ಕೃಪೆ: Isha Foundation
ಬೆಂಗಳೂರು,(www.thenewzmirror.com) :
ಹಿಂದುಗಳ ಪಾಲಿಗೆ ಮಹಾಶಿವರಾತ್ರಿ ಪವಿತ್ರ ಹಬ್ಬ. ಋತುಮಾನದ ಬದಲಾವಣೆ ಸಾರ ಹೇಳುವ ಹಬ್ಬಕ್ಕೆ ಪುರಾಣದಲ್ಲಿಯೂ ಬೇರೆ ಬೇರೆ ಕತೆಗಳಿವೆ. ಈ ದಿನವೇ ಶಿವನು ತಾಂಡವ ನೃತ್ಯ ಆಡಿದ್ದು ಮತ್ತು ಪಾರ್ವತಿ ದೇವಿಯನ್ನು ವರಿಸಿದ್ದು ಎಂಬು ಉಲ್ಲೇಖ ಸಹ ಪುರಾಣದಲ್ಲಿದೆ. ಜಾಗರಣೆ, ವ್ರತ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದಿನದ ವಿಶೇಷ.
ಕೊಯಂಬತ್ತೂರು
ಮಹಾಶಿವರಾತ್ರಿ ಆಚರಣೆಗೆ ಕೊಯಂಬತ್ತೂರು ಸಿದ್ಧವಾಗಿದೆ. ಇಶಾ ಯೋಗ ಸೆಂಟರ್‌ನಲ್ಲಿ ಮಹಾಶಿವರಾತ್ರಿ ಆಚರಣೆ ನಡೆಯಲಿದೆ. ರ‍್ಯಾಲಿ ಆಫ್ ರಿವರ್ಸ್ ಖ್ಯಾತಿಯ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಇಂದು( ಮಂಗಳವಾರ) ಸಂಜೆಯಿಂದ ಬುಧವಾತ ಬೆಳಗಿನವರೆಗೆ ಮಹಾಶಿವರಾತ್ರಿ ಅದ್ದೂರಿಯಾಗಿ ನಡೆಯಲಿದ್ದು ಲಕ್ಷಾಂತರ ಭಕ್ತಗಣ ಸಾಕ್ಷಿಯಾಗಲಿದೆ.
ಕೊಯಂಬತ್ತೂರಿನ ಬೃಹತ್ ಆದಿಯೋಗಿ ಮೂರ್ತಿಯ ಮುಂದೆ ಲಕ್ಷಾಂತರ ಭಕ್ತರು ಜಮಾಯಿಸಲಿದ್ದಾರೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯೋಗಿ ಮೂರ್ತಿಯನ್ನು ಅನಾವರಣ ಮಾಡಿದ್ದರು. 112 ಅಡಿ ಎತ್ತರದ ಶಿವನ ಮೂರ್ತಿಯನ್ನು ನೋಡಲು ಸಾವಿರಾರು ಜನ ಪ್ರತಿದಿನ ಆಗಮಿಸುತ್ತಿದ್ದು ಸ್ಥಳ ಒಂದು ಪ್ರವಾಸಿ ತಾಣವಾಗಿ ಬದಲಾಗಿದೆ.