ಬೆಂಗಳೂರು, (www.thenewzmirror.com) :
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಂದ್ರೆ ಅಲ್ಲಿ ಭ್ರಷ್ಟಚಾರಕ್ಕೇನು ಕಮ್ಮಿ ಇಲ್ಲ ಅನ್ನೋ ಆರೋಪ ಇಂದು ನಿನ್ನೆಯದಲ್ಲ.., ಈ ಆರೋಪಕ್ಕೆ ಪುಷ್ಠಿ ನೀಡುವ ಪತ್ರವೊಂದು ಸಿಕ್ಕಿದ್ದು, ಸ್ವತಃ ಸಚಿವರಾದಿಯಾಗಿಯೇ ಭ್ರಷ್ಟಚಾರ ನಡೀತಾ ಇದ್ಯಾ ಅನ್ನೋ ಅನುಮಾನ ಕಾಡ್ತಿದೆ..,
ಇಂಥ ಸುದ್ದಿಯನ್ನ ನಾವು ಹುಟ್ಟಿಸಿಕೊಂಡು ಹೇಳ್ತಾ ಇಲ್ಲ.., ಬದ್ಲಾಗಿ ಪರಿಸರ ಸಚಿವ ಆನಂದ್ ಸಿಂಗ್ ಗೆ ಬರೆದಿರೋ ಪತ್ರವೊಂದು ಇದಕ್ಕೆ ಇಂಬು ನೀಡುತ್ತಿದ್ದು, ಇದರ ಸತ್ಯಾಸತ್ಯತೆ ತನಿಖೆ ನಂತರವಷ್ಟೇ ತಿಳಿಯಬೇಕಿದೆ. ಸುಮಾರು 2 ಪುಟಗಳ ದೂರಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳ ಹಣದಾಸೆಯನ್ನ ಇಂಚಿಚೂ ಬಯಲು ಮಾಡಿದ್ದಾರೆ..,
ಪರಿಸರ ಸಚಿವ ಆನಂದ್ ಸಿಂಗ್ ಅವ್ರಿಗೆ ಅಕ್ಟೋಬರ್ ನಲ್ಲಿ ಪತ್ರ ಬರೆದಿದ್ದು, ಅದರಲ್ಲಿ ಇಲಾಖೆಯ ಭ್ರಷ್ಟಚಾರ ಹಾಗೆನೇ ಲಂಚಬಾಕ ಅಧಿಕಾರಿಗಳ ಹಣದಾಸೆಯನ್ನ ಇಂಚಿಂಚೂ ಬಯಲು ಮಾಡಿದ್ದಾರೆ.
ನೆಲಮಂಗಲ ವ್ಯಾಪ್ತಿಯ ಪರಿಸರ ಮಂಡಳಿಯ ಅಧಿಕಾರಿಗಳಿಬ್ಬರ ವಿರುದ್ಧ ಪೀಣ್ಯ ಕೈಗಾರಿಕೋದ್ಯಮಿ ರಾಜೇಂದ್ರಪ್ರಸಾದ್ ಎಂಬುವರು ಪರಿಸರ, ಜೀವಿಶಾಸ್ತ್ರ ಸಚಿವ ಆನಂದ್‌ಸಿಂಗ್ ಅವರಿಗೆ ದೂರೊಂದನ್ನ ನೀಡಿದ್ದಾರೆ. ಅದರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಭ್ರಷ್ಟಾಚಾರ ಎಳೆಎಳೆಯಾಗಿ ವಿವರಿಸಿದ್ದಾರೆ.
ನೆಲಮಂಗಲದಲ್ಲಿ ಕಚೇರಿ ಹೊಂದಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕೆಲ್ಸ ಮಾಡ್ತಿರೋ ಅಧಿಕಾರಿಗಳು ಹೇಗೆ ಕೈಗಾರಿಕೆ ಆರಂಭಿಸೋಕೆ ಹೋದವರ ಬಳಿ ಹಣವನ್ನ ಪೀಕುತ್ತಾರೆ ಅನ್ನೋದು ಇದೀಗ ರಹಸ್ಯವಾಗಿ ಉಳಿದಿಲ್ಲ..,
ಪೀಣ್ಯದಲ್ಲಿ ನೆಲಮಂಗಲ ಕಚೇರಿ ಇದ್ದು, ಈ ಕಚೇರಿಯ ಅಧಿಕಾರಿಯಾದ ಭೀಮ್ ಸಿಂಗ್ ಗೌಗಿ ಕೈಗಾರಿಕೆಯವರಿಗೆ ಗೂಳಿಯಂತೆ ಗಯಟಯರು ಹಾಕುತ್ತಾ ಮಂಡಳಿಯ ಮೇಲಾಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಲೈಸನ್ಸ್ ನೀಡಿಕೆಯಲ್ಲಿ ಲಕ್ಷಗಟ್ಟಲೇ ಹಣ ವಸೂಲಿ ಮಾಡ್ತಾರೆ ಅಂತ ದೂರಿದ್ದಾರೆ.
