ಬೆಂಗಳೂರು, (www.thenewzmirror.com);
ಇದೇ ತಿಂಗಳ 28 ರಂದು ನಡೆಯಲಿರುವ UPSC ಪರೀಕ್ಷಾರ್ಥಿಗಳಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ.
ಪ್ರತಿ ಭಾನುವಾರ ಮೆಟ್ರೋ ಟ್ರೈನ್ ಗಳು ಬೆಳಗ್ಗೆ 7 ಗಂಟೆಯಿದ ಕಾರ್ಯಾರಂಭ ಮಾಡುತ್ತಾ ಇತ್ತು. ಆದರೆ ಮೇ 28 ರಂದು UPSC (ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ) ಎಕ್ಸಾಂ ಇರುವುದರಿಂದ ಬೆಳಗ್ಗೆ 7 ರ ಬದಲು ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ಮಾಡಲಿವೆ.

ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ರೋ ಈ ತೀರ್ಮಾನ ಕೈಗೊಂಡಿದ್ದು, ಎಲ್ಲಾ ಟರ್ಮಿನಲ್ ನಿಲ್ದಾಣಗಳಾದ ಬೈಯ್ಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್(ಕಾಡುಗೋಡಿ) ನಿಲ್ದಾಣಗಳಿಂದ ಮೆಟ್ರೋ ಸೇವೆಗಳು ಆರಂಭವಾಗಲಿವೆ.