ಬೆಂಗಳೂರು , (www.thenewzmirror.com ) ;
ಕರ್ನಾಟಕದ ಸಾರ್ವತ್ರಿಕ ಚುನಾವಣೆ ಬೆಳಗ್ಗೆ 7ಗಂಟೆಯಿಂದ ಸಂಜೆ 6 ಗಂಟೆವರೆಗೂ ನಡೆಯಲಿದೆ. ನಿಗಧಿತ ಸಮಯದಲ್ಲಿ ಮತದಾರರು ಮತಚಲಾವಣೆ ಮಾಡಲಿದ್ದು, ತಮ್ಮ ನೆಚ್ಚಿನ ಜನನಾಯಕನ ಆಯ್ಕೆ ಮಾಡಲಿದ್ದಾರೆ.
ರಾಜ್ಯದ ಒಟ್ಟು 224 ಕ್ಷೇತ್ರಗಳಲ್ಲಿ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮತದಾನದ ಎಂದರೇನು.? ಪ್ರಕ್ರಿಯೆ ಹೇಗೆ ನಡೆಯುತ್ತೆ.?
ರಾಜ್ಯದಲ್ಲಿ ಒಟ್ಟು 58,545 ಮತಗಟ್ಟೆಗಳಿವೆ. ಮತದಾನ ಮಾಡುವುದಕ್ಕೂ ಮೊದಲು ಮತದಾರ ಮತಕಟ್ಟೆಗೆ ತಲುಪಬೇಕು. ಅದಾದ ನಂತರ ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮೊದಲನೇ ಹಂತ
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಮತದಾರರು ಪರಿಶೀಲಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ಗುರುತಿನ ಚೀಟಿ ತೋರಿಸಿದ ನಂತರ ಮತ ಚಲಾಯಿಸಬಹುದು. ಅದಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿಯಲು 1950 ಗೆ ಕರೆ ಮಾಡಬಹುದು.
ಎರಡನೇ ಹಂತ
ಮತಗಟ್ಟೆಯೊಳಗೆ ತಲುಪಿದ ನಂತರ, ಅಧಿಕಾರಿಯು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ಗುರುತಿನ ಪುರಾವೆಯನ್ನು ಪರಿಶೀಲಿಸುತ್ತಾರೆ. ನಿಮ ಹೆಸರು ಪಟ್ಟಿಯಲ್ಲಿ ಇದೆ ಎಂದು ಅಧಿಕಾರಿಗೆ ಖಾತ್ರಿ ಆದ ಬಳಿಕ ನಿಮ್ಮ ಬೆರಳಿಗೆ ಶಾಯಿ ಹಾಕುತ್ತಾರೆ ಜತೆಗೆ ಸಹಿಯನ್ನು ತೆಗೆದುಕೊಳ್ಳುತ್ತಾರೆ.

ಮತದಾನ ಮಾಡಿದ ವ್ಯಾಪಾರಿ ಸಜ್ಜನ್ ರಾವ್ ಮೆಹ್ತಾ
ಮೂರನೇ ಹಂತ
ನಿಮ್ಮಬೆರಳಿಗೆ ಶಾಯಿ ಹಾಕಿದ ನಂತರ ಚೀಟಿಯೊಂದನ್ನ ನೀಡುತ್ತಾರೆ. ಅದಾದ ಬಳಿಕ ಮತ್ತೊಬ್ಬ ಅಧಿಕಾರಿ ಬೆರಳಿಗೆ ಹಾಕಿದ ಶಾಯಿಯನ್ನ ಪರೀಕ್ಷಿಸಿ ನಿಮ್ಮಿಂದ ಚೀಟಿಯನ್ನ ಪಡೆಯುತ್ತಾರೆ.
ನಾಲ್ಕನೇ ಹಂತ
ಮೂರು ಹಂತಗಳು ಪೂರ್ಣಗೊಂಡ ನಂತರ ಐದನೇ ಹಂತವೇ ಮತದಾನ. ನಿಮ್ಮಿಂದ ಚೀಟಿ ಹಾಗೂ ಬೆರಳಿಗೆ ಶಾಯಿ ಹಾಕಿದ್ದನ್ನ ಖಚಿತ ಪಡಿಸಿಕೊಂಡ ಬಳಿಕ ಮುಚ್ಚಿಟ್ಟಿರುವ EVM (ವಿದ್ಯುನ್ಮಾನ ಮತದಾನ ಯಂತ್ರ) ಬಳಿ ಹೋಗಿ ಗೌಪ್ಯವಾಗಿ ಮತದಾನ ಮಾಡಬಹುದು. EVM ನಲ್ಲಿ ಅಭ್ಯರ್ಥಿ ಹೆಸರು ಹಾಗೂ ಚಿಹ್ನೆ ಇರುತ್ತದೆ. ನೀವು ಬೆಂಬಲ ಮಾಡುವ ಅಭ್ಯರ್ಥಿಯ ಮುಂದೆ ಬಟನ್ ಒತ್ತುವ ಮೂಲಕ ಮತದಾನ ಮಾಡಬಹುದು.
ಮತದಾನ ಮಾಡಲು ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್
ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್ ಬ್ಯಾಂಕ್
ಅಂಚೆ ಕಚೇರಿ ನೀಡಿದ ಭಾವಚಿತ್ರವಿರುವ ಪಾಸ್ ಬುಕ್
ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
ಡ್ರೈವಿಂಗ್ ಲೈಸನ್ಸ್,
ಪಾನ್ ಕಾರ್ಡ್
ಎನ್ಪಿಆರ್ ಅಡಿಯಲ್ಲಿ ಆರ್ಜಿಐ ನೀಡಿದ ಸ್ಮಾರ್ಟ್ ಕಾರ್ಡ್
ಭಾರತೀಯ ಪಾಸ್ ಪೋರ್ಟ್
ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ
ರಾಜ್ಯ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ
ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು
ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಪತ್ರದ ಮೂಲ ಪ್ರತಿ