ನಾನು ರೆಡ್ ಇಂಕ್‌ನಲ್ಲಿ ಬರೆದರೆ ಕೈಗಾರಿಕೆ ಮುಚ್ಚಬೇಕಾಗುತ್ತದೆ.., ಗ್ರೀನ್ ಇಂಕ್‌ನಲ್ಲಿ ಬರೆದರೆ ಕೈಗಾರಿಕೆ ನಡೆಸಬೇಕಾಗುತ್ತದೆ, ನಾನು ಹೇಳಿದಷ್ಟು ಹಣ ಕೊಟ್ಟರೆ ನಿಮ್ಮ ಕೆಲಸವಾಗುತ್ತದೆ. ನೀವು ಕೊಟ್ಟ ಹಣವನ್ನು ಮಿನಿಸ್ಟರ್, ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ, ಆಡಳಿತಾಧಿಕಾರಿ, ಹಿರಿಯ ಪರಿಸರ ಅಧಿಕಾರಿಗಳಿಗೆ ಕೊಡಬೇಕು. ಒಟ್ಟು ಪ್ಯಾಕೇಜ್ ಇಷ್ಟು ಹಣ ಎಂದು ಕ್ಯಾಲಿಕೇಟರ್ ನಲ್ಲಿ ಒತ್ತು ತೊರಿಸುತ್ತಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
ಹಾಗೆನೇ ಇದೇ ಕಚೇರಿಯಲ್ಲಿ ಕೆಲ್ಸ ಮಾಡುವ ಗುರುಮೂರ್ತಿ ಮತ್ತು ರಾಜಣ್ಣ ಇದ್ದಾರೆ ಇವರು ಗೌಗಿ ಅವರನ್ನೂ ಮೀರಿಸುತ್ತಾರೆ.., ಗುರುಮೂರ್ತಿ ನಿತ್ಯ ಲೈಸನ್ಸ್ ಮಾಡಿಸಿಕೊಡುವುದು.., ಎನ್ ವಿರ್ನಾಮೆಂಟ್ ರಿಪೋರ್ಟ್, ಆಡಿಟ್ ರಿಪೋರ್ಟ್, ಮಂತ್ಲಿ ರಿಟರ್ಸ್ ಅನಾಲಿಸಿಸ್ ರಿಪೋರ್ಟ್, ಪ್ರಾಜೆಕ್ಟ್ ರಿಪೋರ್ಟ್ ಮಾಡಿಸಿಕೊಡುತ್ತೇನೆ ಎಂದು ಕೈಗಾರಿಕೆಯವರುಗಳಿಗೆ ಹೇಳಿಕೊಂಡು ಲಕ್ಷಗಟ್ಟಲೇ ಹಣ ವಸೂಲಿ ಮಾಡಿಕೊಂಡು ಕೊಟ್ಟಿಗಟ್ಟಲೇ ಹಣ ಸಂಪಾದಿಸುತ್ತಿರುವುದು ಇವ್ರ ಕಾಯಕವಾಗಿದೆ ಅಂತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಇವ್ರು ಯಾವುದೇ ಒಂದು ಕೆಲ್ಸ ಮಾಡಬೇಕು ಅಂದ್ರೂ ಅವ್ರಿಗೆ 10 ರಿಂದ 15 ಸಾವಿರ ಹಣ ಲಂಚದ ರೂಪದಲ್ಲಿ ನೀಡ್ಬೇಕು ಅಂತಾನೂ ಉಲ್ಲೇಖಿಸಿದ್ದಾರೆ. ಹಾಗೆನೇ ಪ್ರಾಜೆಕ್ಟ್ ಅಸಿಸ್ಟೆಂಟ್, ಡೇಟಾ ಎಂಟ್ರಿ ಆಪರೇಟರ್‌ಗಳು ದಿನಕ್ಕೆ 50,000 ರು.ಗಳಿಂದ 80,000 ರು.ಗಳವರೆಗೆ ಹಣ ಸಂಪಾದಿಸುತ್ತಿದ್ದಾರೆ. ಕಚೇರಿಗೆ ಹೋದಾಗ ಇಂತಿಷ್ಟೇ ಹಣ ಕೊಡಿ ಎನ್ನುತ್ತಾರೆ. ಇಷ್ಟು ಹಣ ತಂದಿಲ್ಲ ಎಂದರೆ ಬ್ಯಾಂಕ್, ಎಟಿಎಂ ಅಡ್ರೆಸ್‌ಗಳನ್ನು ಅವರೇ ತೋರಿಸುತ್ತಾರೆ. ಅಥವಾ ಗೂಗಲ್ ಪೇ, ಪೋನ್ ಪೇ ಮಾಡಿ ಎನ್ನುತ್ತಾರೆ ಅನ್ನೋದನ್ನೂ ಪತ್ರದಲ್ಲಿ ದೂರಿದ್ದಾರೆ.
ಇನ್ನು ಈ ಪತ್ರವನ್ನ ಗಂಭೀರವಾಗಿ ಪರಿಗಣಿಸಿ, ಇದರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾನೂ ಮನವಿ ಮಾಡಿದ್ದಾರೆ. ಅಷ್ಟೇ ಅಲ್ದೇ ಈ ಪ್ರಕರಣವನ್ನ ಮುಚ್ಚಿಹಾಕೋ ಪ್ರಯತ್ನ ಮಾಡಬೇಡಿ ಅಂತಾನೂ ಮನವಿ ಮಾಡಿದ್ದಾರೆ. ಸದ್ಯ ಆನಂದ್ ಸಿಂಗ್ ಗೆ ಬರೆದಿದ್ದಾರೆ ಎನ್ನಲಾಗಿರೋ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಬೇಕಿದೆ. ಈ ನಿಟ್ಟಿನಲ್ಲಾದ್ರೂ ಸಚಿವರು ದಿಟ್ಟ ಹೆಜ್ಜೆ ಇಡ್ತಾರಾ ಕಾದು ನೋಡ್ಬೇಕು.