾಧ ಮತ್ತು ಕಾನೂನು ಬಾಹಿರವಾದ ಹೇಳಿಕೆ. ಹೀಗೆ ಇಂಥ ಪ್ರಚೋದನಾತ್ಮಕ ಹಾಗೂ ಕಾನೂನು ಬಾಹಿರ ಹೇಳಿಕೆ ಕೊಟ್ಟಿರೋರ ಮೇಲೆ ದೂರು ದಾಖಲಿಸುವಂತೆ ತೇಜಸ್ ಗೌಡ ತಮ್ಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.