ಇವರೇ ನೋಡಿ ಒಕ್ಕಲಿಗ ಸಂಘದ ನೂತನ ನಿರ್ದೇಶಕರು

ಬೆಂಗಳೂರು,(www.thenewzmirror.com):

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಹೊಸದಾಗಿ 35 ನಿರ್ದೇಶಕರು ಆಯ್ಕೆಯಾಗಿದ್ದಾರೆ.

RELATED POSTS

ಎರಡು ವರ್ಷಗಳಿಂದ ನಿರ್ದೇಶಕರು ಇಲ್ಲದೇ ಕೇವಲ ಆಡಳಿತಾಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಿದ್ದ ಒಕ್ಕಲಿಗ ಸಂಘಕ್ಕೆ ಡಿಸೆಂಬರ್ 12 ರಂದು ಚುನಾವಣೆ ನಡೆದಿತ್ತು. ಹಲವು ವರ್ಷಗಳಿಂದ ಅಕ್ರಮಗಳ ಗೂಡು ಅಂತಾನೇ ಖ್ಯಾತಿಗಳಿಸಿದ್ದ ಸಂಘಕ್ಕೀಗ ಹೊಸ ಆಶಾಭಾವನೆ ಮೂಡಿದೆ.

ಮತ ಏಣಿಕಾ ಕೇಂದ್ರದ ಒಂದು ನೋಟ

ಸಾವಿರಾರು ಕೋಟಿ ರೂ. ಮೊತ್ತದ ಆಸ್ತಿ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಹೊಂದಿರುವ ಸಂಘಕ್ಕೆ ಅಭ್ಯರ್ಥಿಗಳು ಜಿಲ್ಲೆ ಹಾಗೂ ಕೆಲವು ಜಿಲ್ಲೆಗಳ ಗುಂಪುಗಳನ್ನು ಆಧರಿಸಿ ನಿರ್ದೇಶಕರನ್ನ ರಚಿಸಿಕೊಂಡು ಅಖಾಡಕ್ಕೆ ಇಳಿದಿದ್ದರು. 13 ಜಿಲ್ಲೆಗಳಲ್ಲಿ 1,049 ಮತಗಟ್ಟೆಗಳು, ಹಾಗೆನೇ 500 ಮತದಾರರಿಗೆ ತಲಾ ಒಂದೊಂದು ಮತಗಟ್ಟೆ ಸ್ಥಾಪಿಸಿ ಚುನಾವಣೆ ನಡೆದಿತ್ತು.

ಒಟ್ಟು 5,20,721 ಮತದಾರರ ಪೈಕಿ ಒಟ್ಟು 3,71,679 ಮಂದಿ ಮತದಾನ ಮಾಡಿದ್ದರು. ಒಟ್ಟು ಶೇ.71 ಮತದಾನವಾಗಿತ್ತು. 13 ಜಿಲ್ಲೆಗಳಿಂದ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ ಒಟ್ಟು 141 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಬೆಂಗಳೂರು ಕ್ಷೇತ್ರ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ)
ಡಾ. ಅಂಜನಪ್ಪ- 68938
ಅಶೋಕ್ ತಮ್ಮಾಜಿ- 61893
ಕೆಂಚಪ್ಪಗೌಡ- 58066
ಆರ್ ಪ್ರಕಾಶ್- 56694
ಎಚ್.ಸಿ ಜಯಮುತ್ತು- 56254
ಹಾಪ್ ಕಾಮ್ಸ್ ದೇವರಾಜು- 55903
ಎಲ್.ಶ್ರೀನಿವಾಸ್- 49217
ಸಿ.ಎಂ ಮಾರೇಗೌಡ- 48492
ರಾಜಶೇಖರಗೌಡ- 46180
ಕೆ.ಎಸ್. ಸುರೇಶ್- 45601
ಉಮಾಪತಿ- 44709
ಚಕ್ಕೆರೆ ವೆಂಕಟರಾಮೇಗೌಡ- 43022
ಹನುಮಂತಯ್ಯ- 41687
ತೌಟನಹಳ್ಳಿ ಪುಟ್ಟಸ್ವಾಮಿ- 41165
ಡಾ. ನಾರಾಯಣಸ್ವಾಮಿ- 40728

ಹಾಸನ ವಿಜೇತರರು ಪಡೆದ ಮತಗಳು

  1. ಸಿ.ಎನ್.ಬಾಲಕೃಷ್ಣ- 32311
  2. ಎಸ್.ಎಸ್.ರಘುಗೌಡ- 30555
  3. ಬಿ.ಪಿ.ಮಂಜೇಗೌಡ- 20388

ಮೈಸೂರು ವಿಜೇತರರು –

  1. ಕೆ.ವಿ.ಶ್ರೀಧರ್: 12267
  2. ಸಿ.ಜಿ.ಗಂಗಾಧರ್: 10174
  3. ಎಂ.ಬಿ.ಮಂಜೇಗೌಡ: 8790

ಮಂಡ್ಯ ವಿಜೇತರರು ಪಡೆದ ಮತಗಳ ಸಂಖ್ಯೆ

  1. ಅಶೋಕ್ ಎಸ್.ಡಿ.ಜಯರಾಮ್- 55721
  2. ಎನ್.ಬಾಲಕೃಷ್ಣ – 38622
  3. ಚಂದ್ರಶೇಖರ್- 36628
  4. ರಾಘವೇಂದ್ರ- 33986

ತುಮಕೂರು ವಿಜೇತರರು ಪಡೆದ ಮತಗಳು

  1. ಹನುಮಂತರಾಯಪ್ಪ – 14901
  2. ಲೋಕೇಶ್ ಡಿ.ನಾಗರಾಜಯ್ಯ- 11027

ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಜೇತರರು ಪಡೆದ ಮತಗಳು

  1. ಡಾ.ಡಿ.ಕೆ.ರಮೇಶ್- 40435
  2. ಟಿ.ಕೋನಪ್ಪರೆಡ್ಡಿ- 32451
  3. ಎಲುವಳ್ಳಿ ಎನ್.ರಮೇಶ್- 24676

ಚಿತ್ರದುರ್ಗ ವಿಜೇತರರು ಪಡೆದ ಮತ

  1. ಜೆ.ರಾಜು- 4074

ದಕ್ಷಿಣ ಕನ್ನಡ ಮತ್ತು ಉಡುಪಿ ವಿಜೇತ-ಪಡೆದ ಮತ

  1. ಡಾ.ಕೆ.ವಿ.ರೇಣುಕಾಪ್ರಸಾದ್- 3309

ಕೊಡಗು ವಿಜೇತ ಪಡೆದ ಮತ
1.ಎಚ್.ಎನ್.ರವೀಂದ್ರ- 9157

ಶಿವಮೊಗ್ಗ ಮತ್ತು ಉತ್ತರ ಕನ್ನಡ ವಿಜೇತ ಪಡೆದ ಮತಗಳು

  1. ಎಸ್.ಕೆ.ಧರ್ಮೇಶ್- 5808

ಚಿಕ್ಕಮಗಳೂರು ವಿಜೇತ ಪಡೆದ ಮತ

  1. ಎ.ಪೂರ್ಣೇಶ್- 20144
ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist