ಬೆಂಗಳೂರು,(www.thenewzmirror.com) :
ಸಾರಿಗೆ ಇಲಾಖೆ ಒಂದಲ್ಲಾ ಒಂದು ರೀತಿಯಲ್ಲಿ ಸಿಬ್ಬಂದಿಗೆ ತೊಂದ್ರೆ ಕೊಡ್ತಾನೇ ಇರ್ತಿದೆ.., ಇದಕ್ಕೆ ಮತ್ತೊಂದು ಸೇಪರ್ಡೆ ಪ್ರಯಾಣಿಕ್ರ ಲಗೇಜ್ ಅನ್ನ ನೋಡಿಕೊಳ್ಳೋದು.., ಹೌದು, ಈ ರೀತಿಯ ಸುತ್ತೋಲೆಯನ್ನ ಹೊರಡಿಸಿದ್ದು, ನಿರ್ವಾಹಕರು(ಕಂಡಕ್ಟರ್) ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಒಂದು ಬಸ್ ಡಿಪೋದಿಂದ ಆಚೆ ಬಂದ್ರೆ ಮತ್ತೆ ಡಿಪೋಗೆ ಹೋಗುವ ವರೆಗೂ ಅದ್ರ ಸಂಪೂರ್ಣ ಜವಾಬ್ದಾರಿಯನ್ನ ಡ್ರೈವರ್ ಕಂಡಕ್ಟರ್ ಗಳೇ ಹೊತ್ತಿರ್ತಾರೆ.., ರಾತ್ರಿ ಪಾಳಿಯಲ್ಲಿ ಓಡಾಡೋ ಬಸ್ ಗಳಲ್ಲಿ ಏನಾದ್ರೂ ಹೆಚ್ಚು ಕಮ್ಮಿ ಆದ್ರೂ ಅದಕ್ಕೂ ಅವ್ರೇ ಜವಾಬ್ದಾರರು.., ಇಷ್ಟೆಲ್ಲಾ ಜವಾಬ್ದಾರಿಗಳ ನಡುವೆ ಮತ್ತೊಂದು ಅವೈಜ್ಞಾನಿಕ ಜವಾಬ್ದಾರಿ ನೀಡಿದೆ.., ಅದು ಪ್ರಯಾಣಿಕರ ಲಗೇಜ್ ಗಳನ್ನ ನೋಡಿಕೊಳ್ಳುವುದು..,
ಇದೇ ತಿಂಗಳ 6 ರಂದು KSRTC ಹೊರಡಿಸಿರೋ ಆದೇಶದಲ್ಲಿ ಇಂಥ ಹುಚ್ಚು ಆದೇಶ ಹೊರಡಿಸಿದ್ದು, ಇದ್ರಲ್ಲಿ ಪ್ರಯಾಣಿಕರು ತರುವ ಲಗೇಜ್ ಗಳನ್ನ ನೋಡಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ..,
ಅವುಗಳು ಏನು ಅನ್ನೋದನ್ನ ನೋಡುವುದಾದರೆ.., ರಾತ್ರಿ ಪ್ರಯಾಣದ ವೇಳೆಯಲ್ಲಿ ನಿರ್ವಾಹಕರು ತಾವು ಕರ್ತವ್ಯ ನಿರ್ವಹಿಸುವ ಬಸ್ ಗಳಲ್ಲಿ ಪ್ರಯಾಣಿಕರ ಲಗೇಜ್ ಬಗ್ಗೆ ಕಾಳಜಿ ವಹಿಸಬೇಕು.., ರಾತ್ರಿ ವೇಳೆಯಲ್ಲಿ ಪ್ರಯಾಣಿಕರಿಗೆ ಅವರ ಬೆಲೆಬಾಳುವ ವಸ್ತುಗಳು ಹಾಗೂ ಲಗೇಜ್ ಗಳ ಬಗ್ಗೆ ಗಮನವಿಡುವಂತೆ ಬಸ್ಸಿನಲ್ಲಿ ಕಡ್ಡಾಯವಾಗಿ ಅನೌನ್ಸ್ ಮಾಡಬೇಕು.., ನಿರ್ವಾಹಕರು ಟಿಕೇಟ್ ವಿತರಣೆ ಮಾಡಿ ದೂರ ಮಾರ್ಗಗಳಲ್ಲಿ ಹೆಚ್ಚಿನ ಅವಧಿಯಲ್ಲಿ ವಿಶ್ರಾಂತರಾಗಿರುವುದರಿಂದ ಪ್ರಯಾಣಿಕ ವಸ್ತುಗಳ ಬಗ್ಗೆಯೂ ನಿಗಾವಹಿಸುವುದು ಅವಶ್ಯವಿರುತ್ತದೆ.., ಹಾಗೆನೇ ನಿರ್ದಿಷ್ಟ ಬಸ್ ನಿಲ್ದಾಣಕ್ಕಿಂದ ಮುಂಚಿತವಾಗಿ ಸ್ಟಾಪ್ ಗಳಲ್ಲಿ ಇಳಿದುಹೋಗುವ ಪ್ರಯಾಣಿಕ್ರು ಕೊಂಡೊಯ್ಯುವ ಲಗೇಜ್ ಗಳ ಬಗ್ಗೆ ನಿಗಾ ಇಡಬೇಕು ಎಂದು ಸುತ್ತೋಲೆಯಲ್ಲಿ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಲೇಗೇಜ್ ಗಳ ಕಳೆದುಹೋಗುತ್ತಿರೋದ್ರ ಬಗ್ಗೆ ನಿಗಮಕ್ಕೆ ಸಾಕಷ್ಟು ದೂರುಗಳು ಕೇಳಿ ಬರ್ತಾ ಇದ್ವಂತೆ.., ಹೀಗಾಗಿ ಇಂಥ ಸುತ್ತೋಲೆ ಅನ್ನೋದು KSRTC ಎಂಡಿ ಅವ್ರ ವಾದ..,