ಬೆಂಗಳೂರು, (www.thenewzmirror.com):
ಬಿಎಂಟಿಸಿಯ ಆರ್ಥಿಕ ಸರಿ ಇಲ್ಲ ಅನ್ನೋದನ್ನ ಪದೇ ಪದೇ ತಾನೇ ಸಾಬೀತು ಮಾಡಿಕೊಳ್ಳುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಆಗಸ್ಟ್ ತಿಂಗಳ ವೇತನ ಬಿಡುಗಡೆ ಮಾಡಿದೆ. ಹೀಗಂತ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದ್ದು ಉಳಿದ ಸೆಪ್ಟೆಂಬರ್ ತಿಂಗಳ ವೇತನ ಯಾವಾಗ ಅನ್ನೋ ಪ್ರಶ್ನೆ ಮೂಡುತ್ತಿದೆ
ನಿಗಮ ತನ್ನ ಪತ್ರಿಕಾ ಹೇಳಿಕೆಯಲ್ಲಿ
ಮಾನ್ಯರೆ,
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರಿಗೆ ಆದಾಯ ಮತ್ತು ರಾಜ್ಯ ಸರ್ಕಾರವು ನೀಡಿರುವ ಆರ್ಥಿಕ ನೆರವಿನಿಂದ ಎಲ್ಲಾ ಸಿಬ್ಬಂದಿಗಳಿಗೆ ಪಾವತಿಸಬೇಕಾದ ಆಗಸ್ಟ್-2021 ತಿಂಗಳ ಬಾಕಿ ವೇತನವನ್ನು ದಿನಾಂಕ 21.09.2021 ರಂದು ಪಾವತಿಸಲಾಗಿರುತ್ತದೆ.
ಸದರಿ, ವಿಷಯವನ್ನು ತಮ್ಮ ಮಾಹಿತಿಗಾಗಿ ಸಲ್ಲಿಸಲಾಗಿದೆ.
ವಂದನೆಗಳೊಂದಿಗೆ
ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.